News Kannada
Friday, December 02 2022

ಆರೋಗ್ಯ

ಮೈಗ್ರೇನ್ ನಿಯಂತ್ರಣಕ್ಕೆ ಒಂದಷ್ಟು ಸಲಹೆಗಳು

Photo Credit :

ಮೈಗ್ರೇನ್ ನಿಯಂತ್ರಣಕ್ಕೆ ಒಂದಷ್ಟು ಸಲಹೆಗಳು

ಮೈಗ್ರೇನ್ ನಿಂದಾಗಿ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ತಮ್ಮನ್ನು ಬಾಧಿಸುತ್ತಿರುವುದು ತಲೆನೋವು ಎಂಬುದು ತಿಳಿದ ಬಳಿಕ ಇದರತ್ತ ಜಾಗರೂಕರಾಗಿರುವುದು ಮತ್ತು ವೈದ್ಯರು ಹೇಳಿದ ಒಂದಷ್ಟು ಸಲಹೆಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಮೈಗ್ರೇನ್ ಗೆ ಪ್ರಚೋದನೆ ನೀಡುವ ಬೆಳಕಿನಂತಹ ಸಂವೇದನೆಯ ಉದ್ದೀಪಕ, ಆಹಾರ ಮತ್ತು ಆಹಾರದ ಎಡಿಟಿವ್ಗಳು, ಪೇಯ, ಮಾನಸಿಕ ಒತ್ತಡ, ಸ್ತ್ರೀಯರಲ್ಲಿ ಹಾರ್ಮೋನ್ ಬದಲಾವಣೆಗಳು, ಏಳುವ-ಮಲಗುವ ವಿಧಾನಗಳಲ್ಲಿನ ಬದಲಾವಣೆಗಳು, ಶಾರೀರಿಕ ಅಂಶಗಳು, ಪರಿಸರದಲ್ಲಿನ ಬದಲಾವಣೆಗಳು, ಔಷಧಗಳು ಹೀಗೆ ಹಲವು ಅಂಶಗಳನ್ನು ವೈದ್ಯರು ಗುರುತಿಸಿದ್ದು, ಇವು ಮೈಗ್ರೇನ್ ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ. ಇವು ಬಾಹ್ಯವಾಗಿ ಅಥವಾ ಶಾರೀರಿಕವಾಗಿ ಮೈಗ್ರೇನ್ ಕಾಣಿಸಿಕೊಳ್ಳಲು ಸಹಕರಿಸುವ ಸಾಧ್ಯತೆಯಿರುವುದರಿಂದ ಎಚ್ಚರವಾಗಿರಬೇಕು.

ಇವತ್ತು ನಮ್ಮನ್ನು ಒಂದಲ್ಲ ಒಂದು ರೀತಿಯ ಕಾಯಿಲೆಗಳು ಕಾಡಲು ಜೀವನಶೈಲಿಯಲ್ಲಿನ ಬದಲಾವಣೆಗಳೇ ಕಾರಣವಾಗಿವೆ ಎಂಬ ಆರೋಪವೂ ಇದೆ. ಇದನ್ನು ತಳ್ಳಿಹಾಕುವಂತೆಯೂ ಇಲ್ಲ. ಹೀಗಾಗಿ ಜೀವನಶೈಲಿ ಬದಲಾಗದ ಹೊರತು ಕೆಲವು ಕಾಯಿಲೆಗಳನ್ನು ನಿಯಂತ್ರಿಸಲು ನಾವು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಆರೋಗ್ಯದ ದೃಷ್ಠಿಯಿಂದ ಕೆಲವೊಂದನ್ನು ಬದಲಾವಣೆಗೊಳಪಡಿಸುವುದು ನಮಗೆ ಅನಿವಾರ್ಯವಾಗಿದೆ.

ಮೈಗ್ರೇನ್ ಕಾಣಿಸಿಕೊಳ್ಳಲು ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ವ್ಯಕ್ತಿಯ ಜೀವನ ಶೈಲಿ, ಆತ ಮಾಡುತ್ತಿರುವ ಕೆಲಸಗಳು, ಸುತ್ತಲಿನ ವಾತಾವರಣ ಎಲ್ಲವೂ ಗಣನೆಗೆ ಬರುತ್ತದೆ. ಮೈಗ್ರೇನ್ ಪೀಡಿತರು ಒಂದು ಡೈರಿಯನ್ನು ಉಪಯೋಗಿಸಬೇಕು ಮತ್ತು ಅದರಲ್ಲಿ ತಲೆನೋವಿನ ತೀವ್ರತೆ, ಅದು ಇದ್ದ ಕಾಲಾವಧಿ, ತಲೆನೋವು ಕಾಣಿಸಿಕೊಂಡಾಗ ಶರೀರದಲ್ಲಿನ ಇನ್ನಿತರ ಲಕ್ಷಣಗಳು, ವೈದ್ಯರು ಶಿಫಾರಸ್ಸು ಮಾಡಿದ ಔಷಧಿಯನ್ನು ತೆಗೆದುಕೊಂಡ ವಿವರಗಳನ್ನು ನಮೂದಿಸಬೇಕು. ಹೀಗೆ ಸುಮಾರು ಎಂಟು ವಾರಗಳ ಕಾಲ ಡೈರಿಯನ್ನು ನಿರ್ವಹಿಸುತ್ತಾ ಬಂದರೆ, ಮೈಗ್ರೇನ್ನ ನಿರ್ದಿಷ್ಟ ವಿಧಾನ ತಿಳಿದುಕೊಂಡು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ.

ಇನ್ನು ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆಮಾಡುವುದು, ನಿಯಮಿತ ಆಹಾರ ಸೇವನೆ ಮಾಡುವುದು, ಪ್ರಕಾಶಮಾನ ಬೆಳಕು ಹಾಗೂ ದಟ್ಟವಾದ ಸುವಾಸನೆಯಿಂದ ದೂರವಿರುವುದು, ಧೂಮಪಾನ ತ್ಯಜಿಸುವುದು, ಆದಷ್ಟು ಮಾನಸಿಕ ಒತ್ತಡವಾಗದಂತೆ ಎಚ್ಚರವಹಿಸುವುದು, ಮೈಗ್ರೇನ್ ಪ್ರಚೋದಿಸುವಂತಹ ಆಹಾರ ಪದಾರ್ಥಗಳನ್ನು ದೂರವಿಡುವುದು. ವೈದ್ಯರು ನೀಡುವ ಔಷಧಿಗಳನ್ನು ಉಪಯೋಗಿಸುವುದು ಅಗತ್ಯವಾಗಿದೆ.

ತೀವ್ರ ತಲೆನೋವು ಕಾಣಿಸಿಕೊಂಡಾಗ ಕೋಲ್ಡ್ ಪ್ಯಾಕ್ ಅಥವಾ ಐಸ್ ಚೀಲವನ್ನು ಸುತ್ತಿ ಅದನ್ನು ಹತ್ತು ನಿಮಿಷಗಳ ಕಾಲ ನೋವು ಇರುವ ಜಾಗದ ಮೇಲೆ ಅಥವಾ ಕತ್ತಿನ ಹಿಂಭಾಗ ಇರಿಸಬೇಕು. ಕಣ್ಣನ್ನು ನೇರ ಬೆಳಕಿಗೆ ಒಡ್ಡದೆ, ಕತ್ತಲೆ ಕೋಣೆ, ಶಾಂತವಾದ ಸ್ಥಳದಲ್ಲಿ ಮಲಗಬೇಕು. ದ್ರವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ವಾಕರಿಕೆ ತಡೆಗೆ ಫ್ಲಾಟ್ ಸೋಡಾವನ್ನು ಸೇವಿಸಬೇಕು.ತೋರು ಬೆರಳು ಮತ್ತು ಹೆಬ್ಬೆರಳಿನಿಂದ ನೋವಿರುವ ಜಾಗಕ್ಕೆ ವೃತ್ತಾಕಾರದಲ್ಲಿ ಒತ್ತಡ ಹಾಕಬೇಕು. ಹೀಗೆ ಒತ್ತಡವನ್ನು ಸುಮಾರು 7ರಿಂದ15 ಸೆಕೆಂಡುಗಳ ಕಾಲ ಹಾಕಿ ಮತ್ತೆ ಬಿಡಬೇಕು. ಇದೇ ರೀತಿ ಮತ್ತೆ, ಮತ್ತೆ ಮಾಡಬೇಕು.

See also  ಉತ್ರಾಣಿ ಗಿಡಗಳಲ್ಲಿ ಇದೆ ಅನೇಕ ಔಷಧೀಯ ಅಂಶಗಳು

ಇದರೊಂದಿಗೆ ತಲೆ ಚಿಪ್ಪನ್ನು ಮೃದುವಾದ ಹೇರ್ಬ್ರೆಷ್ ನಿಂದ ಬ್ರೆಷ್ ಮಾಡುವುದರಿಂದಲೂ ನೋವು ಶಮನ ಮಾಡಲು ಸಾಧ್ಯವಾಗುತ್ತದೆ. ಮೈಗ್ರೇನ್ ಕಾಣಿಸಿಕೊಂಡಾಗ ಅದನ್ನು ಶಮನಗೊಳಿಸುವ ಒಂದಷ್ಟು ಪರಿಹಾರವನ್ನು ನಾವು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಾಗೆಯೇ ವೈದ್ಯರು ಸಲಹೆ ಮತ್ತು ಔಷಧಿಗಳನ್ನು ಸೇವಿಸುವುದು ಅಗತ್ಯವಾಗಿದೆ.

ಹೆಚ್ಚಿನವರು ತಲೆನೋವು ಬಂದಾಗ ಯಾವುದಾದರೂ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿಕೊಂಡು ತೆಪ್ಪಗಾಗುವವರೇ ಜಾಸ್ತಿ. ತಮ್ಮನ್ನು ಕಾಡುತ್ತಿರುವ ತಲೆನೋವು ಯಾವುದು ಎಂಬುದನ್ನು ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳುವುದು ಅಗತ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು