News Kannada
Friday, December 09 2022

ಆರೋಗ್ಯ

ಟೆನ್ಷನ್ ದೂರ ಮಾಡಿ ನಿಶ್ಚಿಂತರಾಗಿ..

Photo Credit :

ಟೆನ್ಷನ್ ದೂರ ಮಾಡಿ ನಿಶ್ಚಿಂತರಾಗಿ..

ನಮ್ಮದೀಗ ಸದಾ ಟೆನ್ಷನ್ ಬದುಕು. ಯಾವುದನ್ನೂ ನಿಧಾನವಾಗಿ, ಯೋಚಿಸಿ ಮುನ್ನಡೆಯಲು ತಯಾರಿಲ್ಲ. ಎಲ್ಲವೂ ತಕ್ಷಣದಲ್ಲೇ ಆಗಬೇಕು. ಹೀಗಾಗಿಯೇ ಚಿಕ್ಕಪುಟ್ಟ ವಿಚಾರಗಳಿಗೆ ಸಿಡಿಮಿಡಿಗೊಳ್ಳುತ್ತೇವೆ. ಮತ್ಯಾರೋ ಮೇಲೆ ಕೂಗಾಡುತ್ತೇವೆ. ಯಾರೊಂದಿಗೂ ಬೆರೆಯಲು ತಯಾರಿಲ್ಲ ಕೇಳಿದರೆ ಬಿಜ್ಹಿ ಎಂಬ ಸಬೂಬು. ಇವತ್ತಿನ ಪರಿಸ್ಥಿತಿಯೆ ಹಾಗಿದೆ. ನಾವು ಕಾರ್ಯ ನಿರ್ವಹಿಸುವ ಕ್ಷೇತ್ರವೂ ಅಷ್ಟೆ. ಸದಾ ಮಿಂಚಿನ ಸಂಚಾರದಂತೆ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಐದಂಕಿ ಸಂಬಳಕೊಡುವ ಸಂಸ್ಥೆ ನಮ್ಮಿಂದ ಅದರ ಹತ್ತು ಪಟ್ಟು ಪ್ರಮಾಣದ ದುಡಿಮೆಯನ್ನು ಬಯಸುತ್ತದೆ. ಹಾಗಾಗಿ ಪ್ರತಿಕ್ಷಣವೂ ಅಮೂಲ್ಯವೇ. ಮನಸ್ಸು ಯಾವಾಗ ಗೊಂದಲಕ್ಕೀಡಾಗುತ್ತದೆಯೋ ಅದರ ಪ್ರಭಾವ ಶರೀರದ ಮೇಲಾಗುತ್ತದೆ. ಹೊರ ಪ್ರಪಂಚಕ್ಕೆ ನಾವು ವಿಚಿತ್ರವಾಗಿ ಕಾಣುತ್ತೇವೆ. ಮಕ್ಕಳ, ಹೆಂಡತಿ, ಸಹದ್ಯೋಗಿಗಳ ಮೇಲೆ ಸಿಡುಕುತ್ತೇವೆ. ಅನಾವಶ್ಯಕ ಕೋಪ ಮಾಡಿಕೊಳ್ಳುತ್ತೇವೆ. ನಾವ್ಯಾಕೆ ಹೀಗೆ ಮಾಡಿಕೊಳ್ಳುತ್ತೇವೆ ಎಂಬುವುದು ನಮಗೆ ತಿಳಿಯುವುದಿಲ್ಲ.

ಆಹಾರ ಸೇವಿಸುವುದನ್ನು ಮರೆಯುತ್ತೇವೆ. ಸಮಯಕ್ಕೆ ಸರಿಯಾಗಿ ಹೊಟ್ಟೆ ಆಹಾರವನ್ನು ಹಸಿವಿನ ಮೂಲಕ ನೆನಪಿಸಿದರೂ ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡುತ್ತೇವೆ. ನಿದ್ದೆ ಕಡಿಮೆ ಮಾಡುವುದರಿಂದ ಕ್ರಿಯಾಶೀಲತೆ ಕಡಿಮೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಿದ್ದರೂ ನಿದ್ದೆ ಮಾಡದೆ ಏನೇನೋ ಮಾಡಲು ಹೊರಡುತ್ತೇವೆ. ಸಾಮಾನ್ಯವಾಗಿ ಒತ್ತಡ ಉಂಟು ಮಾಡುವ ಕಾರಣಗಳಲ್ಲಿ ಹೆಚ್ಚಿನವು ಜೀವನ ಶೈಲಿಗೆ ಸಂಬಂಧಿಸಿದ್ದಾಗಿದೆ. ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ ಸಿಗುತ್ತಿದೆಯೇ ಎಂದು ಯೋಚಿಸಬೇಕು. ಏಕೆಂದರೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅನಿವಾರ್ಯ ಪರಿಸ್ಥಿತಿಯಿಂದ ಮಾಡಲೇ ಬೇಕಾಗುತ್ತದೆ. ಮೊದಲು ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದರಿಂದ ಮಾಡುವ ಕೆಲಸದಲ್ಲಿ ಸ್ವಲ್ಪ ಆನಂದ ಸಿಕ್ಕಿದರೂ ಅದು ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ನಮಗೆಂದೇ ಒಂದಷ್ಟು ಸಮಯವನ್ನು ಕಾಯ್ದಿರಿಸಿಕೊಳೋಣ. ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಯೋಚಿಸೋಣ ಆಗ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದರೊಂದು ಪರಿಹಾರ ಸಿಕ್ಕೇ ಸಿಗುತ್ತದೆ.

ಕೆಲವು ಸಮಸ್ಯೆಗಳಿಗೆ ಗೆಳೆಯ ಗೆಳತಿಯರೊಂದಿಗೆ ಹೇಳಿಕೊಳ್ಳುವ ಮೂಲಕ ಅವರಿಂದಲೂ ಸಲಹೆ ಪಡೆಯಬಹುದು. ಚಚರ್ಿಸುವಾಗ, ಮಾತನಾಡುವಾಗ ತೀರಾ ಖಾಸಗಿ ವಿಚಾರಗಳು ನಮ್ಮ ಬಳಿಯೇ ಇರಲಿ. ಕೆಲವೊಮ್ಮೆ ಬೇರೆಯವರೊಂದಿಗೆ ಬೆರೆತು ಒಂದಷ್ಟು ಆನಂದವಾಗಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿ ಒತ್ತಡ ಕಡಿಮೆಯಾಗುತ್ತದೆ. ದುಡಿಮೆಯ ನಡುವೆಯೂ ಒಂದು ದಿನ ವಿಶ್ರಾಂತಿಗೆ ಮೀಸಲಿರಲಿ. ಮನಸ್ಸಿಗೆ ಸಂತೋಷ ನೀಡುವ ಇತರರಿಗೂ ಉಪಯೋಗವಾಗುವ ಹವ್ಯಾಸ ಬೆಳೆಸಿಕೊಳ್ಳೋಣ. ಸಾಹಿತ್ಯ, ಕ್ರೀಡೆ ಮೊದಲಾದವುಗಳತ್ತ ಆಸಕ್ತಿ ವಹಿಸೋಣ. ಕೆಲವು ಬಾರಿ ಮಲಗಿದರೂ ನಿದ್ದೆ ಬರಲ್ಲ. ನಿದ್ದೆಗೆ ಮುನ್ನ ಸ್ನಾನ ಮಾಡಿ ನಂತರ ಮಲಗಿದರೆ ಮೈಮನಸ್ಸು ಹಗುರವಾಗಿ ನಿದ್ದೆ ಬರುತ್ತದೆ.

ಅವತ್ತಿನ ಕೆಲಸವನ್ನು ಅವತ್ತೆ ಮಾಡಿದರೆ ಒಳ್ಳೆಯದು. ಮುಂದೂಡಿದರೆ ಎಲ್ಲವನ್ನೂ ಒಟ್ಟಿಗೆ ಮುಗಿಸಬೇಕಾದ ಅನಿವಾರ್ಯತೆಯಿಂದ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯಿದ್ದು ಅವರಂತೆ ಮಾಡಿದರೆ ಒಳ್ಳೆಯಾಗುತ್ತದೆ. ಮೋಜು ಮಸ್ತಿ, ಪಾಟರ್ಿಗಳಿಂದ ದೂರವಿದ್ದರೆ ಉತ್ತಮ. ಮದ್ಯ, ಧೂಮಪಾನ, ತಂಬಾಕು ಸೇವನೆಯಂತಹ ದುಶ್ಚಟಗಳ ಬದಲಿಗೆ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ.

See also  ಡಯಟ್ ಮಾಡೋ ಚಿಂತೆ ಬಿಡಿ.. ಬಂದಿದೆ ಕೊಬ್ಬಿನಾಂಶ ಹೀರಿಕೊಳ್ಳುವ ವಿಶೇಷ ತಟ್ಟೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು