News Kannada
Tuesday, September 27 2022

ಆರೋಗ್ಯ

ಚಳಿಗಾಲದಲ್ಲಿ ಚರ್ಮದತ್ತ ಎಚ್ಚರವಹಿಸಿ - 1 min read

Photo Credit :

ಚಳಿಗಾಲದಲ್ಲಿ ಚರ್ಮದತ್ತ ಎಚ್ಚರವಹಿಸಿ

ವಾತಾವರಣ ಬದಲಾದಾಗ ಆರೋಗ್ಯದಲ್ಲಿ ಏರುಪೇರಾಗಿ ನೆಗಡಿ, ಕೆಮ್ಮು, ಜ್ವರ ಮೊದಲಾದವುಗಳು ಮಾತ್ರ ಕಾಣಿಸಿಕೊಳ್ಳುವುದಲ್ಲದೆ, ಚಳಿಗಾಲದ ಚಳಿ ಚರ್ಮದ ಮೇಲೆಯೂ ಪರಿಣಾಮ ಬೀರಿ ಕಾಂತಿಯುಕ್ತ ಚರ್ಮವನ್ನು ಹಾಳುಗೆಡವಿಬಿಡುತ್ತದೆ.

ಚಳಿಗೆ ಚರ್ಮದಲ್ಲಿ ಬಿರುಕು ಕಾಣಿಸಿಕೊಂಡು  ಕಾಂತಿ ಕಳೆದುಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ತೊಂದರೆಯಾಗಿದೆ.  ಆದುದರಿಂದ ಚಳಿಗಾಲದಲ್ಲಿ ಚರ್ಮದ ಬಗ್ಗೆ ಒಂದಷ್ಟು ಕಾಳಜಿ ವಹಿಸುವುದು ಅಗತ್ಯ. ಒಂದು ವೇಳೆ ಕಾಳಜಿ ವಹಿಸದೆ ಹೋದರೆ ಕಳೆಗುಂದಿದ ಚರ್ಮಕ್ಕೆ ಯಾವುದೇ ರೀತಿಯ ಕ್ರೀಮ್ ಹಚ್ಚಿದರೂ ಅದರಿಂದ ಪ್ರಯೋಜನ ಪಡೆಯುವುದು ಕಷ್ಟವಾಗುತ್ತದೆ.

ಚಳಿಗಾಲದಲ್ಲಿ ಚರ್ಮ ಸುಂದರವಾಗಿಯೂ, ಆರೋಗ್ಯವಾಗಿಯೂ ಇರಬೇಕಾದರೆ ಚರ್ಮರೋಗ ತಜ್ಞರು ನೀಡುವ ಕೆಲವೊಂದು ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವುದು ಅಗತ್ಯವಾಗುತ್ತದೆ. ಚಳಿಗಾಲದಲ್ಲಿ ಕೈಕಾಲುಗಳಲ್ಲಿ ಬಿರುಕು, ಚರ್ಮದಲ್ಲಿ ಒಡಕು ಕಂಡು ಬರುತ್ತದೆ. ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗಿ ಬಿಡುತ್ತದೆ.

ಚರ್ಮದ ಆರೋಗ್ಯ ಕಾಪಾಡಬೇಕಾದರೆ ಒಂದಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಿತಿಮೀರಿದ ಚಳಿಯಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು,  ಜತೆಗೆ ವೈದ್ಯರು ಹೇಳುವ ಕ್ರೀಮ್ ಗಳನ್ನು ಹಚ್ಚುವುದರೊಂದಿಗೆ  ಪೌಷ್ಠಿಕಾಂಶವುಳ್ಳ ಆಹಾರಗಳಾದ ಕಾಯಿಪಲ್ಯೆ, ತರಕಾರಿಗಳನ್ನು ಆಹಾರವಾಗಿ ಸೇವಿಸಬೇಕಾಗುತ್ತದೆ. ಕೃತಕ ಸೌಂದರ್ಯ ವರ್ಧಕಗಳನ್ನು ದೂರವಿಡಬೇಕು. ಬಿಗಿಯಾದ ಉಡುಪನ್ನು ಧರಿಸಬಾರದು. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲಿಟ್ಟುಕೊಳ್ಳುವ ಮೂಲಕ  ಜಿಡ್ಡಿಗೆ ಇತಿಶ್ರೀ ಹಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಚರ್ಮದ ಮೇಲೆ ಧೂಳು, ಕೊಳೆ ನಿಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. 

ಬ್ಲಾಕ್ ಬೆರ್ರಿ, ಬ್ಲೂ ಬೆರ್ರಿ, ಹುಳಿಯಿಲ್ಲದ ದಾಕ್ಷಿ ಹಣ್ಣುಗಳು, ಸ್ಟ್ರಾ ಬೆರ್ರಿ,  ಟೊಮೇಟೊದಲ್ಲಿರುವ ಲೈಕೊಪಿನ್, ದಾಳಿಂಬೆಯಲ್ಲಿರುವ ಪಾಲಿಫೆನಾಲ್ಸ್ ಇವೆಲ್ಲವೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿವೆ. 

ಮೊಟ್ಟೆ, ಸ್ಪಿನಾಚ್, ಮೊಟ್ಟೆ ಬಿಳಿ ಭಾಗ,  ಕಡಿಮೆ ಕೊಬ್ಬಿನಂಶ ಹೊಂದಿರುವ ಡೈರಿ ಉತ್ಪನ್ನಗಳು, ಬ್ರೊಕೋಲಿ, ಕ್ಯಾರೆಟ್  ನಲ್ಲಿರುವ  ಕೆರೊಟೆನಾಯಿಡ್ಸ್  ಚರ್ಮದ ಬಿಗಿತಕ್ಕೆ ಕಾರಣವಾಗುವಂತಹ ಅಂಶಗಳನ್ನು ಹೊಂದಿವೆ. ನೆಲ್ಲಿಕಾಯಿ, ಸೀಬೆ ಕಾಯಿ, ಸಿಟ್ರಿಕ್ ಆಸಿಡ್ ಇರುವಂತಹ ಹಣ್ಣುಗಳು, ವಿಟಮಿನ್ ಈ  ಭರಿತ ತರಕಾರಿಗಳು, ಎಣ್ಣೆಗಳು, ಬೀಜಗಳು ಅದರಲ್ಲಿ ಬಾದಾಮಿ, ಸೂರ್ಯಕಾಂತಿ ಎಣ್ಣೆ, ಆಲಿವ್, ಇವೆಲ್ಲವೂ ಸುಕ್ಕನ್ನು ನಿವಾರಿಸುವ ಅಂಶಗಳನ್ನು ಹೊಂದಿದೆ. ಚಳಿಯ ಸಮಯದಲ್ಲಿ ಚರ್ಮವನ್ನು ರಕ್ಷಿಸುವುದು ಸ್ವಲ್ಪ ಕಷ್ಟದ ಕೆಲಸವಾಗಿದ್ದರಿಂದ ಅದರತ್ತ ಹೆಚ್ಚಿನ ಗಮನಹರಿಸುವುದು ಒಳ್ಳೆಯದು.

See also  ಮುಂಜಾನೆಯ ವಾಯುವಿಹಾರ ಆರೋಗ್ಯಕ್ಕೆ ಆಹ್ಲಾದಕರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು