News Kannada
Tuesday, January 31 2023

ಆರೋಗ್ಯ

ಒಳಗಣ್ಣಿನಿಂದ ನೋಡುವುದು ಅಂದ್ರೆ?

Photo Credit :

ಒಳಗಣ್ಣಿನಿಂದ ನೋಡುವುದು ಅಂದ್ರೆ?

ನಮಗೆ ಇರುವುದೆೇ ಎರಡು ಕಣ್ಣು. ಆದರೂ ಕೆಲವರು ನಿಮ್ಮ ಒಳಗಣ್ಣಿನಿಂದ ನೋಡಿ ಎಂದಾಗ ಅಚ್ಚರಿಯಾಗುವುದು ಸಹಜ. ಅಷ್ಟೇ ಅಲ್ಲ ಇಷ್ಟಕ್ಕೂ ಆ ಒಳಗಣ್ಣು ಯಾವುದಪ್ಪಾ ಎಂಬ ಪ್ರಶ್ನೆಯೂ ಮೂಡುತ್ತದೆ.

ನಮ್ಮ ಹೊರಗಣ್ಣಿಗೆ ಎಲ್ಲವೂ ಕಾಣುತ್ತದೆ. ಜತೆಗೆ ಪಾಪ ಪುಣ್ಯ, ನ್ಯಾಯ ಧರ್ಮ ಯಾವುದು ಎಂಬುದು ಕೂಡ ತಿಳಿಯುತ್ತದೆ. ಕಣ್ಣು ಇರುವುದು ಕೇವಲ ಸೌಂದರ್ಯ ಸವಿಯೋಕೆ ಅಲ್ಲ. ಅದರಾಚೆಗಿನ ಭವ್ಯತೆಯನ್ನು ನೋಡೋದಕ್ಕೆ. ಮೇಲ್ನೋಟಕ್ಕೆ ಕಂಡಿದೆಲ್ಲವೂ ಸತ್ಯ ಎಂದು ನಂಬಲಾಗುವುದಿಲ್ಲ.  ಅದರಾಚೆಗೆ ಇನ್ನೇನೋ ನಿಗೂಢತೆ ಅಡಗಿರುತ್ತದೆ. ಅದಕ್ಕಾಗಿ ಹಿರಿಯರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದಿರುವುದು.

ನಾವು ಮೇಲ್ನೋಟಕ್ಕೆ ಏನು ಕಾಣುತ್ತದೆಯೋ ಅದನ್ನೇ  ಸತ್ಯ ಎಂದು ನಂಬುತ್ತೇವೆ. ಆದ್ದರಿಂದಲೇ ಕೆಲವರ ವಿಚಾರಗಳು ಹೊರಬಂದಾಗ ಅಚ್ಚರಿಪಡುತ್ತೇವೆ. ಇವತ್ತು ಪರದೆಯಾಚೆಗಿನ ಚಟುವಟಿಕೆಗಳೇ ಜಾಸ್ತಿ. ನಮಗೆ ಒಬ್ಬ ವ್ಯಕ್ತಿಯ ಒಂದು ಮುಖ ಮಾತ್ರ ಕಾಣುತ್ತಿದೆ. ಮತ್ತೊಂದು ಮುಖ ಕಾಣುತ್ತಿಲ್ಲ.  ಏನು ಮಾಡಿದ್ದೇವೆ ಅದೇ ನಿಜ ಎಂಬ ತೀಮರ್ಾನಕ್ಕೆ ಬಂದು ಬಿಟ್ಟಿದ್ದೇವೆ. ಪರಾಂಬರಿಸಿ ನೋಡುವ ಸಮಯ ನಮಗಿಲ್ಲವಾಗಿದೆ.

ಇವತ್ತು ಕಣ್ಣಿನಿಂದ ಒಳ್ಳೆಯದನ್ನು ನೋಡೋದಕ್ಕಿಂತ ಹೆಚ್ಚಾಗಿ ಕೆಟ್ಟದನ್ನೇ ನೋಡುತ್ತಿದ್ದೇವೆ. ಮತ್ತು ಅದಕ್ಕೆ ಬಹು ಬೇಗ ಹೊಂದಿಕೊಳ್ಳುತ್ತಿದ್ದೇವೆ. ನಮ್ಮ ಬದುಕು ನಮಗೆ ಎನ್ನುವ ಮಟ್ಟಕ್ಕೂ ಬಂದು ನಿಂತಿದ್ದೇವೆ. ಕೆಟ್ಟದನ್ನು ನೋಡಿಯೂ ನೋಡದಂತೆ ಸಾಗುವ ಪ್ರಯತ್ನ ಮಾಡಬೇಕು ಇದು ನಿಜಕ್ಕೂ ಒಳ್ಳೆಯದು. ಕೆಟ್ಟವರೊಂದಿಗೆ ಒಳ್ಳೆಯವರಾಗಿಯೇ ಉಳಿಯುವುದು ಸುಲಭವಲ್ಲ. ಆದರೂ ಕೆಟ್ಟವರಿಗೆ ಒಂದಷ್ಟು ಒಳ್ಳೆತನವನ್ನು ತೋರಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು. ಕೆಟ್ಟವರೊಂದಿಗೆ ಇದ್ದು ತಾವು ಕೆಟ್ಟವರಾಗದೆ ಉಳಿದವರು ಎಷ್ಟೋ ಮಂದಿಯಿದ್ದಾರೆ.

ಹಿರಿಯರು ಕೆಟ್ಟವರಿಂದ ದೂರ ಇರಿ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಒಳ್ಳೆಯದೇ. ಏಕೆಂದರೆ ಕೆಟ್ಟವರ ನಡುವೆ ಇದ್ದರೆ ನಾವು ಕೂಡ ಸಮಾಜದ ಕಣ್ಣಿಗೆ ಕೆಟ್ಟವರಾಗಿಯೇ ಕಾಣುತ್ತೇವೆ. ಒಮ್ಮೆ ನಮ್ಮ ಮೇಲೆ ಅಪವಾದ ಬಂದರೆ ಮತ್ತೆ ಅದನ್ನು ಹೋಗಲಾಡಿಸುವುದು ಸುಲಭದ ಕೆಲಸವಲ್ಲ.

ಒಂದು ಕ್ಷಣ ಕಣ್ಣುಮುಚ್ಚಿ ನೋಡು ನಮ್ಮ ಮುಂದೆ ಏನಿದೆ ಏನೂ ಇಲ್ಲ. ಎಲ್ಲವೂ ಕತ್ತಲೇ ಆ ಕತ್ತಲನ್ನು ಹೋಗಲಾಡಿಸಬೇಕಾದರೆ ನಾವು ಕಣ್ಣು ತೆರೆಯಬೇಕು. ಹೊರಕಣ್ಣು ಮುಚ್ಚಿದಾಗ ಮಾತ್ರ ಒಳಗಣ್ಣು ಕಾಣುತ್ತದೆ. ಅದು ಮನುಷ್ಯ ಜೀವನ ಇಷ್ಟೇನಾ ಎಂದು ಪ್ರಶ್ನಿಸುತ್ತದೆ. ನಮ್ಮ ಒಳಗಿನ ಕಣ್ಣು ಕಾಮಾದಿ ಅರಿಷಡ್ವರ್ಗಗಳಿಂದ ತುಂಬಿಕೊಂಡಿರುವುದರಿಂದ ಅದನ್ನು ಆಳವಾಗಿ ನಾವು ನೋಡುವುದಿಲ್ಲ.

ಒಂದೆಡೆ ವಿದ್ಯಾವಾಚಸ್ಪತಿ ದಾಸ ಸಾಹಿತ್ಯ ಹರಿಕಾರ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು ಹೇಳುತ್ತಾರೆ. ನಮ್ಮೊಳಗೆ ಕಣ್ಣಿದೆ ಎಂದು ಗೊತ್ತಾಗಬೇಕಾದರೆ ಹೊರಗಣ್ಣು ಮುಚ್ಚಬೇಕು. ಒಳಗಣ್ಣುಗಳನ್ನು ತೆರೆಯಬೇಕು. ಒಳಗಣ್ಣು ತೆರೆದರೆ ಅಲ್ಲಿ ಚಿಮ್ಮುತ್ತಿರುವ ಚಿರಂತನ ತೇಜಸ್ಸಿನ ಅಮೃತದರ್ಶನವಾಗುತ್ತದೆ. ಅಮೃತಪಾನ ಭಾಗ್ಯವನ್ನು ಪಡೆಯುತ್ತೇವೆ. ಚಿರಂಜೀವಿಗಳಾಗುತ್ತೇವೆ. ಒಮ್ಮೆ ಒಳಗಣ್ಣು ತೆರೆಯಿತೆಂದರೆ ಮತ್ತೆ ಹೊರಗಣ್ಣು ತೆರೆಯುವುದಿಲ್ಲ

See also  ಉತ್ತಮ ಆರೋಗ್ಯಕ್ಕಾಗಿ ಆಹಾರವನ್ನು ಚೆನ್ನಾಗಿ ಅಗಿಯಿರಿ....
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು