News Kannada
Saturday, December 03 2022

ಆರೋಗ್ಯ

ನಮ್ಮ ಇಷ್ಟದ ಸಿಹಿ…ಆರೋಗ್ಯಕ್ಕೆ ಕಹಿಯಾಗಬಹುದು!

Photo Credit :

ನಮ್ಮ ಇಷ್ಟದ ಸಿಹಿ...ಆರೋಗ್ಯಕ್ಕೆ ಕಹಿಯಾಗಬಹುದು!

ನಾವೆಲ್ಲರೂ ಸಂತೋಷವನ್ನು ಸಿಹಿ ಹಂಚಿ ಸಂಭ್ರಮಿಸುತ್ತೇವೆ. ಪ್ರತಿಯೊಬ್ಬರ ಬದುಕು ಕೂಡ ಸಿಹಿಯಾಗಿರಬೇಕೆಂದು ಬಯಸುತ್ತೇವೆ. ಆದರೆ ಇದೇ ಸಿಹಿ ನಮ್ಮ ಬದುಕಿಗೆ ಕಹಿಯಾಗುತ್ತಿದೆ ಎಂಬ ಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನಬಹುದು.

ಕಣ್ಣು ಸೆಳೆಯುವ, ಬಾಯಿ ಚಪ್ಪರಿಸುವ ಸಿಹಿ ತಿನಿಸುಗಳು ಬೇಕಾದಷ್ಟಿವೆ. ಅಷ್ಟೇ ಅಲ್ಲ ಪ್ರತಿ ಹಬ್ಬಕ್ಕೂ ಒಂದಲ್ಲ ಒಂದು ರೀತಿಯ ವಿಶೇಷ ತಿಂಡಿಗಳನ್ನು ಮಾಡಿ ಗ್ರಾಹಕರನ್ನು ಸೆಳೆಯುವ ವ್ಯಾಪಾರಿಗಳಿಗೂ ಕೊರತೆಯಿಲ್ಲ.

ಈಗ ಹೋಬಳಿ ಕೇಂದ್ರಗಳಿಂದ ಆರಂಭವಾಗಿ ಎಲ್ಲ ಪಟ್ಟಣಗಳಲ್ಲೂ ಬೇಕರಿಗಳು ತಲೆ ಎತ್ತಿದ್ದು, ವಿವಿಧ ಬಗೆಯ ಸಿಹಿ ತಿನಿಸುಗಳು ಗಮನಸೆಳೆಯುತ್ತವೆ. ನೂರಾರು ಬಗೆಯ ವಿಚಿತ್ರ ತಿನಿಸುಗಳು ಒಂದಕ್ಕಿಂತ ಮತ್ತೊಂದು ಎಂಬಂತೆ ರುಚಿ, ಆಕಾರ, ಬಣ್ಣಗಳಲ್ಲಿ ಸೆಳೆಯುತ್ತವೆ. ಬಾಯಿ ಚಪಲ ಇವುಗಳನ್ನೆಲ್ಲ ತಿಂದು ಬಿಡಬೇಕೆನಿಸುತ್ತದೆ. ಆದರೆ ಈ ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದರೆ ಅನಾರೋಗ್ಯಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಮಾತ್ರ ಸತ್ಯವಾದ ಮಾತು.

ಸಿಹಿ ತಿನಿಸುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿಗಳಿರುತ್ತವೆ. ಹೊರತು ಪೋಷಕಾಂಶಗಳು ಇರುವುದಿಲ್ಲ ಎಂಬುದನ್ನು ನಾವು ಮೊದಲಿಗೆ ತಿಳಿದುಕೊಳ್ಳಬೇಕು. ಜತೆಗೆ ಹೆಚ್ಚಿನ ಪ್ರಮಾಣದ ಕ್ಯಾಲರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದನ್ನು ಮನಗಾಣಬೇಕು. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ 2030ರ ಹೊತ್ತಿಗೆ ಭಾರತದಲ್ಲಿ ಮಧುಮೇಹ ರೋಗಿಗಳು ಪ್ರಮಾಣ ಸುಮಾರು 101 ಮಿಲಿಯನ್ ತಲುಪಬಹುದೆಂದು ಹೇಳಿದೆ. ಇತರೆ ದೇಶದವರು ಸೇವಿಸುವ ಸಿಹಿ ಪದಾರ್ಥಗಳಿಗಿಂತಲೂ ನಮ್ಮ ದೇಶದ ಜನರು ಹೆಚ್ಚಾಗಿ ಸಿಹಿ ಪದಾರ್ಥ ಸೇವನೆ ಮಾಡುತ್ತಿದ್ದಾರೆ. ಇದರಿಂದ ಮಧುಮೇಹ, ಹೃದಯ ಸ್ನಾಯು ಕಿಡ್ನಿಯ ಸಮಸ್ಯೆಗಳು ಬಹಬೇಗ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಸಿಹಿ ತಿನಿಸು ಸೇವಿಸುವುದು ತಪ್ಪಲ್ಲ. ಆದರೆ ಅವುಗಳನ್ನು ಬೇಕರಿಯಿಂದ ಖರೀದಿಸುವ ಬದಲು ಮನೆಯಲ್ಲೇ ತಯಾರಿಸಿ ಸೇವಿಸಿದರೆ ಅಷ್ಟೊಂದು ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಮನೆಯಲ್ಲಿ ತಯಾರಿಸುವ ಸಿಹಿ ಪದಾರ್ಥಗಳಿಗೆ ಬಳಸುವ ಸಕ್ಕರೆಯ ಪ್ರಮಾಣದಲ್ಲಿ ಗಮನ ಹರಿಸಬಹುದು ಅಂಗಡಿಯಲ್ಲಿ ದೊರೆಯುವುದಕ್ಕಿಂತಲೂ ಮನೆಯಲ್ಲಿ ಮಾಡಿದ ತಿನಿಸುಗಳು ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತವೆ.

ಹಬ್ಬದ ಸಮಯದಲ್ಲಿ ಸಿಹಿತಿನಿಸುಗಳನ್ನು ಆದಷ್ಟೂ ಕಡಿಮೆ ಸೇವಿಸುವುದು ಒಳ್ಳೆಯದು. ಅತಿಯಾಗಿ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಡಿ. ಕೆಲವು ಸಿಹಿ ಪದಾರ್ಥಗಳನ್ನು ಸ್ವಲ್ಪ ಸೇವಿಸಬೇಕು. ರುಚಿಗೆ ಮನಸೋತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ನೈಸರ್ಗಿಕ ಸಿಹಿಯನ್ನು ಉಪಯೋಗಿಸಿ ಮನೆಯಲ್ಲಿ ಸಿಹಿತಿನಿಸುಗಳನ್ನು ಮಾಡುವಾಗ ಬಿಳಿ ಸಕ್ಕರೆ ಅಥವಾ ಕೃತಕ ಸಿಹಿಗಳನ್ನು ಉಪಯೋಗಿಸುವುದನ್ನು ಆದಷ್ಟು ತಪ್ಪಿಸಿ ಖರ್ಜೂರ ಬೆಲ್ಲ, ಅಂಜೂರ ಮತ್ತು ಮಾಂಕ್ಫ್ರೂಟ್ ಮುಂತಾದ ನೈಸರ್ಗಿಕ ಸಿಹಿಕಾರಕ ಪದಾರ್ಥಗಳನ್ನು ಉಪಯೋಗಿಸಿ. ರಿಫೈನ್ಡ್ ಸಕ್ಕರೆ ಬಿಟ್ಟು ಈ ನೈಸರ್ಗಿಕ ಸಿಹಿಯನ್ನು ಸಿಹಿತಿಂಡಿಗಳಲ್ಲಿ ಬಳಕೆ ಮಾಡುವುದರಿಂದ ಜೀರ್ಣಾಂಗವ್ಯೂಹ ಹೆಚ್ಚು ಚೈತನ್ಯದಾಯಕವನ್ನಾಗಿಸುತ್ತದೆ. ಹಲ್ಲುಗಳ ಆರೋಗ್ಯ ಮತ್ತು ಜೀರ್ಣಕ್ರಿಯೆ ಸುಗಮವಾಗಲು ಹಾಗೂ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

See also  ಅಲೂವೆರಾದಿಂದ ತ್ವಜೆಯ ಕಾಂತಿ ಹೆಚ್ಚಾಗುತ್ತದೆ

ಮಾಂಕ್ಫ್ರೂಟ್ ಹಣ್ಣಿನ ರಸವು ಸಕ್ಕರೆಗಿಂತಲೂ 300ಪಟ್ಟು ಸಿಹಿಯಾಗಿರುತ್ತದೆ. ಮತ್ತು ಝೀರೋ ಕ್ಯಾಲರಿ ಇರುವುದಿಲ್ಲ. ಮಾಂಕ್ ಫ್ರುಟ್ ಹಣ್ಣಿನ ರಸದಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು ಕ್ಯಾಲರಿ ರಹಿತ ಸಿಹಿಯಾಗಿರುವುದರಿಂದ ಯಾರು ಬೇಕಾದರೂ ಯಾವ ವಯೋಮಾನದವರೂ ಈ ಹಣ್ಣಿನಿಂದ ತಯಾರಿಸಿದ ಸಿಹಿ ಪದಾರ್ಥಗಳನ್ನು ಸೇವಿಸಬಹುದು. ಬಾಯಿ ಚಪಲಕ್ಕೆ ಬಲಿಯಾಗಬೇಡಿ ನಿಮ್ಮ ಸುತ್ತಮುತ್ತಲಿನವರೆಲ್ಲಾರೂ ಸಂತೋಷದಿಂದ ಸಿಹಿತಿಂಡಿಗಳನ್ನು ಮೆಲ್ಲುತ್ತಿರುವಾಗ ಆಸೆಗೆ ಬಲಿಯಾಗದೇ ಇರುವುದು ತುಂಬ ಕಷ್ಟಕರ ವಿಚಾರ ಆದರೆ ಬಾಯಿಚಪಲಕ್ಕೆ ಬಲಿಯಾಗದೇ ಎಷ್ಟು ಪ್ರಮಾಣದಲ್ಲಿ ಏನನ್ನು ತಿನ್ನಬೇಕು ಎಂಬುದರ ಕುರಿತು ವಿಚಾರಿಸಿ ವ್ಯವಹರಿಸಿದರೆ ನಿಮಗೆ ನೀವು ಉಪಕಾರ ಮಾಡಿಕೊಂಡಂತೆ.

ಸಂಸ್ಕರಿತ ಆಹಾರ ಮತ್ತು ಪಾನೀಯಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಉಪಯೋಗಿಸದಿರುವುದೇ ಒಳಿತು. ಹೆಚ್ಚಿನ ಸಂಸ್ಕರಿತ ಆಹಾರಗಳು ಹಾಗೂ ಪಾನೀಯಗಳು ವ್ಯಾಪಕ ಪ್ರಮಾಣದ ಫಲಶರ್ಕರ ಹೊಂದಿರುತ್ತದೆ. ಮತ್ತು ಇದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಆದಾಗ್ಯೂ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಇನ್ನಿತರ ಮಾರ್ಗಗಳಿವೆ. ಏನೇ ಆದರೂ ಬಾಯಿಗೆ ಸಿಹಿ ಎನಿಸಿದ್ದು ಆರೋಗ್ಯಕ್ಕೆ ಕಹಿ ಎಂಬುದನ್ನು ಮರೆಯಬಾರದು…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು