News Kannada
Sunday, August 14 2022

ಆರೋಗ್ಯ

ಒಂದೆಲಗದಲ್ಲಿದೆ ಆರೋಗ್ಯದ ಗುಟ್ಟು - 1 min read

ಒಂದೆಲಗದಲ್ಲಿದೆ ಆರೋಗ್ಯದ ಗುಟ್ಟು

ಒಂದೆಲಗ ಎನ್ನುವುದು ಅಪರಿಚಿತ ಸಸ್ಯವೇನಲ್ಲ.  ಸಾಮಾನ್ಯವಾಗಿ ಮಲೆನಾಡಿನ ಗದ್ದೆಯ ಬದುಗಳಲ್ಲಿ, ಬಯಲಿನಲ್ಲಿ ಹೀಗೆ ಎಲ್ಲೆಂದರಲ್ಲಿ ನೀರಿನಾಸರೆಯಿರುವ ಸ್ಥಳಗಳಲ್ಲಿ ಹರಡಿ ಬೆಳೆಯುವ ಇದನ್ನು ಎಲ್ಲರೂ ನೋಡಿರುತ್ತಾರೆ. ಪಟ್ಟಣಗಳಲ್ಲಿ ಇತರೆ ಸೊಪ್ಪುಗಳೊಂದಿಗೆ  ಒಂದೆಲಗವನ್ನು ಮಾರಾಟ ಮಾಡುವುದನ್ನು ನಾವು ಕಾಣಬಹುದಾಗಿದೆ.


ಉರುಟು ಎಲೆಗಳನ್ನೊಳಗೊಂಡ ಗೊಂಚಲು, ಗೊಂಚಲಾಗಿ, ಗಂಟು ಬಳ್ಳಿಗಳಾಗಿ ನೆಲದಲ್ಲಿ ಸಮನಾಂತರವಾಗಿ ಹರಡಿಕೊಂಡು ಬೆಳೆಯುವ ಇದು  ಹುಲ್ಲು ವರ್ಗಕ್ಕೆ ಸೇರಿದೆ ಎಂದು ಹೇಳಲಾಗಿದ್ದು, ಹಲವರು ಹಲವು ರೀತಿಯ ಹೆಸರಿನಿಂದ ಕರೆಯುತ್ತಾರೆ. ತಿಮರೆ, ಒಂದೆಲಗ, ಸರಸ್ವತಿ ಎಲೆ, ವಲ್ಲಾಡಿ, ಏಕಪಾನಿ, ನುಂಡೂಕ, ಪಣರ್ಿ, ಉರಗೆ, ಬ್ರಾಹ್ಮಿ ಮುಂತಾದವುಗಳು ಇದಕ್ಕಿರುವ ಹೆಸರುಗಳಾಗಿವೆ.

ಒಂದೆಲಗವು ಬುದ್ದಿ ವರ್ಧನಕ್ಕೆ ಅತ್ಯಮೂಲ್ಯ ಗಿಡಮೂಲಿಕೆಯಾದುದರಿಂದ ಜ್ಞಾನದ ಅಧಿದೇವತೆ ಸರಸ್ವತಿಯ ಹೆಸರಾದ ಬ್ರಾಹ್ಮಿ ಎಂಬ ಹೆಸರು ಬಂದಿದೆ. ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದ್ದರೂ ಹಳ್ಳಿಯಲ್ಲಿನ ಜನರ ನಿತ್ಯದ ಪದಾರ್ಥಗಳಲ್ಲಿ ತರಕಾರಿಯಾಗಿ ಬಳಕೆಯಾಗುತ್ತಿರುವುದು ಕಂಡು ಬರುತ್ತದೆ.  ದಿನನಿತ್ಯ ಮಾನವನ ನಿರ್ಲಕ್ಷ್ಯಕ್ಕೆ  ಒಳಗಾಗಿ ದೂರವಾಗಿಯೇ ಉಳಿದಿರುವ ಒಂದೆಲಗದ ಉಪಯೋಗವನ್ನು ಅರಿತವರು ವಿರಳವೇ ಎನ್ನಬೇಕು. ಇದು ಹಲವು ರೋಗಗಳಿಗೆ  ಸಿದ್ದೌಷಧವಾಗಿದೆ ಎಂದರೆ ಅಚ್ಚರಿಯಾಗದಿರದು.

ಮಾನವನಲ್ಲಿ ಮುಖ್ಯವಾಗಿ ಮೆದುಳಿನ ವಿಕಾರಕ್ಕೆ ಸಂಬಂಧಿಸಿದಂತಹ ರೋಗಗಳಾದ ಮೂರ್ಛೆ, ಮನಸ್ಸಿನ ಅಸ್ಥಿರತೆ, ಸ್ಮರಣ ಶಕ್ತಿಯ ನಾಶ ಹಾಗೂ ಮಾನಸಿಕ ಮುಂತಾದ ರೋಗಗಳನ್ನು ಗುಣಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಎಲೆಯಲ್ಲಿ ಒಂದು ರೀತಿಯ ಎಣ್ಣೆಯಂತಹ ಸತ್ವವಿರುವುದರಿಂದ ಎಲೆಯನ್ನು ಬಿಸಿಲಿನಲ್ಲಿ ಒಣಗಿಸದೆ ನೆರಳಿನಲ್ಲಿಯೇ ಒಣಗಿಸಿ(ಬಿಸಿಲಿನಲ್ಲಿ ಒಣಗಿಸಿದ್ದೇ ಆದರೆ ಶಾಖಕ್ಕೆ ಎಲೆಯಲ್ಲಿನ ಎಣ್ಣೆಯಂತಹ ಸತ್ವವು ಆರಿಹೋಗುವುದು)ನಂತರ ಕುಟ್ಟಿ ಪುಡಿಮಾಡಿ ಚೂರ್ಣ ರೂಪದಲ್ಲಿ ಉಪಯೋಗಿಸಬೇಕು. ಹೀಗೆ ಉಪಯೋಗಿಸಿದ್ದೇ ಆದಲ್ಲಿ ದಮ್ಮು, ಕಫ ಮುಂತಾದ ಕಾಯಿಲೆಗಳು ವಾಸಿಯಾಗುವುವು. ಮೇಹದ ಹುಣ್ಣು, ಗಂಡಮಾಲೆ, ಕುಷ್ಠರೋಗಗಳ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಾತ್ರಿ ವೇಳೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ನೀರಿನೊಳಗೆ ಎಲೆಯನ್ನು ಅದ್ದಿ ಮುಂಜಾನೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಸ್ವರವನ್ನು ಸುಗಮಗೊಳಿಸುವಲ್ಲಿಯೂ ಇದು ಮಹತ್ವದ ಪಾತ್ರವಹಿಸುತ್ತದೆ.

ರಕ್ತವಿಕಾರಕ್ಕೂ ಒಂದೆಲಗವನ್ನು ಉಪಯೋಗಿಸುವುದಲ್ಲದೆ, ಕುರುಹುಗಳ ಅಕ್ರಮಕ್ಕೂ ಮಕ್ಕಳ ಜ್ವರಕ್ಕೂ ಸಹ ಇದು ಔಷಧಿಯಾಗಿದೆ. ಪೆಟ್ಟು ತಾಗಿದ ಜಾಗದಲ್ಲಿ ಎಲೆಗಳನ್ನಿಟ್ಟರೆ ಉರಿಯಾಗದಂತೆ ತಡೆಯುತ್ತದೆ. ಜೇನಿಗೆ ಸಮಪ್ರಮಾಣದಲ್ಲಿ ರಸ ಸೇರಿಸಿ ದಿನಿತ್ಯ ಉಪಯೋಗಿಸಿದ್ದೇ ಆದರೆ ಮೂಛರ್ೆರೋಗವು ವಾಸಿಯಾಗುತ್ತದೆ ಎಂದು ಹೇಳಲಾಗಿದೆ. ಸಿದ್ಧಗೊಳಿಸಿದ  ಸಾರಸ್ವತ ಚೂರ್ಣದ ಸೇವನೆಯಿಂದ  ಬುದ್ದಿಶಕ್ತಿ ಹಾಗೂ ಸ್ಮರಣಶಕ್ತಿಗಳು ವೃದ್ಧಿಯಾಗುವುವು. ಒಂದೆಲಗದಲ್ಲಿ ಚರ್ಮ, ಕೂದಲು, ಉಗುರುಗಳನ್ನು ಬೆಳೆಸುವ ಶಕ್ತಿಯಿರುವುದಾಗಿ ಪ್ರಾಣಿಗಳ ಮೇಲೆ ನಡೆಸಿದ ಪರೀಕ್ಷೆಗಳಿಂದ ತಿಳಿದು ಬಂದಿದೆ. ಕಹಿ ವಗರು, ಗುಣಗಳು ಹೇರಳವಾಗಿ ಇರುವುದರಿಂದ ಅಗ್ನಿವರ್ಧಕವೂ, ಕ್ರಿಮಿನಾಶಕವೂ ಆಗಿದೆ. ಉಪ್ಪು ಬೆಣ್ಣೆಯೊಂದಿಗೆ ಅರೆದು ಗಾಯಗಳ ಮೇಲೆ ಲೇಪಿಸಿದ್ದಲ್ಲಿ ಗಾಯ ಶೀಘ್ರವೇ ಗುಣಮುಖವಾಗುವುದು.
 

See also  ಔಷಧೀಯ ಗುಣದ ದಾಸವಾಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು