News Kannada
Saturday, December 10 2022

ಆರೋಗ್ಯ

ಚಿಂತೆ ಬಿಡಿ, ಮುಪ್ಪಿನ ಕಾಲದಲ್ಲಿ ಖುಷಿಯಾಗಿರಿ!

Photo Credit :

ಚಿಂತೆ ಬಿಡಿ, ಮುಪ್ಪಿನ ಕಾಲದಲ್ಲಿ ಖುಷಿಯಾಗಿರಿ!

ಮುಪ್ಪು ಸಾವಿನ ಮುನ್ಸೂಚನೆ ಎಂದರೆ ತಪ್ಪಾಗಲಾರದು. ಹೀಗಾಗಿ ಮುಪ್ಪಿನ ಸಮಯ ಎನ್ನುವುದು ಬಹುತೇಕರಿಗೆ ನರಕವಾಗಿ ಪರಿಣಮಿಸ ತೊಡಗಿದೆ. ಕಾಡುವ ವಯೋ ಸಹಜ ಕಾಯಿಲೆಗಳು, ಮಕ್ಕಳು, ಮೊಮ್ಮಕ್ಕಳಿಂದ ದೂರವಾಗಿ ದಿನಕಳೆಯಬೇಕಾದ ಅನಿವಾರ್ಯತೆಗಳು ಹೀಗೆ ಹತ್ತು ಹಲವು ಸಮಸ್ಯೆಗಳು ನಮ್ಮ ವಯೋವೃದ್ಧರನ್ನು ಕಾಡುತ್ತಿದೆ.

ಬಹಳಷ್ಟು ಜನಕ್ಕೆ ತಾವು ಕೂಡಿಟ್ಟರೆ ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಬಹುದೆಂಬ ಭ್ರಮೆಯಿದೆ. ಅಷ್ಟೇ ಅಲ್ಲ ಮಕ್ಕಳನ್ನು ಓದಿಸಿ ಅವರಿಗೊಂದು ಕೆಲಸ ಕೊಡಿಸಿದರೆ ಅವರು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ. ಆದರೆ ಈ ನಿರೀಕ್ಷೆಗಳು ಎಲ್ಲರ ಬದುಕಿನಲ್ಲಿ ಒಳ್ಳೆಯ ಫಲಿತಾಂಶ ನೀಡುವುದಿಲ್ಲ. ಮಕ್ಕಳಿಂದ ದೂರವಾಗಿ ವೃದ್ಧಾಶ್ರಮಗಳಲ್ಲಿ ಬದುಕಿನ ಕೊನೆಯ ದಿನಗಳನ್ನು ಕಳೆಯುತ್ತಿರುವ ಅದೆಷ್ಟೋ ಜೀವಗಳಿವೆ. ಆ ವಿಚಾರ ಹಾಗಿರಲಿ.ವಯಸ್ಸಾಗುತ್ತಿದ್ದಂತೆಯೇ ಶಾರೀರಿಕವಾಗಿ ಮತ್ತು ದೇಹದಲ್ಲಿ ನಡೆಯುವ ಕ್ರಿಯೆಗಳಲ್ಲಿ ಒಂದಷ್ಟು ಬದಲಾವಣೆಗಳು ಕಂಡು ಬರುವುದರಿಂದ ಜತೆಗೆ ಕೆಲವೊಂದು ರೋಗಗಳು ಬಾಧಿಸುವುದರಿಂದ ಒಂದಷ್ಟು ಮಟ್ಟಿಗೆ ಆರೋಗ್ಯದ ಕಡೆಗೆ ಮತ್ತು ಆಹಾರ ಕ್ರಮಗಳತ್ತವೂ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು.

ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯ ಕಂಡುಬರುತ್ತದೆ. ಹೆಂಗಸರಲ್ಲಿ ಋತುಚಕ್ರ ನಿಂತ ಬಳಿಕ ಶರೀರರದಲ್ಲಿ ಈಸ್ಟ್ರೋಜನ್ ಉತ್ಪಾದನೆ ಕಡಿಮೆಯಾಗುವುದು ಮೂಳೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕರುಳಿನಲ್ಲಿ ಕ್ಯಾಲಿಯಂ ಹೀರುವಿಕೆ ಡಿ ಜೀವಸತ್ವದ ಉತ್ಪಾದನೆ ಹಾಗೂ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುವುದು ಕೂಡ ಮೂಳೆಗಳು ಸವೆಯಲು ಕಾರಣವಾಗುತ್ತದೆ. ಇದನ್ನು ಕ್ಯಾಲ್ಸಿಯಂ ಹಾಗೂ ಡಿ ಜೀವಸತ್ವವಿರುವ ಮಾತ್ರೆಗಳನ್ನು ಸೇವಿಸುವುದರಿಂದ ನಿಯಂತ್ರಣಕ್ಕೆ ತರಬಹುದಾಗಿದೆ.ವಯಸ್ಸಾದಂತೆಲ್ಲ ಜೀವಕೋಶಗಳ ಆಂತರಿಕ ಕ್ರಿಯೆ ಕುಗ್ಗುವುದರಿಂದ ದೈಹಿಕ ಸಾಮರ್ಥವೂ ಕಡಿಮೆಯಾಗುತ್ತದೆ. ಖನಿಜಾಂಶದ ಕೊರತೆಯಿಂದ ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ. ಹಲ್ಲು ಮತ್ತು ವಸಡುಗಳು ದುರ್ಬಲಗೊಳ್ಳುತ್ತವೆ. ಇದರಿಂದ ಹಲ್ಲು ಉದುರುತ್ತದೆ.

ಇನ್ನು ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗದೆ ಬಾಯಿ ಒಣಗುತ್ತಿರುತ್ತದೆ. ಇದರಿಂದ ಆಹಾರವನ್ನು ಅಗೆಯಲು ಮತ್ತು ನುಂಗಲು ಕಷ್ಟವಾಗುತ್ತದೆ.ನಾಲಿಗೆಯ ಮೇಲಿರುವ ರುಚಿಗ್ರಂಥಿಗಳ ಶಕ್ತಿ ಕುಗ್ಗುವುದರಿಂದ ಆಹಾರದಲ್ಲಿರುವ ಉಪ್ಪು, ಹುಳಿ, ಖಾರ ಸೇರಿದಂತೆ ಒಟ್ಟಾರೆ ರುಚಿಯನ್ನು ಗ್ರಹಿಸುವ ಶಕ್ತಿಯೂ ಕಡಿಮೆಯಾಗಿ ಹಸಿವಾಗುವುದಿಲ್ಲ. ಹಸಿವೇ ಇಲ್ಲದಿದ್ದಾಗ ಊಟ ಮಾಡುವುದಾದರೂ ಹೇಗೆ? ಹೀಗಾಗಿ ಆಹಾರ ಸೇವನೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ.ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆಯೇ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಾರಣ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು, ವ್ಯಾಯಾಮ ಮಾಡದಿರುವುದು, ಪಥ್ಯಗಳಿಲ್ಲದ, ಶರೀರಕ್ಕೆ ಹೊಂದದ ಆಹಾರ ಮತ್ತು ಅಗತ್ಯಕ್ಕಿಂತ ಹೆಚ್ಚು ಸೇವನೆಯೂ ಬೊಜ್ಜು ಬರಲು ಸಹಕರಿಸುತ್ತದೆ. ಬೊಜ್ಜು ದೇಹ ಮಧುಮೇಹ ಬರಲು ದಾರಿ ಮಾಡಿಕೊಡುತ್ತದೆ.

ವಯಸ್ಸಾದವರಲ್ಲಿ ನಿದ್ರೆ ಬಾರದಿರುವುದು, ಸುಸ್ತು, ಏನೋ ಒಂದು ರೀತಿಯ ಕಳವಳ ಕಂಡು ಬರುತ್ತದೆ. ಇದು ರಕ್ತ ಹೀನತೆಯಿಂದ ಬರುವ ಸಮಸ್ಯೆಗಳು. ಕಬ್ಬಿಣ ಮತ್ತು ಸಿ ಜೀವಸತ್ವ ಸಮರ್ಪಕವಾಗಿ ಸಿಗದಿದ್ದಾಗ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸೊಪ್ಪು ತರಕಾರಿ, ಕಾಳುಗಳು, ಅತ್ತಿಹಣ್ಣು, ಲಿವರ್, ಮೊಟ್ಟೆ, ಸೋಯಾಬಿನ್ ಮೊದಲಾದವುಗಳನ್ನು ಸೇವಿಸಬೇಕು.ವಯಸ್ಸಾದವರನ್ನು ಕಾಡುವ ಮತ್ತೊಂದು ಸಮಸ್ಯೆ ಎಂದರೆ ಮಲಬದ್ಧತೆ. ಮಲಗಟ್ಟಿಯಾಗಿ ಮಲ ವಿಸರ್ಜಿಸಲು ಕಷ್ಟವಾಗುವುದು ಮತ್ತು ಅನಿಯಮಿತವಾಗಿ ವಿಸರ್ಜನೆಯಾಗುವುದೇ ಮಲಬದ್ಧತೆಯ ಲಕ್ಷಣಗಳು. ಇದರೊಂದಿಗೆ ಹೊಟ್ಟೆ ಉಬ್ಬಸ, ಆಲಸ್ಯ ಮತ್ತು ಹೊಟ್ಟೆ ತುಂಬಿದಂತೆ ಇರುತ್ತದೆ.

See also  ಗರ್ಭಿಣಿಯರು ಆರೋಗ್ಯದತ್ತ ಸದಾ ಎಚ್ಚರವಾಗಿರಬೇಕು!

ಇದನ್ನು ಹೋಗಲಾಡಿಸಲು ನಾರಿನ ಅಂಶ ಹೆಚ್ಚಿರುವ ತರಕಾರಿಗಳನ್ನು ಮತ್ತು ಹೆಚ್ಚು ಪ್ರಮಾಣದಲ್ಲಿ ನೀರು ಸೇವಿಸುವುದು ಉತ್ತಮ. ನಿಯಮಿತ ಆಹಾರ ಸೇವನೆ, ವ್ಯಾಯಾಮ ಮಾಡಬೇಕಾಗುತ್ತದೆ.ವಯಸ್ಸಾದ ಬಳಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಅಗತ್ಯ. ವೈದ್ಯರ ಸಲಹೆ ಪಡೆದು ಅವರು ಹೇಳುವ ಕೆಲವು ಆಹಾರ ಕ್ರಮಗಳನ್ನು ಅಳವಡಿಸಿಕೊಂಡರೆ ಮುಪ್ಪು ಕಾಲದಲ್ಲೂ ಆರೋಗ್ಯವಾಗಿ, ಆನಂದವಾಗಿ ಬದುಕಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಹಿರಿಯರು ಮಾಡಬೇಕಾಗಿದ್ದೇನೆಂದರೆ ನಾಳಿನ ಬಗ್ಗೆ, ಮಕ್ಕಳ ಬಗ್ಗೆ ಚಿಂತೆ ಬಿಟ್ಟು ಆದಷ್ಟು ಸಂತಸವಾಗಿರುವಂತೆ ನಿಮ್ಮನ್ನು ನೀವೇ ನೋಡಿಕೊಳ್ಳಿ ಸಾಕು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು