News Kannada
Thursday, October 06 2022

ಆರೋಗ್ಯ

ರಕ್ತದಾನ ಮಾಡಿ ಜೀವ ಉಳಿಸಿ.. - 1 min read

Photo Credit :

ರಕ್ತದಾನ ಮಾಡಿ ಜೀವ ಉಳಿಸಿ..

ರಕ್ತದಾನ ಮಹಾದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಪಘಾತಕ್ಕೀಡಾದ ಸಂದರ್ಭ ರಕ್ತದ ಅನಿವಾರ್ಯತೆ ಹೆಚ್ಚಾಗಿರುತ್ತದೆ. ಆಗ ರಕ್ತ ನೀಡುವವನು ನಿಜಕ್ಕೂ ದೇವರಾಗಿ ಕಾಣುತ್ತಾನೆ. ನಾವು ಯಾವುದೇ ದಾನ ಮಾಡದಿದ್ದರೂ ಕಷ್ಟ ಕಾಲದಲ್ಲಿ ರಕ್ತದಾನ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಾಗಿದೆ. ನಮ್ಮಿಂದ ಮತ್ತೊಂದು ಜೀವ ಉಳಿಯುತ್ತದೆ ಎನ್ನುವುದಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.

18 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ರಕ್ತದಾನ ಮಾಡಬಹುದು. ಮಾಡುವರ ದೇಹದ ತೂಕವು 45 ಕೆ.ಜಿ ಗಿಂತಲೂ ಹೆಚ್ಚು ತೂಕವಿರಬೇಕು ಮತ್ತು ಆರೋಗ್ಯವಂತನಾಗಿರಬೇಕು. 12.5 ಗ್ರಾಂಗಿಂತಲೂ ಹೆಚ್ಚು ಹಿಮೊಗ್ಲೋಬಿನ್ ಅಂಶ ಹೊಂದಿರುವ ಎಲ್ಲಾ ಆರೋಗ್ಯವಂತರೂ ರಕ್ತದಾನ ಮಾಡಬಹುದು. ನಮ್ಮ ದೇಶದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿ ವರ್ಷ ನಮ್ಮ ದೇಶದಲ್ಲಿ ರಕ್ತದ ಬೇಡಿಕೆ ಸುಮಾರು 4 ಕೋಟಿ ಯೂನಿಟ್ ಗಳಾಗಿದ್ದು, ಕೇವಲ 5 ಲಕ್ಷ ಯೂನಿಟ್ಗಳ ರಕ್ತದ ಪೂರೈಕೆ ಮಾತ್ರ ಸಾಧ್ಯವಾಗುತ್ತಿದೆ ಎಂದು ಹೇಳಲಾಗಿದೆ.

ಕೆಲವರಲ್ಲಿ ರಕ್ತ ಕೊಡುವುದರಿಂದ ದಾನಿಗೆ ಹಾನಿಯಾಗುತ್ತದೆ ಎಂಬ ತಪ್ಪು ತಿಳುವಳಿಕೆಯಿದ್ದು, ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ನಷ್ಟು ರಕ್ತ ಇರುತ್ತದೆ. ರಕ್ತ ಕೊಡುವ ವ್ಯಕ್ತಿಯಿಂದ ಕೇವಲ 350 ಮಿಲಿಯಷ್ಟೇ ರಕ್ತವನ್ನು ದಾನಿಯಿಂದ ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯವಾಗುವುದಿಲ್ಲ. ಆದ್ದರಿಂದ ಎಲ್ಲ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿರಾತಂಕವಾಗಿ ರಕ್ತದಾನ ಮಾಡಬಹುದು. ಸಾಮಾನ್ಯವಾಗಿ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳವರೆಗೆ ಅದು ಯಾವುದೇ ರೀತಿಯಲ್ಲಿಯೂ ಹಾಳಾಗದಂತೆ ವಿಶೇಷ ರೆಫ್ರಿಜಿರೇಟರ್ ಗಳಲ್ಲಿ ಶೇಖರಿಸಿಟ್ಟು ಉಪಯೋಗಿಸಬಹುದು.

18 ವರ್ಷದೊಳಗಿರುವ ವ್ಯಕ್ತಿಗಳು ಮತ್ತು ಈ ಕೆಳಗಿನ ಸಮಸ್ಯೆಯಿರುವ ವ್ಯಕ್ತಿಗಳು ರಕ್ತದಾನ ಮಾಡಬಾರದು. ಲಿವರ್, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವರು, ಗರ್ಭೀಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು ರಕ್ತದಾನ ಮಾಡಬಾರದು. ಹಾಗೆಯೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಆರು ತಿಂಗಳವರೆಗೆ. ಯಾವುದಾದರು  ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಬಾರದು.

ರಕ್ತದಾನ ಮಾಡಿದ ವ್ಯಕ್ತಿಗೆ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕಾಗುತ್ತದೆ. ಜೊತೆಗೆ ಯಾವುದೇ ರೀತಿ ಔಷಧದ ಅಗತ್ಯವಿರುವುದಿಲ್ಲ, ವ್ಯಕ್ತಿಯು ರಕ್ತದಾನ ಮಾಡಿದ ಆ ದಿನ ನೀರನ್ನು ಹೆಚ್ಚಾಗಿ ಕುಡಿಯಬೇಕು. ರಕ್ತದಾನದ ಕೆಲವು ತಾಸುಗಳೊಳಗಾಗಿ ದಾನಿಯ ದೇಹದಲ್ಲಿ ಹೊಸ ರಕ್ತಕಣಗಳನ್ನು ಉತ್ವಾದಿಸಲು ಪ್ರಾರಂಭಿಸುತ್ತದೆ. ಮುಂದಿನ ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ರಕ್ತವು ಮರು ತಯಾರಾಗುತ್ತದೆ.

ಇನ್ನೂ ರಕ್ತ ವರ್ಗಾವಣೆಯಿಂದ ಯಾವುದಾದರೂ ರೋಗ ಅಥವಾ ಸೋಂಕು ತಗಲುತ್ತದೆ ಎಂಬ ಮೂಢನಂಬಿಕೆಯಿಂದ ಜನರಲ್ಲಿ ಭಯವು ಆವರಿಸಿಕೊಂಡಿದೆ. ರಕ್ತದಾನ ಮಾಡುವ ದಾನಿಯಿಂದ ಸ್ವೀಕರಿಸಿದ ರಕ್ತವನ್ನು ರಕ್ತನಿಧಿಗಳಲ್ಲಿ ಹೆಪಟೈಟಿಸ್ ಬಿ. ಹೆಪಟೈಟಿಸ್ ಸಿ. ಎಚ್ಐವಿ, ಮಲೇರಿಯಾ, ಸಿಫಿಲಿಸ್ ಮುಂತಾದ ಸೂಕ್ಷಾಣುಗಳಿಗಾಗಿ ಪರೀಕ್ಷಿಸಿ. ರೋಗಾಣುಗಳಿಂದ ಮುಕ್ತವಾದ ರಕ್ತವನ್ನು ಮಾತ್ರವೇ ಅವಶ್ಯಕತೆ ಇರುವರಿಗೆ ವರ್ಗಾಯಿಸುತಾರೆ. ಅಲ್ಲದೆ ದಾನಿಯಿಂದ ರಕ್ತವನ್ನು ಸ್ವೀಕರಿಸುವಾಗಲೂ ಸಂಸ್ಕರಿಸಿದ ಶುದ್ಧವಾದ ಉಪಕರಣಗಳನ್ನು ಬಳಸುತ್ತಾರೆ ಹಾಗಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ದಾನಿಗಾಗಲೀ, ರಕ್ತ ವಗಾವಣೆ ಮಾಡಿಸಿಕೊಂಡವರಿಗಾಗಲಿ ಸೋಂಕಿನ ಭಯ ಬೇಡ. ಯಾವುದೇ ಭಯ ಆತಂಕಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವ ಇಚ್ಛೆಯಿಂದ ರಕ್ತದಾನವನ್ನು ಮಾಡಬಹುದು.

See also  ಹರ್ನಿಯಾಗೆ ಲ್ಯಾಪ್ರೊಸ್ಕೋಪಿಕ್ ವೆಂಟ್ರಲ್ ಚಿಕಿತ್ಸೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು