ತೂಕವನ್ನೂ ಇಳಿಸುವ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಪರಿಣಾಮಕಾರಿ ಪಾನೀಯದ ಡಯಟ್ ಇಲ್ಲಿದೆ. ಗ್ರೀನ್ ಟೀಯಿಂದ ತೂಕ ಕಡಿಮೆಮಾಡಿಕೊಳ್ಳುವುದರೊಂದಿಗೆ ತ್ವಚೆಯ ಕಾಂತಿಯನ್ನೂ ಹೆಚ್ಚಿಸಿಕೊಳ್ಳಬಹುದು. ಪೋಷಕಾಂಶಗಳ ಆಗರ ಹಸಿರು ಟೀ ನೋಡಲು ಮಾತ್ರ ಹಸಿರಾಗಿರದೆ ದೇಹವನ್ನೂ ಹಸಿರುಗೊಳಿಸಲು ಸಮೃದ್ಧವಾಗಿದೆ. ಇದರಲ್ಲಿರುವ ಫ್ಲೇವನಾಯ್ಡ್, ಕ್ಯಾಟೆಚಿನ್ ಎಂಬ ಪಾಲಿಫಿನಾಲು (polyphenols) ಗಳು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ಮಾಡುತ್ತವೆ.
ಗ್ರೀನ್ ಟೀ ಸೇವನೆಯಿಂದ ಹೆಚ್ಚು ತಿನ್ನುವುದನ್ನು ತಡೆದು ಹಸಿವನ್ನು ನಿಯಂತ್ರಿಸಬಹುದು. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೊತ್ತು ಗ್ರೀನ್ ಟೀ ಸೇವನೆಯಿಂದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಬೇಕೆಂದರೆ ಗೋಧಿ ಬ್ರೆಡ್, ತರಕಾರಿ ಸಲಾಡ್ ಮತ್ತು ಗ್ರೀನ್ ಟೀ ಡಯಟ್ ಪದ್ಧತಿಯನ್ನು ಅನುಸರಿಸಬಹುದು.
ಬುದ್ಧಿಮತ್ತೆಗೆ ಚುರುಕು ಮುಟ್ಟಿಸಲು ಕೊಂಚವೇ ಪ್ರಮಾಣದ ಕೆಫೇನ್ ಬೇಕು. ಹಸಿರು ಟೀಯಲ್ಲಿ ಇದು ಅತ್ಯಂತ ಸಮರ್ಪಕ ಪ್ರಮಾಣದಲ್ಲಿರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚಿಸಲು ಇದು ಹೊರಡಿರುವ ನ್ಯೂರಾನ್ ಗಳೆಂಬ ನರವ್ಯವಸ್ಥೆಯ ಕಣಗಳು ನೆರವಾಗುತ್ತವೆ. ಆದರೆ ಕಾಫಿಯಲ್ಲಿರುವ ಕೆಫೀನ್ ಆಗಾಧ ಪ್ರಮಾಣದಲ್ಲಿದ್ದು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದಂತೆ ಹರಿದು ಬರುವುದರಿಂದ ಒಳ್ಳೆಯದಕ್ಕಿಂತ ಕೆಡಕು ಮಾಡುವುದೇ ಹೆಚ್ಚು.
ನಮ್ಮ ದೇಹದ ಎಲ್ಲಾ ಅಂಗಗಳ ಬೆಳವಣಿಗೆಗೆ ಒಂದು ಮಿತಿಯಿದೆ. ಆದರೆ ಕೆಲವು ಕೋಶಗಳು ಅನಿಯಂತ್ರಿತವಾಗಿ ಬೆಳವಣಿಗೆಯಾಗುವ ಮೂಲಕ ಕ್ಯಾನ್ಸರ್ ರೋಗವನ್ನು ಹುಟ್ಟುಹಾಕುತ್ತವೆ. ಈ ಬೆಳವಣಿಗೆಗೆ ಫ್ರೀ ರ್ಯಾಡಿಕಲ್ ಎಂಬ ಕಣಗಳು ಕಾರಣವೆಂದು ಇತ್ತೀಚೆಗೆ ತಿಳಿದುಬಂದಿದೆ. ಹಸಿರು ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಈ ಕಣಗಳನ್ನು ಹಿಮ್ಮೆಟ್ಟಿಸಿ ಕ್ಯಾನ್ಸ್ರರ್ ತಗಲುವ ಸಂಭವವನ್ನು ಕಡಿಮೆಗೊಳಿಸುತ್ತವೆ.ವಿಶೇಷವಾಗಿ ಸ್ತನಕ್ಯಾನ್ಸರ್, ಕರುಳು ಕ್ಯಾನ್ಸರ್ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ಸಮರ್ಥವಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.
ಗ್ರೀನ್ ಟೀಯಲ್ಲಿರುವ ಅಂಶಗಳು ದೇಹದಲ್ಲಿನ ರೋಗನಿರೋಶಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ಗ್ರೀನ್ ಟೀ ರಕ್ತದಲ್ಲಿನ ಕೆಟ್ಟ ಅಂಶವನ್ನು ತೊಲಗಿಸುವುದರಿಂದ ತ್ವಚೆಯನ್ನು ಒಳಗಿನಿಂದಲೇ ಸಂರಕ್ಷಿಸುತ್ತದೆ. ಗ್ರೀನ್ ಟೀ ಯಿಂದ ಮೊಡವೆ ಮತ್ತು ಸುಕ್ಕು ಬೇಗನೆ ಮೂಡುವುದನ್ನೂ ತಡೆಯಬಹುದು.