News Kannada
Wednesday, July 06 2022

ಆರೋಗ್ಯ

ಪಾದದ ಬಿರುಕಿಗೆ ತಲೆಕೆಡಿಸಿಕೊಳ್ಳೋದ್ಯಾಕೆ? - 1 min read

Photo Credit :

ಪಾದದ ಬಿರುಕಿಗೆ ತಲೆಕೆಡಿಸಿಕೊಳ್ಳೋದ್ಯಾಕೆ?

ನಾನು ಎಲ್ಲಾ ರೀತಿಯ ಕ್ರೀಮ್ ಹಾಕಿದೆ ಆದರೂ ಏನು ಪ್ರಯೋಜನವಾಗಿಲ್ಲ. ಪಾದದ ಬಿರುಕು ಮಾತ್ರ ಹೋಗುತ್ತಿಲ್ಲ ಹೀಗೆಂದು ಮಾತನಾಡುವವರನ್ನು ನಾವು ಆಗಾಗ್ಗೆ ಕಾಣುತ್ತಿರುತ್ತೇವೆ. ಎಲ್ಲಾ ಸುಂದರವಾಗಿದ್ದು ಪಾದದಲ್ಲಿ ಬಿರುಕಿದ್ದರೆ ಹೇಗೆ? ಅದು ನಮ್ಮ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆಯಿದ್ದಂತೆ. ಜೊತೆಗೆ ಮುಜುಗರವೂ ಹೌದು.

ಚರ್ಮ, ಕೈಕಾಲು, ಬೆರಳು, ಮುಖ ಎಲ್ಲಾ ಚೆನ್ನಾಗಿದ್ದು ಪಾದದಲ್ಲಿ ತಾನೆ ಬಿರುಕು? ಪರ್ವಾಗಿಲ್ಲ ಹಾಗೆಂದು ಸುಮ್ಮನಿರಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಮಂದಿ ಬಿರುಕು ಮುಚ್ಚುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ.

ಹಾಗೆ ನೋಡಿದರೆ ಇದು ಕೇವಲ ಒಬ್ಬರದೋ, ಇಬ್ಬರದೋ ಸಮಸ್ಯೆ ಅಲ್ಲ. ಬಹುತೇಕ ಮಂದಿ ಈ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಈ ಸಮಸ್ಯೆಗೆ ಪರಿಹರಿಸಲು ಮಾಡಿದ ಪ್ರಯತ್ನವೂ ಫಲ ಕೊಟ್ಟಿರುವುದಿಲ್ಲ. ಹೀಗಾಗಿ ಯಾವುದಾದರು ಕಾರ್ಯಕ್ರಮಕ್ಕೆ ಹೋದಾಗ ಅಯ್ಯೋ ನನ್ನ ಕಾಲನ್ನು ನೋಡಿ ಬಿಟ್ಟರೆ ಎಂಬ ಕೀಳರಿಮೆ ಕಾಡುವುದುಂಟು.

ಹಳ್ಳಿಗಳ ಗದ್ದೆ, ಹೊಲ, ದನದ ಕೊಟ್ಟಿಗೆಗಳಲ್ಲಿ, ತೋಟಗಳಲ್ಲಿ  ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಅಧಿಕ ಪ್ರಮಾಣದಲ್ಲಿರುತ್ತದೆ. ಆದರೆ ಪಾದಗಳಲ್ಲಿನ ಬಿರುಕು ತಲೆಕೆಡಿಸಿಕೊಳ್ಳುವಷ್ಟು ಸಮಸ್ಯೆ ಅಲ್ಲ. ಬಹಳಷ್ಟು ಮಂದಿ ಪಾದಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಹಾಗಾಗಿ ಈ ಸಮಸ್ಯೆ ಕಾಡುತ್ತದೆ ಅಷ್ಟೆ ಎನ್ನುತ್ತಾರೆ ತಜ್ಞ ವೈದ್ಯರು. ಅಷ್ಟೇ ಅಲ್ಲ ಪಾದದ ರಕ್ಷಣೆಗೋಸ್ಕರ ಒಂದಷ್ಟು ಸಲಹೆಗಳನ್ನೂ ನೀಡುತ್ತಾರೆ. ಅವರು ನೀಡುವ ಸಲಹೆಗಳು ಹೀಗಿವೆ.

ಪಾದಗಳನ್ನು ಹೆಚ್ಚಾಗಿ ನೀರಿನಲ್ಲಿ ನೆನೆಯಲು ಬಿಡಬಾರದು. ಸಾಧ್ಯವಾದಷ್ಟು ನೀರಿನಿಂದ ದೂರವಿರಬೇಕು.  ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ತೊಳೆದು ಯಾವುದಾದರು ತೈಲ ಅಥವಾ ಕ್ರೀಮ್ ಅನ್ನು ಬಳಸಬೇಕು.  ಸಾಮಾನ್ಯವಾಗಿ ಪಾದದಲ್ಲಿ ಕೊಳೆಯಿದ್ದರೆ ಮೊದಲು ಪಾದಗಳಿಗೆ ನಿಂಬೆಹಣ್ಣು ರಸ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೆಯೇ ಬಿಟ್ಟು ಆ ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ಪಾದಗಳಿಗೆ ಅಂಟಿದ ಕೊಳೆ ಹೋಗುತ್ತದೆ.

ಪಾದಗಳಲ್ಲಿ ಬಿರುಕು ಕಂಡು ಬಂದರೆ ವೆಜಲೈನ್, ಪೆಟ್ರೋಲಿಯಂ ಜೆಲ್ಲಿಯಂತಹ ಮುಲಾಮು ಹಚ್ಚಬೇಕು. ರೋಸ್ ಲಾಟರ್ ಅಲ್ಮಾಂಡ್ ಆಯಿಲ್ ಅನ್ನು ಬೆರೆಸಿ ಪಾದಗಳಿಗೆ ಲೇಪಿಸುವುದರಿಂದ ಪಾದಗಳು ಮೃದುವಾಗುತ್ತವೆ. ಪಾದಗಳಲ್ಲಿ ಬಿರುಕಿನಿಂದಾಗಿ ನೋವುಗಳು ಕಾಣಿಸಿಕೊಂಡಾಗ ಬಿಸಿ ನೀರಿಗೆ ಉಪ್ಪು, ನಿಂಬೆರಸವನ್ನು ಬೆರೆಸಿ ಅದರಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಪಾದಗಳನ್ನಿಟ್ಟರೆ ನೋವು ಕಡಿಮೆಯಾಗುತ್ತದೆ. ಪಾದಗಳಿಗೆ ದಿನವೂ ಅರಿಶಿನ ಲೇಪಿಸುವುದರಿಂದ ಫಂಗಸ್ ಕಡಿಮೆಯಾಗಿ ಹೊಳಪು ಬರುತ್ತದೆ.

ಒರಟಾದ ಚಪ್ಪಲಿ, ಶೂ ಬಳಸುವುದರಿಂದಲೂ ಪಾದಗಳು ಬಿರುಕು ಬಿಡುವ ಸಾಧ್ಯತೆಯಿದ್ದು, ಯಾವಾಗಲೂ ಮೃದುವಾದ ಚಪ್ಪಲಿಗಳನ್ನೇ  ಬಳಸುವುದು ಒಳ್ಳೆಯದು. ಸ್ನಾನಕ್ಕೆ ಮುನ್ನ ಪಾದಗಳಿಗೆ ಕಡಲೆಹಿಟ್ಟು ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ ಪಾದಗಳ ಮೃದುತ್ವ ಉಳಿಸಿಕೊಳ್ಳಬಹುದು. ಮೆಂಥಾಲಿನಿಂದ ಕೂಡಿದ ಕ್ರೀಮ್ ಪಾದಗಳಿಗೆ ಹಚ್ಚಿದಲ್ಲಿ ಪಾದಗಳು ಮೃದುವಾಗಿಯೂ ದುರ್ಗಂಧ ರಹಿತವಾಗಿರುತ್ತವೆ.

ಉಗುರು ಬೆಚ್ಚಗಿನ ನೀರಿನಲ್ಲಿ ಶಾಂಪೂ ಬೆರೆಸಿ ಅದರಲ್ಲಿ 10 ನಿಮಿಷಗಳ ಕಾಲ ಕಾಲನ್ನಿರಿಸಿ ನಂತರ ಮೆತ್ತನೆಯ ಬ್ರಷ್ ನಿಂದ ಉಜ್ಜಿದಲ್ಲಿ ಪಾದಗಳಲ್ಲಿ ಹಿಡಿದುಕೊಂಡಂತಹ ಅಂಟು ಕೊಳೆಗಳು ಹೋಗಿ ಶುಭ್ರವಾಗುತ್ತವೆ. ಪಾದಗಳಿಗೆ ಫಂಗಸ್ ಇನ್ಪೆಕ್ಷನ್ ಇದ್ದ ಸಂದರ್ಭ ಸ್ನಾನದ ನಂತರ ಪಾದಗಳನ್ನು ಶುಭ್ರವಾದ ಬಟ್ಟೆಯಿಂದ ಒರೆಸಿ  ಆ್ಯಂಟಿ ಫಂಗಸ್ ಕ್ರೀಮ್ ಹಚ್ಚಬೇಕು. ಹೀಗೆ ಮೇಲಿನ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಪಾದಗಳನ್ನು ಕಾಡುವ ಬಿರುಕಿನ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ಪಾದಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ಪಾದದ ರಕ್ಷಣೆ ಸಾಧ್ಯ ಎಂಬುವುದನ್ನು ಮಾತ್ರ ಮರೆಯಬಾರದು. 

See also  ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು