News Kannada
Saturday, October 08 2022

ಆರೋಗ್ಯ

ಮನೆಯ ಸ್ವಚ್ಛತೆಯಲ್ಲಿದೆ ಆರೋಗ್ಯದ ಗುಟ್ಟು - 1 min read

Photo Credit :

ಮನೆಯ ಸ್ವಚ್ಛತೆಯಲ್ಲಿದೆ ಆರೋಗ್ಯದ ಗುಟ್ಟು

ನಾವು ಎಲ್ಲಿಗೆ ಹೋದರೂ ಮರಳಿ ಮನೆಗೆ ಬಂದ ಮೇಲೆಯೇ ಏನೋ ಒಂದು ರೀತಿಯ ತೃಪ್ತಿ. ಮನೆ ಹೇಗೆಯೇ ಇರಲಿ. ಅದು ನಮ್ಮ ಮನೆ. ಮನೆ ಅರಮನೆಯಾಗಿರಬೇಕಿಲ್ಲ. ಗುಡಿಸಲಾದರೂ ನಡೆಯುತ್ತದೆ. ಆ ಮನೆ ನಮಗೆ ಒಂದಷ್ಟು ನೆಮ್ಮದಿ, ವಿಶ್ರಾಂತಿ ನೀಡುವಂತಿದ್ದರೆ ಸಾಕು.

ಆಫೀಸಿನಲ್ಲಿ ಕೆಲಸ ಮಾಡಿ ಸುಸ್ತಾಗಿರುತ್ತೇವೆ. ಇನ್ನೇನೋ ಕಾರಣಗಳಿಗೆ ದೇಹ ದಣಿದಿರುತ್ತದೆ ಆಗಲೆಲ್ಲಾ ಮನೆಗೆ ಹೋಗಿ ವಿಶ್ರಾಂತಿ ಪಡೆಯೋಣ ಎಂದುಕೊಳ್ಳುತ್ತೇವೆ. ಮನೆ ತಲುಪಿದ ಮೇಲೆ ಅಬ್ಬಾ ಎಂದು ನಿಟ್ಟುಸಿರು ಬಿಡುತ್ತೇವೆ. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮನೆ ಮಾಡಬೇಕು ಅಲ್ಲಿ ನಮ್ಮ ಸಂಸಾರವನ್ನು ಸಾಗಿಸಬೇಕೆಂಬ ಬಯಕೆಗಳಿರುತ್ತವೆ.

ಮನೆಗಳು ಸ್ವಂತದ್ದೇ ಆಗಿರಬೇಕಿಂದಿಲ್ಲ ನಾವು ಇರುವಷ್ಟು ದಿನ ನಮ್ಮ ಮನೆ. ಅದನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ನಮಗೆ ಲಾಭ.  ಮನೆ ಹೇಗಿದೆ ಎಂಬುದು ಮುಖ್ಯವಲ್ಲ. ಅದನ್ನು ನಾವು ಹೇಗಿಟ್ಟಿರುತ್ತೇವೆ ಎಂಬುದು ಮುಖ್ಯವಷ್ಟೆ. ಶ್ರೀಮಂತರ ಮನೆಗಳನ್ನು ನೋಡಿ ಕೊರಗುವುದನ್ನು ಬಿಟ್ಟು ನಮ್ಮ ಮನೆಯನ್ನು ನಮಗಿರುವ ಸಾಮಥ್ರ್ಯಕ್ಕೆ ಹೇಗಿಟ್ಟುಕೊಳ್ಳಬಹುದು ಎಂಬುವುದನ್ನು ನಾವು ಕಲಿತುಕೊಳ್ಳಬೇಕು.

ಯಾವ ವಸ್ತುವನ್ನು ಎಲ್ಲಿಡಬೇಕು? ಹೇಗಿಡಬೇಕು? ಹೀಗೆ ಇರುವುದರಲ್ಲೇ ಜಾಣ್ಮೆ ವಹಿಸಬೇಕಷ್ಟೆ. ಮನೆ ಸ್ವಚ್ಛವಾಗಿದ್ದಷ್ಟು ಮನಸ್ಸು ತಿಳಿಯಾಗಿರುತ್ತದೆ. ಮನದಲ್ಲಿ ಉಲ್ಲಾಸ ತುಂಬುತ್ತಿರುತ್ತದೆ. ಆ ಉಲ್ಲಾಸ ನಮ್ಮನ್ನು ಕೆಲಸ ಕಾರ್ಯಗಳಿಗೆ ಪ್ರೇರೇಪಿಸುತ್ತದೆ. ಮನೆ ಎನ್ನುವುದು ನಮ್ಮ ಹೊರಗಿನ ಎಲ್ಲ ಒತ್ತಡಗಳನ್ನು ದೂರ ತಳ್ಳಿ ಒಂದಷ್ಟು ನೆಮ್ಮದಿ ನೀಡುವ ತಾಣ ಮನೆ. ಇಂತಹ ಮನೆಯ ಬಗ್ಗೆ ಒಂದಷ್ಟು ಮುತುವರ್ಜಿ ವಹಿಸಿ ಸುಂದರವಾಗಿಟ್ಟುಕೊಂಡರೆ ಆರೋಗ್ಯ ವೃದ್ಧಿಸುತ್ತದೆ.

ಇವತ್ತು ನಮ್ಮನ್ನು ಕೆಲವು ರೋಗಗಳು ಕಾಡುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಅಶುಚಿತ್ವ ಎಂದರೆ ತಪ್ಪಾಗಲಾರದು. ಆದುದರಿಂದ ಅಡುಗೆಮನೆ, ಸ್ನಾನ, ಶೌಚಾಲಯ ಎಲ್ಲವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ಮಕ್ಕಳಿರುವ ಮನೆಯಾದರೆ ಇನ್ನಷ್ಟು ಕಾಳಜಿಅಗತ್ಯ. ಹೊರಗೂ ಒಳಗೂ ದುಡಿಯುವ ಮಹಿಳೆಯರಿಗೆ ಮನೆ ಕೆಲಸ ಎನ್ನುವುದು ತಲೆನೋವು ತರುತ್ತದೆ. ಆದರೂ ಇರುವ ಕಾಲಾವಕಾಶದಲ್ಲಿ ಮನೆಯತ್ತವೂ ನಿಗಾ ವಹಿಸಲೇ ಬೇಕು.

ಬಹಳಷ್ಟು ಜನಕ್ಕೆ ಬೇರೆಯವರ ಮನೆಯಲ್ಲಿ ಇರುವುದೆಲ್ಲವೂ ನಮ್ಮ ಮನೆಗೆ ಬೇಕು. ಆದರೆ ಅದನ್ನು ಹೇಗಿಡಬೇಕೆಂಬುದೇ ಗೊತ್ತಿಲ್ಲ. ಸಿಕ್ಕಿದನೆಲ್ಲ ತಂದು ಸ್ಟೋರ್ ರೂಂ ರೀತಿ ಗುಡ್ಡೆ ಹಾಕುವುದಕ್ಕಿಂತ ಅಗತ್ಯ ವಸ್ತುಗಳನ್ನು ಮಾತ್ರ ಮನೆಗೆ ತರುವುದು ಉತ್ತಮ. ಮತ್ತು ಅವುಗಳನ್ನು ಜೋಡಿಸಿಡುವುದು ಕೂಡ ಕಲೆಯೇ. ಅಗತ್ಯವಿಲ್ಲದ ವಸ್ತು ತಂದು ಅವುಗಳನ್ನು ಎಲ್ಲೋ ಒಂದು ಕಡೆ ಇಟ್ಟು ಧೂಳು ಹಿಡಿಸೋದಕ್ಕಿಂತ ತರದಿರುವುದೇ ಉತ್ತಮ.

ಪ್ರತಿ ಮನೆಗೂ ಒಂದು ವಾಸನೆಯಿರುತ್ತದೆ. ಅದು ದುರ್ವಾಸನೆಯಾಗಬಾರದು. ಇತ್ತೀಚೆಗೆ ಮನೆಗಳು ಸುವಾಸನೆಯಿಂದ ಕೂಡಿರಲು ಹಲವು ಬಗೆಯ ರೂಂಪ್ರಷ್ನರ್ಗಳು ಬಂದಿವೆ. ಅವುಗಳನ್ನು ಬಳಸಬಹುದು. ಮನೆ ಸ್ವಚ್ಛವಾಗಿಲ್ಲಾಂದ್ರೆ ಜಿರಳೆ, ಇಲಿ, ತಿಗಣೆಗಳು ವಾಸ್ತವ್ಯ ಹೂಡಿಬಿಡುತ್ತವೆ. ಅವುಗಳಿಂದ ದೂರವಿರಬೇಕಾದರೆ ಮನೆಯನ್ನು ಚೊಕ್ಕಟವಾಗಿಡುವುದು ಒಳ್ಳೆಯದು. ದೊಡ್ಡ ಬೆಲೆ ಬಾಳುವ ವಸ್ತುಗಳು ಮನೆಯನ್ನು ಅಲಂಕರಿಸಬಹುದು ಆದರೆ ಎಲ್ಲದಕ್ಕಿಂತ ಆರೋಗ್ಯ ಮುಖ್ಯ. ಅದು ಸಾಧ್ಯವಾಗಬೇಕಾದರೆ ಮನೆ ಸ್ವಚ್ಛವಾಗಿರಬೇಕಷ್ಟೆ

See also  ಅವಕಾಡೊದಿಂದ ತಿಂದರೆ ಗರ್ಭಿಣಿಯರಿಗೆ ಬಹಳಷ್ಟು ಲಾಭಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು