News Kannada

ಆರೋಗ್ಯ

ಆರೋಗ್ಯವಂತ ದೇಹಕ್ಕೆಸಾಕಷ್ಟು ಪ್ರಮಾಣದ ನೀರು ಅಗತ್ಯ - 1 min read

 ಆರೋಗ್ಯವಂತ ದೇಹಕ್ಕೆಸಾಕಷ್ಟು ಪ್ರಮಾಣದ ನೀರು ಅಗತ್ಯ

ಆರೋಗ್ಯವಂತ ದೇಹ ಹೊಂದಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದಲ್ಲಿ ಅಂತರ್ಗತವಾದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. ನೀರನ್ನು ಯಥೇಚ್ಛ ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟದಂತೆ ಸುಂದರವಾಗಿಡುತ್ತದೆ.


 ಮೂತ್ರಪಿಂಡದ ಕಲ್ಲುಗಳನ್ನು ಮತ್ತು ದೇಹದಲ್ಲಿ ನೀರಿನ ಇಂಗುವಿಕೆ ಸಮಸ್ಯೆಗೆ ನೀರು ಕುಡಿಯುವಿಕೆಯಿಂದ ಸಮಸ್ಯೆ ಸಿಗುತ್ತದೆ. ನೀರು ನಮ್ಮ ಬಾಯಾರಿಕೆಯನ್ನು ನೀಗಿಸುತ್ತದೆ ಮತ್ತು ಹಸಿವನ್ನು ಕೂಡ ಇಂಗಿಸುತ್ತದೆ.
 
ಜಗತ್ತಿನಲ್ಲಿ ಅಗ್ಗವಾಗಿ ಸಿಗುವ ವಸ್ತು ನೀರೊಂದೇ ಆಗಿರುವುದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ನೀವು ಯಾವುದಾದರೂ ತಂಪು ಪಾನೀಯ ಕುಡಿಯಬೇಕೆಂದು ಭಾವಿಸಿದ್ದರೆ ಕೂಡಲೇ ಅದಕ್ಕೆ ಬ್ರೇಕ್ ಹಾಕಿ. ಬದಲಿಗೆ ನೀರನ್ನು ಕುಡಿಯಿರಿ. ನಿಮಗೆ ನೀರು ಕುಡಿಯುವುದು ಕೆಲವು ಬಾರಿ ಇಷ್ಟವಾಗದಿದ್ದರೆ ಮಜ್ಜಿಗೆ ಕುಡಿಯಿರಿ.ಹಸಿವಾದ ಒಂದು ಲೋಟ ಮಜ್ಜಿಗೆ ಕುಡಿದರೆ ಹಸಿವು ಸ್ವಲ್ಪ ಮಟ್ಟಿಗೆ ಶಮನವಾಗುತ್ತದೆ. ಇದು ಪೌಷ್ಠಿಕಾಂಶದಿಂದಲೂ ಕೂಡಿರುತ್ತದೆ.

ಮನುಷ್ಯನ ದೇಹಕ್ಕೆ ಆಮ್ಲಜನಕ ಬಿಟ್ಟರೆ ಅತಿ ಅವಶ್ಯಕವಾದದ್ದು ನೀರು. ಶರೀರದಲ್ಲಿ ನೀರು ಕಡಿಮೆಯಾದರೆ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ಇನ್ನು ಮುಂದೆಯಾದರು ನೀರಿನ ಮಹತ್ವವನ್ನು ಅರಿತರೆ ಕಾಯಿಲೆಗಳು ನಮ್ಮಿಂದ ಶಾಶ್ವತವಾಗಿ ದೂರ ಉಳಿಯುತ್ತವೆ.

ನೀರು ಅಮೃತಕ್ಕೆ ಸಮಾನ. ಪ್ರತಿದಿನ 12 ಲೋಟ ನೀರು ಕುಡಿಯಿರಿ. ಒಂದೇ ಬಾರಿಗೆ ಕುಡಿಯಬಾರದು. ಆಗಾಗ ಸೇವಿಸಿ.  ದಿನಕ್ಕೆ ಕನಿಷ್ಠ 12 ಲೋಟ, ಗರಿಷ್ಠ 16 ಲೋಟ ಮೀರದಂತೆ ಕುಡಿಯಬೇಕು. ಬೆಳಗ್ಗೆ ಎದ್ದ ಕೂಡಲೇ 2 ಲೋಟ, ಮಲಗುವ ಮುನ್ನ 2 ಲೋಟ ನೀರು ಕುಡಿಯಬೇಕು. ಹೆಚ್ಚು ಬಾಯಾರಿಸುವ ಮುನ್ನವೇ ನೀರನ್ನು ಕುಡಿದರೆ ಒಳ್ಳೆಯದು. ಊಟದ ಮಧ್ಯೆ ಆಗಾಗ ನೀರು ಕುಡಿಯಬೇಡಿ. ಮಲಬದ್ಧತೆಯಿಂದ ನರಳುತ್ತಿರುವವರು ನೀರನ್ನು ಹೆಚ್ಚಾಗಿ ಸೇವಿಸಿ. ಸ್ವಲ್ಪ ಹೊತ್ತು ವಾಕ್ ಮಾಡಿ.

See also  ಮಾನಸಿಕ ಆರೋಗ್ಯಕ್ಕೂ ಶಿಸ್ತು ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು