News Kannada
Friday, September 30 2022

ಆರೋಗ್ಯ

ಉತ್ತಮ ಆರೋಗ್ಯಕ್ಕೆ ದಾಳಿಂಬೆ ಹಣ್ಣು ತಿನ್ನಿ - 1 min read

Photo Credit :

ಉತ್ತಮ ಆರೋಗ್ಯಕ್ಕೆ ದಾಳಿಂಬೆ ಹಣ್ಣು ತಿನ್ನಿ

ಕೆಂಪು ದಾಳಿಂಬೆ ಹಣ್ಣು  ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ  ಹಣ್ಣನ್ನು  ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್  ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು ಉಪಯುಕ್ತವಾದುದು. ಇತ್ತಿಚಿಗೆ  ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವದು ಉತ್ತಮ. ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.

ಬೇಗನೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ತಾರುಣ್ಯರಂತೆ ಕಾಣಲು ದಾಳಿಂಬೆಯನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಒಳ್ಳೆಯದು ಎಂದು ಸ್ವಿಡ್ಜರ್ಲೆಂಡಿನ ಸಂಶೋಧಕರು ಹೇಳಿದ್ದಾರೆ. ದಾಳಿಂಬೆಯನ್ನು ಹಿಂದಿನ ಕಾಲದವರು ದೇವರ ಆಹಾರ ಎಂದು ಕರೆಯುತ್ತಿದ್ದರು. ಅದರಲ್ಲಿರುವ ನಿಖರ ರಾಸಾಯನಿಕ ಮನುಷ್ಯನನ್ನು ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತದಂತೆ. ಮನುಷ್ಯನ ದೇಹದಲ್ಲಿರುವ ಯುರೋಲಿಥಿನ್ ಎ ಎಂಬ ಏಕ ಅಣು ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿದ್ದು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಆದರೆ ಮನುಷ್ಯರ ಕರುಳಿನಲ್ಲಿ ಸರಿಯಾದ ರೀತಿಯ ಬ್ಯಾಕ್ಟೀರಿಯಾ ಇದ್ದರೆ ಮಾತ್ರ ದಾಳಿಂಬೆಯಲ್ಲಿರುವ ರಾಸಾಯನಿಕದಿಂದ ಪ್ರಯೋಜನವಾಗುತ್ತದೆ. ಸೂಕ್ಷ್ಮಜೀವಿಗಳು ಹಣ್ಣಿನಲ್ಲಿರುವ ಕಚ್ಚಾ ಪದಾರ್ಥಗಳನ್ನು ಯುರೋಲಿಥಿನ್ ಎಯಾಗಿ ಬದಲಾಯಿಸುತ್ತದೆ.

ತಾಯಿಯಾಗುವ ಹಂತದಲ್ಲಿ ಕೂಡ ಮಹಿಳೆಯರಿಗೆ ದಾಳಿಂಬೆ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ದಾಳಿಂಬೆ ಹಣ್ಣು ಎಂತೆಂಥ ರೋಗಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ದಾಳಿಂಬೆ ಹಣ್ಣುಗಳು ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿ ಆರೋಗ್ಯಕರ ಕೋಶಗಳನ್ನು ಮಾತ್ರ ಉಳಿಸುತ್ತದೆ ಎಂದು ಇಸ್ರೇಲ್ ವೈದ್ಯರು ಕಂಡುಹಿಡಿದಿದ್ದಾರೆ. ಸ್ತನ ಕ್ಯಾನ್ಸರ್ ಆಗುವುದನ್ನು ಕೂಡ ದಾಳಿಂಬೆ ತಪ್ಪಿಸುತ್ತದೆ.

ದಾಳಿಂಬೆ ಹಣ್ಣಿನಿಂದಾಗುವ  ಪ್ರಯೋಜನಗಳು:
    * ರಕ್ತದೊತ್ತಡ  ಕಡಿಮೆ ಆಗುವದು
    * ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವದು.
    * ಕೊಲೆಸ್ಟ್ರಾಲ್  ಕಡಿಮೆಯಾಗುವದು.
    * ಮಹಿಳೆಯರು ದಾಳಿಂಬೆಹಣ್ಣಿನ  ರಸ ಕುಡಿಯುವದರಿಂದ ಮುಟ್ಟಿನ ತೊಂದರೆ ನಿವಾರಣೆಯಾಗುವದು.
    * ನಿಶ್ಯಕ್ತತೆ ಯನ್ನು ಕಡಿಮೆ ಮಾಡುವದು .
    * ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು  ಕಾಂತಿಯುತವಾಗುವದು.
    * ಲೈಂಗಿಕ  ತೊಂದರೆಯೂ ನಿವಾರಣೆಯಗುವದು
    * ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವದು.
    * ದಾಳಂಬಿ ಬೀಜವನ್ನು  ತಿನ್ನುವದರಿಂದ ಹಲ್ಲುಗಳ ಹೊಳಪು  ಹೆಚ್ಹುವದು
    * ಮನಸ್ಸು ಉಲ್ಲಾಸದಿಂದ ಇರುವದು
    * ಓದು,ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚ್ಚಿಸುವದು.     

See also  ಔಷಧೀಯ ಗುಣದ ದಾಸವಾಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು