News Kannada
Monday, September 26 2022

ಆರೋಗ್ಯ

ಮಧುಮೇಹಿಗಳೇ ಕಣ್ಣಿನತ್ತ ಇರಲಿ ಕಾಳಜಿ… - 1 min read

Photo Credit :

ಮಧುಮೇಹಿಗಳೇ ಕಣ್ಣಿನತ್ತ ಇರಲಿ ಕಾಳಜಿ...

ಮಧುಮೇಹ ರೋಗದಿಂದ ಬಳಲುವ ರೋಗಿಗಳು ಬಹಳಷ್ಟು ಎಚ್ಚರಿದಿಂದ ಇರುವುದು ಅಗತ್ಯ. ರೋಗವನ್ನು ನಿಯಂತ್ರಿಸದೆ ಹೋದರೆ ಹಲವು ತೊಂದರೆಗಳಿಗೆ ಎಡೆ ಮಾಡಿ ಕೊಡುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಮಧುಮೇಹ ದೇಹದ ಮೇಲೆ, ಆರೋಗ್ಯದ ಮೇಲೆ ಅಷ್ಟೇ ಅಲ್ಲ ಕಣ್ಣಿನ ಮೇಲೆಯೂ ಪರಿಣಾಮ ಬೀರುತ್ತದೆ. ಇದನ್ನು ಅರಿತು ಒಂದಷ್ಟು ಎಚ್ಚರಿಕೆ, ಕಾಳಜಿ  ವಹಿಸದೆ ಹಾಗೂ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆಯದೆ ಹೋದರೆ ದೃಷ್ಠಿ ಕಳೆದುಕೊಂಡು ಅಂಧರಾಗುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ಮಧುಮೇಹ ಕಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಾರಣಗಳೇನು? ಗುಣಲಕ್ಷಣಗಳೇನು? ನಿಯಂತ್ರಣ  ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಮೂಡಬಹುದು. ಈ ಬಗ್ಗೆ ವೈದ್ಯರು ಒಂದಷ್ಟು ಮಾಹಿತಿ ನೀಡಿದ್ದು ಆ ವಿವರ ಈ ಕೆಳಗಿನಂತಿದೆ. ಸಾಮಾನ್ಯವಾಗಿ ಮಧುಮೇಹದ ದುಷ್ಪರಿಣಾಮ ಕಣ್ಣಿನ ಅಕ್ಷಿಪಟದಲ್ಲಾಗುತ್ತದೆ. ಈ ತೊಂದರೆಯನ್ನು ಎರಡು ವಿಧದಲ್ಲಿ ಗುರುತಿಸಲಾಗುತ್ತದೆ.

ಮೊದಲನೆಯದು ಪ್ರಾರಂಭದಲ್ಲಿ ಕಂಡು ಬರುವ ನಾನ್ ಪ್ರಾಲಿಫರೇಟಿವ್(NPDR).  ಎರಡನೆಯದು ತಡವಾಗಿ ಗೋಚರಿಸುವ ಪ್ರಾಲಿಫರೇಟಿವ್(PDR) ಆಗಿದೆ. ನಾನ್ ಪ್ರಾಲಿಫರೇಟಿವ್ ಬಗ್ಗೆ ಹೇಳುವುದಾದರೆ  ಇದು ಮಧುಮೇಹದಿಂದ ಬಳಲುವರನ್ನು ಕಾಡುವ ದೃಷ್ಠಿದೋಷದ ಪ್ರಾರಂಭದ ಹಂತ. ಇದರಲ್ಲಿ ರಕ್ತನಾಳಗಳಿಂದ ರಕ್ತಸ್ರಾವವಾಗಿ ಅಕ್ಷಿಪಟಲ ಮಂದವಾಗುತ್ತದೆ. ಇನ್ನು ಪ್ರಾಲಿಫರೇಟಿವ್ ಎನ್ನುವುದು ನಾನ್ ಪ್ರಾಲಿಫರೇಟಿವ್ ಹಂತವನ್ನು ಮೀರಿದ್ದು, ಇದರಲ್ಲಿ ಕಣ್ಣಿನ ಅಕ್ಷಿಪಟಲದಲ್ಲಿ ಅಸಾಮಾನ್ಯವಾದ ಹೊಸ ರಕ್ತನಾಳಗಳು ಹುಟ್ಟಿಕೊಂಡು ಪದೇ ಪದೇ ಹೆಚ್ಚಿನ ರಕ್ತಸ್ರಾವವಾಗುವುದಲ್ಲದೆ, ಅಕ್ಷಿಪಟಲ ಕಳಚಿ ಮತ್ತು ಕಣ್ಣಿನ ನರ ದುರ್ಬಲಗೊಂಡು ಅಂಧತ್ವ ಕಾಣಿಸಿಕೊಳ್ಳುತ್ತದೆ.

ಇನ್ನು ಮಧುಮೇಹ ಅಕ್ಷಿಪಟಲದ ಮೇಲೆ ಪರಿಣಾಮ ಬೀರುವುದರಿಂದ ದೃಷ್ಟಿ ಮಂದವಾಗುತ್ತದೆ. ಇದು ಹೇಗೆ ಎಂಬುವುದಕ್ಕೆ ವೈದ್ಯರು ಕಾರಣಗಳನ್ನು ನೀಡುತ್ತಾರೆ. ವೈದ್ಯರ ಪ್ರಕಾರ ಮಾಕ್ಯುಲ ಮಂದವಾಗುವುದರಿಂದ ಮಧ್ಯ ದೃಷ್ಠಿಕ್ಷೇತ್ರದಲ್ಲಿ ದೃಷ್ಠಿ ಅಭಾವವಿರುತ್ತದೆ. ಇದರಿಂದ ಸಣ್ಣ ರಕ್ತನಾಳಗಳು ಮುಚ್ಚಿಕೊಂಡು ಮಾಕ್ಯುಲಾದಲ್ಲಿ ಸಾಕಾಗುವಷ್ಟು ರಕ್ತಚಲನೆ ಇಲ್ಲದೆ ಮಾಕ್ಯುಲ ನಿಷ್ಕ್ರಿಯಗೊಳ್ಳುತ್ತದೆ. ಇನ್ನು ಹೊಸ ದುರ್ಬಲ ರಕ್ತನಾಳಗಳಿಂದ ಹೆಚ್ಚಿನ ರಕ್ತಸ್ರಾವವಾಗುವುದರಿಂದ ದೃಷ್ಠಿ ದೋಷವಾಗಿ ಕಣ್ಣಿಗೆ ಏನೂ ಕಾಣದಂತಾಗುತ್ತದೆ. ಇಷ್ಟೇ ಅಲ್ಲದೆ ಪದೇ ಪದೇ ಉಂಟಾದ ರಕ್ತಸ್ರಾವದಿಂದ ಗಾಯಗೊಂಡ ರಕ್ತನಾಳಗಳು ಕಲೆಭರಿತವಾಗಿ ಅಕ್ಷಿಪಟಲ ಕಳಚಿಕೊಂಡು ಸಂಪೂರ್ಣ ಅಂಧರಾಗುವ ಸಂಭವವೂ ಇಲ್ಲದಿಲ್ಲ.

ಮಧುಮೇಹ ಅಕ್ಷಿಪಟಲದ ಮೇಲೆ ಪರಿಣಾಮ ಬೀರಿದೆ ಎಂಬುದು ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೃಷ್ಠಿದೋಷ ಕಡಿಮೆ ಆಗಿರುವುದು ಗಮನಕ್ಕೆ ಬಂದರೂ ಕೆಲವೊಮ್ಮೆ ಯಾವತ್ತಾದರೂ  ತೋರಿಸಿದರಾಯಿತು ಎಂಬ ಉದಾಸೀನತೆ ತಾಳುವವರೇ ಹೆಚ್ಚು. ಇಂತಹ ನಿರ್ಲಕ್ಷ ಶಾಶ್ವತ ಅಂಧತ್ವಕ್ಕೆ ರೋಗಿಗಳನ್ನು ದೂಡಿಬಿಡುತ್ತದೆ. ಇಲ್ಲಿ ಕೆಲವೊಮ್ಮೆ ಉಲ್ಭಣದ ಸ್ಥಿತಿಗೆ ತಲುಪಿದರೂ ಮಧ್ಯ ದೃಷ್ಠಿಕ್ಷೇತ್ರದಲ್ಲಿ ದೃಷ್ಠಿ ಚೆನ್ನಾಗಿದ್ದಲ್ಲಿ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಆದರೆ ದಿನೇ ದಿನೇ ದೃಷ್ಠಿಕುಂದುತ್ತಿರುವುದು ಗಮನಕ್ಕೆ ಬಂದ ತಕ್ಷಣ ವೈದ್ಯರನ್ನು ಕಾಣುವುದು  ಒಳ್ಳೆಯದು.

ಮಧುಮೇಹದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಆಗಾಗ್ಗೆ ವೈದ್ಯರನ್ನು ಕಂಡು ರಕ್ತಪರೀಕ್ಷೆ ಸೇರಿದಂತೆ ಹಲವು ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತಾರೆ. ಅದರಂತೆ ನೇತ್ರ ತಜ್ಞರನ್ನು ಕಂಡು ಸಲಹೆ ಪಡೆಯುವುದು ಒಳ್ಳೆಯದು. ವೈದ್ಯರು ಕಣ್ಣಿನ ಮೇಲೆ ಪರಿಣಾಮ ಬೀರಿದೆಯಾ ಎಂಬುವುದನ್ನು ರಕ್ತನಾಳಗಳ ಸ್ಥಿತಿಯನ್ನು ಪರೀಕ್ಷಿಸಿ ಅರಿತುಕೊಳ್ಳುತ್ತಾರೆ. ಇದನ್ನು ಪರೀಕ್ಷಿಸಲು ಪ್ಲೊರೆಸಿನ್ ಉಪಯೋಗಿಸಿ ಚಿತ್ರಗಳನ್ನು ತೆಗೆಯಲಾಗುತ್ತದೆ. ಇನ್ನು ಮಾಕ್ಯುಲಾದ ಮೇಲಿನ ಪರಿಣಾಮ ಕಂಡು ಹಿಡಿಯಲು OCT(Optical Coherences Tomography) ಯನ್ನು ಮಾಡಲಾಗುತ್ತದೆ. ಒಂದು ವೇಳೆ ಕಣ್ಣಿನಪೊರೆಯಿಂದ ಅಕ್ಷಿಪಟಲದ ಪರೀಕ್ಷೆ ಸಾಧ್ಯವಾಗದೆ ಇದ್ದಾಗ B-Scan(Ultrasound Scaning)  ಮಾಡಿ ತಿಳಿದುಕೊಳ್ಳಲಾಗುತ್ತದೆ.ಒಟ್ಟಾರೆ ಹೇಳಬೇಕೆಂದರೆ ಮಧುಮೇಹ ಇರುವ ರೋಗಿಗಳು ಕಣ್ಣಿನ ಬಗ್ಗೆಯೂ ಹೆಚ್ಚಿನ ನಿಗಾವಹಿಸುವುದು ಒಳ್ಳೆಯದು.

See also  ಇರೋದ್ರಲ್ಲೇ ತೃಪ್ತಿ ಪಡೋಣ!

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು