News Kannada
Friday, September 30 2022

ಆರೋಗ್ಯ

ಗರ್ಭಿಣಿಯರು ಯಾವ ಆಹಾರ ಸೇವಿಸಬೇಕು? - 1 min read

Photo Credit :

ಗರ್ಭಿಣಿಯರು ಯಾವ ಆಹಾರ ಸೇವಿಸಬೇಕು?

ಗರ್ಭಿಣಿ ಮಹಿಳೆಯರು ದಿನನಿತ್ಯ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ತಮ್ಮ ಆರೋಗ್ಯದೊಂದಿಗೆ ಗರ್ಭದಲ್ಲಿರುವ ಮಗುವು ಆರೋಗ್ಯಯುತವಾಗಿ ಜನಿಸಲು ಸಾಧ್ಯವಾಗುತ್ತದೆ.

ಪೋಷಕಾಂಶಯುಕ್ತ ಆಹಾರವನ್ನು ಸೇವಿಸದಿದ್ದರೆ, ಬಹಳಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದು ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಆದ್ದರಿಂದ ಪೋಷಕಾಂಶಯುಕ್ತ ಆಹಾರವನ್ನು ಅಗತ್ಯವಾಗಿ ಸೇವಿಸಬೇಕಾಗುತ್ತದೆ.ಗರ್ಭಾವಧಿಯ ದಿನಗಳಲ್ಲಿ ಮಹಿಳೆಯರು ಕ್ಯಾಲೋರಿ, ಪ್ರೊಟೀನ್, ಕೊಬ್ಬಿನಾಂಶ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಡಿ, ವಿಟಮಿನ್ ಬಿ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಅಗತ್ಯವಾಗಿದೆ. ಈ ಪೋಷಕಾಂಶಗಳು ಕೆಲವೊಂದು ತರಕಾರಿ, ಸೊಪ್ಪು, ಹಾಲು ಮೊದಲಾದವುಗಳಲ್ಲಿದ್ದು, ಯಾವ ಪದಾರ್ಥಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ವೈದ್ಯರು ಸಲಹೆ ನೀಡುತ್ತಾರೆ.

ಗರ್ಭಿಣಿಯ ಮಹಿಳೆಯರ ಆಹಾರ ಸೇವನೆಯು ಸಾಮಾನ್ಯರಾಗಿದ್ದಾಗ ಸೇವಿಸುತ್ತಿದ್ದ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರಬೇಕು. ಹೇಗೆಂದರೆ, ಮೊದಲ ತ್ರೈಮಾಸಿಕದಲ್ಲಿ 150 ಕ್ಯಾಲೋರಿ, ಎರಡನೇ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ ದಿನವಹಿ 350 ಕ್ಯಾಲೋರಿ ಇರುವಂತೆ  ನೋಡಿಕೊಳ್ಳಬೇಕು. ಈ ಅಧಿಕ ಪ್ರಮಾಣವು ಗರ್ಭಕೋಶ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೂ, ಹಾಲುಣಿಸುವ ಅವಧಿಯಲ್ಲಿ ಬೇಕಾಗುವ ಕ್ಯಾಲೋರಿ ಮೀಸಲು ಸಂಗ್ರಹಣೆಗೂ ಹಾಗೂ ಗರ್ಭಿಣಿಯರ ದೇಹ ತೂಕ ಹೆಚ್ಚಾಗುವುದರಿಂದ ಅದರ ನಿರ್ವಹಣೆಗೂ ಅಗತ್ಯವಾಗಿದೆ.

ಇನ್ನು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಮೊಟ್ಟೆ, ಹಾಲು, ಮಾಂಸ, ಕಾಳು, ಬೇಳೆ ಮತ್ತು ಎಣ್ಣೆಕಾಳುಗಳಲ್ಲಿ ಪ್ರೊಟೀನ್ ಅಂಶವಿದ್ದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಗರ್ಭಿಣಿಯಲ್ಲಿ ಸಾಮಾನ್ಯ ಮಹಿಳೆಗಿಂತ ಶೇ.50ರಷ್ಟು ಅಧಿಕ ಪ್ರೊಟೀನ್ ಹೆಚ್ಚಾಗಿರಬೇಕು. ಇದು ಗರ್ಭಕೋಶ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ, ಸ್ತನಗಳ ಬೆಳವಣಿಗೆಗೆ ಮತ್ತು ರಕ್ತದ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ. ಆದ್ದರಿಂದ ಪ್ರೊಟೀನ್ಯುಕ್ತ ಆಹಾರ ಪ್ರದಾರ್ಥ ಸೇವನೆಯನ್ನು ಹೆಚ್ಚಾಗಿ ಮಾಡಬೇಕು.

ವೈದ್ಯರ ಪ್ರಕಾರ ಗರ್ಭಿಣಿ ಮಹಿಳೆಯರು ಸೇವಿಸುವ ಆಹಾರ ಪದಾರ್ಥದಲ್ಲಿ ಕೊಬ್ಬಿನಾಂಶದ ಒಟ್ಟು ಪ್ರಮಾಣವು ಕ್ಯಾಲೋರಿಯ ಶೇಕಡ 20ಭಾಗವಾಗಿರಬೇಕು. ಅಲ್ಲದೆ ಸೇವಿಸುವ ಆಹಾರದಲ್ಲಿ ಕೊಬ್ಬಿನ ಪ್ರಮಾಣವು ನೇರವಾಗಿ 30 ಗ್ರಾಂನಲ್ಲಿರಬೇಕು. ಇದಕ್ಕಾಗಿ ತುಪ್ಪ, ಬೆಣ್ಣೆ ಮತ್ತು ಅಡುಗೆ ಎಣ್ಣೆಯನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.

ಗರ್ಭದಲ್ಲಿರುವ ಮಗುವಿನ ಮೂಳೆ ಹಲ್ಲುಗಳು ಸದೃಢವಾಗಿ ಬೆಳೆಯಲು ಕ್ಯಾಲ್ಸಿಯಂ ಅಗತ್ಯ. ದಿನಕ್ಕೆ ಕನಿಷ್ಟ 1200 ಮಿ.ಗ್ರಾಂ ಕ್ಯಾಲ್ಸಿಯಂಯುಕ್ತ ಆಹಾರ ದೇಹವನ್ನು ಸೇರಬೇಕಾಗುತ್ತದೆ. ಕಬ್ಬಿಣಾಂಶ ದಿನಕ್ಕೆ 35 ಮಿ.ಗ್ರಾಂ ಪ್ರಮಾಣದಲ್ಲಿರಬೇಕು. ಇದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವನ್ನು ಕೂಡ ಹೆಚ್ಚು ಮಾಡುತ್ತದೆ. ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗಬೇಕಾದರೆ, ಲಿವರ್, ಒಣಹುರುಳಿ, ಒಣಹಣ್ಣುಗಳು, ಹಸಿರು ತರಕಾರಿಗಳು, ಮಾಂಸ, ಮೊಟ್ಟೆ, ಎಣ್ಣೆ, ಕಾಳುಗಳು, ಇಡ್ಲಿ, ದೋಸೆ, ಮೊಳಕೆ ಕಾಳುಗಳು, ಕಿತ್ತಳೆ ಹಣ್ಣುಗಳನ್ನು ತಪ್ಪದೆ ಸೇವಿಸುವುದು ಅಗತ್ಯ.

ಇದೆಲ್ಲದರ ನಡುವೆ ದಿನಕ್ಕೆ 400ಮಿ.ಗ್ರಾಂನಷ್ಟು ವಿಟಮಿನ್ಸ್9(ಫೋಲಿಕ್ ಆ್ಯಸಿಡ್) ದೇಹಕ್ಕೆ ಆಹಾರದ ಮೂಲಕ ಸೇರುವಂತೆ ನೋಡಿಕೊಳ್ಳಬೇಕು. ಈ ಪೋಷಕಾಂಶವು ಡಿಎನ್ಎ, ಆರ್ಎನ್ಎ ಸಂರಚನೆಯಲ್ಲಿ ಸಹಾಯವಾಗುತ್ತದೆ. ಜತೆಗೆ ಮಗುವಿನ ತೂಕ ಹೆಚ್ಚಿಸಲು, ತಾಯಿಯ ರಕ್ತದ ಪ್ರಮಾಣ ಮತ್ತು ಕೆಂಪು ರಕ್ತಕಣವನ್ನು ಹೆಚ್ಚಿಸಲು ಕೂಡ ಸಹಕಾರಿಯಾಗುತ್ತದೆ.

See also  ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು

ವಿಟಮಿನ್ಸ್9 ಪೋಷಕಾಂಶವನ್ನು ಸೊಪ್ಪು, ತರಕಾರಿ, ಲಿವರ್, ಕಾಳು, ಮೊಳಕೆ ಗೋಧಿ, ಬಾದಾಮಿ, ಸೋಯಾ, ಕಿತ್ತಳೆ ಹಣ್ಣಿನ ರಸ, ಕಡಲೆಕಾಯಿ ಮೊದಲಾದ ಪದಾರ್ಥಗಳಿಂದ ಪಡೆಯಬಹುದಾಗಿದೆ.

ಸಾಮಾನ್ಯ ಮಹಿಳೆಯರಾಗಿದ್ದಾಗ ಇರುವ ಸ್ಥಿತಿಗೂ ಗರ್ಭಿಣಿಯಾಗಿರುವಾಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ತನ್ನ ಮತ್ತು ಮಗುವಿನ ಆರೋಗ್ಯದ ಜವಬ್ದಾರಿಯೂ ಹೆಚ್ಚಿರುವುದರಿಂದ ತಾವು ಸೇವಿಸುವ ಆಹಾರ ಪದಾರ್ಥಗಳತ್ತ ನಿಗಾವಹಿಸುವುದು ಅಷ್ಟೇ ಮುಖ್ಯವಾಗಿರುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು