News Kannada
Saturday, September 24 2022

ಆರೋಗ್ಯ

ಯಾರು ಯಾವ ಆಹಾರ ತ್ಯಜಿಸಬೇಕು? - 1 min read

Photo Credit :

ಯಾರು ಯಾವ ಆಹಾರ ತ್ಯಜಿಸಬೇಕು?

ಇವತ್ತಿನ ಜೀವನಕ್ರಮ ಹಲವು ಕಾಯಿಲೆಗಳಿಗೆ ಬಹುಬೇಗ ಆಹ್ವಾನ ನೀಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯಿರುವವರೆಗೂ ನಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಬಗ್ಗೆ ನಮಗೆ ಗೊತ್ತೇ ಆಗುವುದಿಲ್ಲ. ಯಾವುದೋ ಮಾತ್ರೆ ಸೇವಿಸಿ ಅದನ್ನು ನಿಯಂತ್ರಿಸಿಕೊಳ್ಳುತ್ತಿರುತ್ತೇವೆ. ಆದರೆ ಅದು ಉಲ್ಭಣಗೊಂಡಾಗ ಆಸ್ಪತ್ರೆಗೆ ಹೋಗುತ್ತೇವೆ. ಆಗ ನಮ್ಮ ದೇಹದಲ್ಲಿರುವ ಕಾಯಿಲೆಯ ಬಗ್ಗೆ ಗೊತ್ತಾಗುತ್ತದೆ.  ಆದ್ದರಿಂದ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದನ್ನು ಬಿಟ್ಟು ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಂಡು ಬರುವುದರಿಂದ ಮುಂದೆ ಬರಲಿರುವ ದೊಡ್ಡ ಪ್ರಮಾಣದ ಸಮಸ್ಯೆಗೆ ಮೊದಲೇ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ನಮ್ಮನ್ನು ಬಾಧಿಸುವ ಕಾಯಿಲೆಗಳಿಂದ ಸುಧಾರಿಸಿಕೊಳ್ಳಬೇಕಾದರೆ ಆಹಾರದಲ್ಲಿನ ಪಥ್ಯಾಕ್ರಮ ಅಗತ್ಯವಾಗಿದೆ. ಒಂದೊಂದು ಕಾಯಿಲೆಯ ಸ್ವರೂಪವೂ ವಿಭಿನ್ನವಾಗಿರುವುದರಿಂದ ಆಯಾಯ ಕಾಯಿಲೆಗೆ ಏನೇನು ಆಹಾರ ಪದಾರ್ಥಗಳನ್ನು ವರ್ಜಿಸಬೇಕೆಂಬುವುದನ್ನು ವೈದ್ಯರು ಸಲಹೆ ನೀಡುತ್ತಾರೆ. ಅದರಂತೆ ಅಂತಹ ಆಹಾರಗಳ ಸೇವನೆಯಿಂದ ದೂರವಿರುವುದು ಅಗತ್ಯವಾಗಿದೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ವೈದ್ಯಕೀಯ ಉಪಚಾರದೊಂದಿಗೆ ತಾವು ಸೇವಿಸುವ ಆಹಾರದಲ್ಲಿ ಒಂದಷ್ಟು ಕಟ್ಟುನಿಟ್ಟು ಪಾಲಿಸಿಕೊಂಡು ವೈದ್ಯರು ಹೇಳುವ ಆಹಾರ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಕಾಯಿಲೆಯನ್ನು ನಿಯಂತ್ರಿಸಿಕೊಂಡು ಬದುಕಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ವೈದ್ಯರು ಮೂತ್ರಾಂಗ ರೋಗಗಳಿಂದ ಬಳಲುವವರು ಪೊಟ್ಯಾಸಿಯಂಯುಕ್ತ ಆಹಾರವನ್ನು ಸೇವಿಸಬಾರದು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಆಹಾರವನ್ನು ಪೊಟ್ಯಾಸಿಯಂ ಮುಕ್ತವನ್ನಾಗಿ ಮಾಡುವುದು ಹೇಗೆ ಪ್ರಶ್ನೆ ಹಲವರನ್ನು ಕಾಡಬಹುದು. ಇದಕ್ಕೆ ಸುಲಭೋಪಾಯವೂ ಇದೆ.

ಅದೇನೆಂದರೆ ತರಕಾರಿ ಅಥವಾ ಬೇಳೆಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಆ ನೀರನ್ನು ಬಗ್ಗಿಸಿ ತೆಗೆದು ಮತ್ತೆ ಬೇಯಿಸಿ ಉಪಯೋಗಿಸುವುದರಿಂದ ಪೊಟ್ಯಾಸಿಯಂನ್ನು ಪ್ರತ್ಯೇಕಿಸಬಹುದಾಗಿದೆ ಎಂಬುದು ವೈದ್ಯರು ನೀಡುವ ಸಲಹೆಯಾಗಿದೆ. ನಾವು ನಿತ್ಯ ಉಪಯೋಗಿಸುವ ಆಹಾರಗಳಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವ ಪದಾರ್ಥಗಳ ದೊಡ್ಡ ಪಟ್ಟಿಯೇ ಇವೆ. ಅವುಗಳೆಂದರೆ ರಾಗಿ, ಗೋಧಿ, ಸಜ್ಜೆ ಹಿಟ್ಟು,  ತರಕಾರಿಗಳಲ್ಲಿ ಬದನೆಕಾಯಿ, ನುಗ್ಗೆಕಾಯಿ, ಸುವರ್ಣಗೆಡ್ಡೆ, ಆಲೂಗೆಡ್ಡೆ, ಹಾಗಲಕಾಯಿ, ಹಣ್ಣುಗಳಲ್ಲಿ ನೆಲ್ಲಿಕಾಯಿ, ಸಪೋಟ, ಮೋಸಂಬಿ, ಕರಬೂಜ, ಪೀಚ್, ಪ್ಲಮ್, ಮಾವಿನ ಹಣ್ಣು ಮೊದಲಾದವುಗಳಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿಯೇ ಇದೆ. ಹೀಗಾಗಿ ಗೋಧಿಯನ್ನು ರೋಗಿಗಳು ವಾರಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿದರೆ ಉತ್ತಮ. ಇನ್ನು ಸಾಂಬಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅವುಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಾಗಿದೆ.

ಸಜ್ಜೆ, ಜೋಳ, ರಾಗಿ ಸೇವಿಸಬಾರದು, ಕಾಳುಗಳು ಅಥವಾ ಮೊಳಕೆ ಕಾಳುಗಳ ಬಳಕೆಯನ್ನು ಸಂಪೂರ್ಣ ಕಡಿಮೆ ಮಾಡಬೇಕು, ಹಸಿ ಅಥವಾ ಒಣಗಿಸಿದ ಕೊಬ್ಬರಿ, ಎಳನೀರನ್ನು ದೂರವಿಡಬೇಕು. ಮಸಾಲೆ ಪದಾರ್ಥಗಳನ್ನು ಸೇವಿಸಬಾರದು. ಸೇಬು, ಅನಾನಸ್, ಪಪ್ಪಾಯ, ಸೀಬೆ, ಕಿತ್ತಳೆ ಹಣ್ಣುಗಳ ಪೈಕಿ ದಿನಕ್ಕೆ ಯಾವುದಾದರು ಒಂದು ಹಣ್ಣನ್ನು ಸೇವಿಸಬಹುದು.
ಸಾಮಾನ್ಯವಾಗಿ ಮೂತ್ರಪಿಂಡ ಕಾಯಿಲೆಗಳಲ್ಲಿ ಹಲವು ವಿಧಗಳಿದ್ದು, ಕಾಯಿಲೆಯ ತೀವ್ರತೆ ಅಥವಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ದೇಹಸ್ಥಿತಿಯನ್ನು ಗಮನಿಸಿ ವೈದ್ಯರು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ಹೇಗೆ ಸೇವಿಸಬೇಕು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸಲಹೆಯನ್ನು ನೀಡುತ್ತಾರೆ ಅದರಂತೆ ರೋಗಿಗಳು ಕಟ್ಟು ನಿಟ್ಟಾಗಿ ಆಹಾರ ಕ್ರಮಗಳನ್ನು ಪಾಲಿಸಿದರೆ ತಮ್ಮನ್ನು ಬಾಧಿಸುತ್ತಿರುವ ಕಾಯಿಲೆಯನ್ನು ನಿಯಂತ್ರಣ ಮಾಡಿ ರಿಲ್ಯಾಕ್ಸ್ ಆಗಬಹುದು.

See also  ಚಿಂತೆ ಬಿಡಿ, ಮುಪ್ಪಿನ ಕಾಲದಲ್ಲಿ ಖುಷಿಯಾಗಿರಿ!

ಇವತ್ತು ಮೂತ್ರಾಂಗದ ಸಮಸ್ಯೆಯಿಂದ ಹಲವರು ಬಳಲುತ್ತಿದ್ದಾರೆ. ಇಂತಹವರು ವೈದ್ಯರು ನೀಡುವ ಸಲಹೆಯನ್ನು ಪಾಲಿಸಿಕೊಂಡು ಅದರಂತೆ ಆಹಾರಕ್ರಮಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗುತ್ತದೆ. ಬಾಯಿ ಚಪಲಕ್ಕೆ ಸಿಕ್ಕಿದೆಲ್ಲವನ್ನು ತಿಂದರೆ ಅದರ ಪರಿಣಾಮವನ್ನು ರೋಗಿಯೇ ಎದುರಿಸಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆ ಅಗತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು