News Kannada
Sunday, September 25 2022

ಆರೋಗ್ಯ

ಆರೋಗ್ಯಕರ ಆಹಾರ ಸೇವನೆ ಹೇಗೆ ಗೊತ್ತಾ? - 1 min read

Photo Credit :

ಆರೋಗ್ಯಕರ ಆಹಾರ ಸೇವನೆ ಹೇಗೆ ಗೊತ್ತಾ?

ಭೂಮಿ ಮೇಲೆ ಹುಟ್ಟಿದ ಮನುಷ್ಯನಿಗೆ ಐಷಾರಾಮಿ ಬದುಕಿನ ಬಯಕೆ ಸಾಮಾನ್ಯ. ಆದರೆ ಒಮ್ಮೆ ಯಾವುದಾದರು ಕಾಯಿಲೆ ಕಾಡಿದ ತಕ್ಷಣ ನಮ್ಮ ಅರಿವಿಗೆ ಬರುವ ಅಥವಾ ನಮಗೆ ನಾವೇ ಹೇಳಿಕೊಳ್ಳುವ ಸಮಾಧಾನ ಏನೆಂದರೆ ಶ್ರೀಮಂತಿಕೆ ಇಲ್ಲದಿದ್ದರೂ ಪರ್ವಾಗಿಲ್ಲ ಆರೋಗ್ಯವಿದ್ದರೆ ಸಾಕಪ್ಪಾ…

ಪ್ರತಿಯೊಬ್ಬರೂ ಆರೋಗ್ಯವಂತ ಜೀವನವನ್ನೇ ಬಯಸುತ್ತಾರೆ. ನಮ್ಮ ಆರೋಗ್ಯ ಕೈಕೊಟ್ಟ ಬಳಿಕ ಏನೇ ಐಶ್ವರ್ಯ ಇದ್ದರೂ ಎಲ್ಲವೂ ಗೌಣವೇ. ಆದ್ದರಿಂದ ಆರೋಗ್ಯವಂತ ಬದುಕನ್ನು ಕಂಡುಕೊಳ್ಳಲು ನಾವೇ ನಮ್ಮ ನಿತ್ಯದ ಬದುಕಿನಲ್ಲಿ ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಬಹಳಷ್ಟು ರೋಗಗಳು ನಮ್ಮನ್ನು ಕಾಡಲು ನಮ್ಮ ಆಹಾರ ಪದ್ಧತಿಯೇ ಕಾರಣ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿಗಿನ ಪಾಶ್ಚಿಮಾತ್ಯ ಆರೋಗ್ಯ ಪದ್ಧತಿಯತ್ತ ವಾಲಿರುವ ನಾವು ಬಾಯಿರುಚಿಗಾಗಿ ನಮ್ಮ ದೇಹಕ್ಕೆ ಒಗ್ಗದ ಪದಾರ್ಥಗಳನ್ನೆಲ್ಲ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಮನಸ್ಸಿಗೆ ಇಷ್ಟವಿಲ್ಲದನ್ನು ಹಸಿವಿನ ಕಾರಣಕ್ಕೆ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಬದಲು ಮನಸ್ಸಿಗೆ ಮತ್ತು ದೇಹಕ್ಕೆ ಹೊಂದುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ.

ನಮ್ಮ ಆಹಾರದ ಕ್ರಮಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಮತ್ತು ಅವು ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಯಾವ್ಯಾವುದೋ ಸಮಯಕ್ಕೆ ಆಹಾರ ಸೇವಿಸುವ ಬದಲು ನಿರ್ದಿಷ್ಟ ಸಮಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಕೆಲವರು ಬೆಳಗ್ಗಿನ ಆಹಾರ ಸೇವನೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ತಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಂಡು ನಿಧಾನವಾಗಿ ಮನಸ್ಸು ಬಂದ ಸಮಯಕ್ಕೆ ಮಾಡಿ ಮುಗಿಸುತ್ತಾರೆ. ಇದು ಆರೋಗ್ಯದ ದೃಷ್ಟಿಯಲ್ಲಿ ಮಾರಕ. ವೈದ್ಯರು ಹೇಳುವ ಪ್ರಕಾರ ಬೆಳಗ್ಗಿನ ಉಪಹಾರ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಅಲ್ಲದೆ ದಿನದ ಅತೀ ಮುಖ್ಯವಾದ ಆಹಾರವಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗಿನ ಉಪಹಾರವನ್ನು ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ.

ತುಂಬಾ ಹಸಿದುಕೊಂಡಿರುವುದು ಮತ್ತು ಒಮ್ಮೆಲೆ ಹೊಟ್ಟೆ ತುಂಬಾ ತಿಂದು ಬಿಡುವುದು ಆಹಾರ ಸೇವನೆಯ ಲಕ್ಷಣವಲ್ಲ. ಆದ್ದರಿಂದ ಆಹಾರ ಸೇವನೆಯ ವಿಚಾರದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಅತ್ಯಗತ್ಯ. ನಾವೆಲ್ಲರೂ ಕಷ್ಟಪಟ್ಟು ದುಡಿಯುವುದು ಹೊಟ್ಟೆಗಾಗಿ. ಹೀಗಿರುವಾಗ ನಮ್ಮ ದುಡಿಮೆಯ ನಡುವೆ ಒಂದಷ್ಟು ಸಮಯವನ್ನು ಆಹಾರ ಸೇವನೆಗೆ ತೆಗೆದಿಡದೆ ಹೋದರೆ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದರೆ ದುಡಿಯುವ ಮಾತೆಲ್ಲೆ?

ರಾತ್ರಿ ಊಟ ಮಾಡಿದ ತಕ್ಷಣ ಮಲಗದೆ, ಮಲಗುವ ಕನಿಷ್ಟ 2ಗಂಟೆ ಮೊದಲು ಆಹಾರ ಸೇವಿಸಿದರೆ ಉತ್ತಮ. ರುಚಿಯಾಗಿದೆ ಎಂಬ ಕಾರಣಕ್ಕೆ ಹೆಚ್ಚು ತಿನ್ನದೆ ಮಿತ ಸೇವನೆ ಮುಖ್ಯ. ದೇಹದ ತೂಕ ಹೆಚ್ಚಾಗಿ ಬೊಜ್ಜು ಬೆಳೆಯದಂತೆ ಮಾಡಲು ಮುಂಜಾನೆ ವಾಕಿಂಗ್ ವ್ಯಾಯಾಮ ಮಾಡುವುದು ಒಳ್ಳೆಯ ಅಭ್ಯಾಸ. ವಯಸ್ಸಾಗುತ್ತಿದ್ದಂತೆ ಕಡಿಮೆ ಆಹಾರ ಸೇವಿಸಿ ಹೆಚ್ಚು ವ್ಯಾಯಾಮ ಒಳ್ಳೆಯದು. ಪ್ರತಿ ದಿನ ಆಹಾರ ಮಾತ್ರವಲ್ಲದೆ ಸುಮಾರು 8 ರಿಂದ 12 ಲೋಟಗಳಷ್ಟು ನೀರು ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿರುವ ಬೇಡದ ಅಂಶಗಳು ಹೊರಹೋಗಲು ಸಾಧ್ಯವಾಗುತ್ತದೆ.

ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಬೇಕು. ಇದರಿಂದ ಹೊಟ್ಟೆ ಉಬ್ಬರ ತಡೆಯಬಹುದಲ್ಲದೆ, ಪ್ರೊಟೀನ್ ಅಂಶ ಹೆಚ್ಚಿಸಲು ಸಾಧ್ಯವಾಗುತ್ತದೆ. ಧಾನ್ಯಗಳನ್ನು ಸೇವಿಸಬೇಕು ಆದರೆ ಮರು ಸಂಸ್ಕರಣೆ ಮಾಡಿದ ಹಿಟ್ಟುಗಳನ್ನು ದೂರವಿಡಬೇಕು. ಕೊಬ್ಬಿನ ಅಂಶವಿರುವ ಡಾಲ್ಡಾ, ವನಸ್ಪತಿಗಳನ್ನು ಕಡಿಮೆ ಮಾಡಬೇಕು. ಅಷ್ಟೇ ಅಲ್ಲ ಸಕ್ಕರೆ ಮತ್ತು ಉಪ್ಪು ಸೇವನೆ ಮಿತವಾಗಿರಲಿ. ಇವುಗಳ ಪ್ರಮಾಣ ಹೆಚ್ಚಾದಷ್ಟು ಮಧುಮೇಹ, ಬೊಜ್ಜು, ರಕ್ತದೊತ್ತಡ, ಹೃದಯಾಘಾತ ಮೊದಲಾದ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ.

See also  ಮಣ್ಣಿನ ಮಡಿಕೆಯ ನೀರು ಆರೋಗ್ಯಕ್ಕೆ ಉತ್ತಮ

ಕಾರ್ಬೋನೇಟೆಡ್ ಪಾನೀಯಗಳು, ಕರಿದ ತಿಂಡಿಗಳು, ಧೂಮಪಾನ, ಮಧ್ಯಪಾನ ಮೊದಲಾದವುಗಳಿಂದ ದೂರವಿದ್ದಷ್ಟು ಒಳ್ಳೆಯದು. ಏನೇ ಆದರೂ ಆರೋಗ್ಯವೇ ಭಾಗ್ಯ ಎಂಬುವುದನ್ನು ನಾವು ಮರೆಯಬಾರದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು