News Kannada

ಆರೋಗ್ಯ

ನಕ್ಕು ಆರೋಗ್ಯ ವೃದ್ಧಿಸಿಕೊಳ್ಳಿ.. - 1 min read

ನಕ್ಕು ಆರೋಗ್ಯ ವೃದ್ಧಿಸಿಕೊಳ್ಳಿ..

ನಾವೆಲ್ಲರೂ ನಗುನಗುತ್ತಾ ದಿನಕಳೆಯಬೇಕೆಂದುಕೊಳ್ಳುತ್ತೇವೆ. ಬೇರೆಯವರು ನಗುನಗುತ್ತಾ ಇರುವುದನ್ನು ಕಂಡು ನೋಡಪ್ಪಾ ಆತ ದಿನಾಲೂ ನಗುತ್ತಲೇ ಇರುತ್ತಾನೆ. ಇದ್ರೆ ಅವನ ಹಾಗೆ ಇರಬೇಕು ಎಂದುಕೊಳ್ಳುತ್ತೇವೆ.

ಹಾಗೆ ನೋಡಿದರೆ ನಗು ಎಂಬುದು ಹಣ ನೀಡಿ ಪಡೆಯುವಂತಹದ್ದಲ್ಲ. ಅದನ್ನು ನಾವು ನಮ್ಮಿಂದಲೇ ಪಡೆಯುವಂತಹದ್ದು. ಇವತ್ತು ನಗುವನ್ನು ಬಲತ್ಕಾರವಾಗಿ ಪಡೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಅದಕ್ಕಾಗಿಯೇ ನಗರ ಪ್ರದೇಶಗಳಲ್ಲಿ ಕ್ಲಬ್ ಹುಟ್ಟಿಕೊಂಡಿವೆ. ಸದಾ ದುಡಿಮೆಯಲ್ಲಿಯೇ ಇರುವವರು ಕ್ಲಬ್ ಗೆ ಹೋಗಿ ನಕ್ಕು ಬರುವಂತಹ ಪರಿಸ್ಥಿತಿ ಬಂದೊದಗಿದೆ.

ಇವತ್ತಿನ ಯಾಂತ್ರಿಕ ಬದುಕು ದೈವದತ್ತವಾಗಿ ಬಂದ ನಗುವನ್ನು ನುಂಗಿ ಹಾಕುತ್ತಿದೆ. ಹಣದ ವ್ಯಾಮೋಹದಲ್ಲಿ ತೊಡಗಿರುವ ಮಂದಿ ಸದಾ ದುಡಿಮೆಯಲ್ಲಿಯೇ ತೊಡಗಿರುತ್ತಾರೆ. ಕೆಲಸ ಕಾರ್ಯಗಳಲ್ಲಿ ಲೀನವಾಗಿರುವ ಕಾರಣ ನಗುವುದಕ್ಕೂ ಸಮಯ ಇಲ್ಲದಾಗಿದೆ. ಒತ್ತಡ, ಆತಂಕ, ಕಳವಳ, ಪೈಪೋಟಿಗಳ ನಡುವೆ ನಗು ತನ್ನಿಂದ ತಾನೇ ದೂರ ಸರಿದು ಬಿಟ್ಟಿದೆ. ಹಣದಿಂದಲೇ ಎಲ್ಲವನ್ನೂ ಅಳೆಯುವ ಕೆಟ್ಟ ಸಂಸ್ಕೃತಿಯಿಂದಾಗಿ ನಕ್ಕು ಮಾತನಾಡಿಸುವ ಸಂಪ್ರದಾಯ ದೂರವಾಗಿದ್ದು, ನಗು ಸಹ ವ್ಯವಹಾರಿಕ ಎಂಬಂತೆ ಭಾಸವಾಗ ತೊಡಗಿದೆ. ಇವತ್ತಿಗೂ ಅಷ್ಟೆ. ನಗುವಿನಿಂದ ನಮಗಿರುವ ಉಪಯೋಗದ ಬಗ್ಗೆ  ಬಹಳಷ್ಟು ಮಂದಿ ತಿಳಿದೇ ಇಲ್ಲ. ಹಾಗಾಗಿ ಅವರು ಒಂದಲ್ಲಾ ಒಂದು ರೀತಿಯಲ್ಲಿ ಸೋಲುತ್ತಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವವರಿಗೆ ನಗುವೂ ಒಂದು ಬಂಡವಾಳವೇ…

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿದ್ದೀರಿ ಅಂದುಕೊಳ್ಳಿ. ನಿಮ್ಮಲ್ಲಿಗೆ ಬರುವ ಗ್ರಾಹಕರೊಂದಿಗೆ ನಗು ಮುಖದಿಂದ ವರ್ತಿಸದೇ ಹೋದರೆ ಗ್ರಾಹಕರು ಖಂಡಿತಾ ಮತ್ತೊಮ್ಮೆ ನಿಮ್ಮ ಬಳಿಗೆ ಬರಲಾರರು. ಹೀಗಾದರೆ ನಷ್ಟ ಹೊಂದುವುದು ಗ್ಯಾರಂಟಿ. ನಗು ನಮ್ಮ ಆರೋಗ್ಯದಲ್ಲಿಯೂ ಸಾಕಷ್ಟು ಉಪಯೋಗಕ್ಕ ಬರುತ್ತದೆ. ಶರೀರದಲ್ಲಿರುವ ಎಂಡಾರ್ಫಿನ್ಸ್ ಎಂಬ ರಾಸಾಯನಿಕ ಕಣಗಳು ನಗುವುದರಿಂದ ಅಧಿಕವಾಗಿ ಬಿಡುಗಡೆ ಹೊಂದುತ್ತದೆ. ಈ ರಾಸಾಯನಿಕ ಶರೀರದಲ್ಲಿರುವ ನೋವುಗಳನ್ನು  ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಎಂಡಾರ್ಫಿನ್ಸ್ ರಾಸಾಯನಿಕಕ್ಕೆ ಮಾಂಸ ಖಂಡಗಳ, ಕೀಲು, ತಲೆ ನೋವನ್ನು ಕಡಿಮೆ ಮಾಡುವ ಶಕ್ತಿಯಿದೆ.

ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗೆ ಮಾರು ಹೋಗದೆ, ನಗುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇ ಆದರೆ ನಿದ್ದೆ ತನ್ನಿಂದ ತಾನಾಗಿಯೇ ಬರುತ್ತದೆ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಒತ್ತಡದಿಂದ ಬರುತ್ತವೆ. ನಗುವುದರಿಂದ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತ ಸಂಚಾರ ಅಧಿಕವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಖಿನ್ನತೆ, ಒತ್ತಡ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆಂದು ಸೈಕೋನ್ಯೂರೋ ಇಮ್ಯೂನಾಲಜಿಸ್ಟ್ಗಳ ಪರಿಶೋಧನೆಗಳಲ್ಲಿ ಬೆಳಕಿಗೆ ಬಂದಿದ್ದು, ನಗುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ನಮ್ಮ ಶರೀರದೊಳಗೆ ಪ್ರವೇಶಿಸಿ ರೋಗ ಹರಡುವ ಬ್ಯಾಕ್ಟಿರಿಯಾಗಳನ್ನು ಸಮರ್ಥವಾಗಿ ನಾಶಮಾಡುತ್ತದೆ.

ನಗು ನಮ್ಮ ಅಂತರ್ಗತ ಅವಯವಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅಸ್ತಮಾ, ಬ್ರಾಂಕೈಟಿಸ್ ರೋಗಿಗಳಿಗೆ ಒಳ್ಳೆಯ ವ್ಯಾಯಾಮವಾಗಿದ್ದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ನಗು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿ ವೃದ್ದಿಸುವಲ್ಲಿಯೂ ಸಹಕಾರಿ. ನಗು ಮುಖಕ್ಕೊಂದು ವ್ಯಾಯಾಮವೂ ಹೌದು. ಇಷ್ಟೆಲ್ಲವನ್ನು ತಿಳಿದ ಮೇಲೆ ಇನ್ಯಾಕೆ ತೆಪ್ಪಗಿದ್ದೀರಾ? ನಕ್ಕುಬಿಡಿ…. ಆದರೆ ನೆನಪಿರಲಿ ಇನ್ನೊಬ್ಬರನ್ನು ಅಣಕಿಸಿ ನಗುವ ಪ್ರಯತ್ನ ಮಾಡಬೇಡಿ. ಅದು ಖಂಡಿತಾ ಒಳ್ಳೆಯದಲ್ಲ.

See also  ಪಾಲಕ್ ಎಂಬ ಆರೋಗ್ಯ ಪಾಲಕ ಸೊಪ್ಪು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು