News Kannada
Sunday, December 04 2022

ಆರೋಗ್ಯ

ಎ.ಜೆ. ವೈದ್ಯರ ಸಾಧನೆ: 2 ವರ್ಷದ ಬಾಲಕನಿಗೆ ಬೇರ್ಪಟ್ಟ ಕಾಲುಗಳ ಮರು ಜೋಡನೆ

Photo Credit :

ಎ.ಜೆ. ವೈದ್ಯರ ಸಾಧನೆ: 2 ವರ್ಷದ ಬಾಲಕನಿಗೆ ಬೇರ್ಪಟ್ಟ ಕಾಲುಗಳ ಮರು ಜೋಡನೆ

ಮಂಗಳೂರು: ವಿಶ್ವದಲ್ಲಿಯೇ ಅತ್ಯಂತ ವಿರಳವಾಗಿ, ಭಾರತದಲ್ಲೇ ಮೊಟ್ಟ ಮೊದಲ ಭಾರಿಗೆ ಅಪಘಾತದಲ್ಲಿ ಬೇರ್ಪಟ್ಟ ಎರಡು ವರ್ಷದ ಬಾಲಕನ ಕಾಲುಗಳನ್ನು ಮರು ಜೋಡಿಸಿ ಮಂಗಳೂರಿನ ಎ.ಜೆ.ವೈದ್ಯರು ಯಶಸ್ವಿಯಾಗಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ದಿನೇಶ್ ಕದಂ ಮತ್ತು ವೈದ್ಯರ ತಂಡ ಈ ಸಾಧನೆಯನ್ನು ಮಾಡಿದೆ. ಈ ಸಾಧನೆ ಭಾರತದಲ್ಲಿ ಪ್ರಪ್ರಥಮವಾಗಿದ್ದು, ಜಗತ್ತಿನಾದ್ಯಂತ 13 ಜನರಿಗೆ ಮೈಕ್ರೋ ವ್ಯಾಸ್ಕ್ಯೂಲರ್ ಚಿಕಿತ್ಸೆ ಯಶಸ್ಸು ಕಂಡಿದೆ ಎನ್ನುತ್ತಾರೆ ಡಾ. ಪ್ರಶಾಂತ ಮಾರ್ಲ.

ಘಟನೆ ವಿವರ: ಏಪ್ರಿಲ್ 29ರಂದು ಕೇರಳದ ಪಯ್ಯನೂರಿನ ನಡೆದ ರೈಲು ಅಪಘಾತದಲ್ಲಿ ತಾಯಿ ಸಾವನ್ನಪ್ಪಿದ್ದು, ಮಗು ತನ್ನ ಎರಡು ಕಾಲುಗಳು ಸಂಪೂರ್ಣ ಕಳೆದುಕೊಂಡಿತ್ತು. ರೈಲ್ವೆ ಹಳಿಯಲ್ಲಿ ರಕ್ತದ ಮಡುವಿನಲ್ಲಿದ್ದ ಮಗುವನ್ನು ಸಂಬಂಧಿಕರು ಯಾರು ಗೊತ್ತಿಲ್ಲದ ಕಾರಣ ಚಿಕಿತ್ಸೆ ನೀಡಲು ರೈಲ್ವೆ ಪೊಲೀಸ್ ಇಲಾಖೆಯು ಅನುಮತಿ ಪಡೆದು ಎ.ಜೆ.ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಅಪಘಾತದಲ್ಲಿ ಕಳೆದುಕೊಂಡ ಎರಡು ಕಾಲನ್ನು ರೈಲ್ವೆ ಪೊಲೀಸ್ ಸಹಾಯದಿಂದ ಥರ್ಮಾಕೋಲ್ ಬಾಕ್ಸ್ ನಲ್ಲಿ ಆಸ್ಪತ್ರೆಗೆ ತಂದಿದ್ದಾರೆ. ಮಗುವನ್ನು ಆಸ್ಪತ್ರೆಗೆ ತಂದ ಬಳಿಕ ಮಗುವಿನ ತಂದೆ ಹಾಗೂ ಸಂಬಂಧಿಕರು ಪತ್ತೆಯಾಗಿ ಅವರೂ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ.

ನಂತರ ದಿನಗಳಲ್ಲಿ ಅತ್ಯಂತ ಕ್ಲಿಷ್ಟಕರವಾದ ಮೈಕ್ರೋ ವ್ಯಾಸ್ಕ್ಯುಲರ್ ಸರ್ಜರಿ ನಡೆಸಿ ಮಗುವಿಗೆ ಎರಡು ಕಾಲುಗಳನ್ನು ಜೋಡಿಸಿ ಮರು ನಡೆಯುವಂತೆ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಈ ವೇಳೆ ಮಗು ತನ್ನ ತಾಯಿಯನ್ನು ಕಳೆದುಕೊಂಡಿದ್ದರಿಂದ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿ ನೋಡಿಕೊಂಡಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ನಡೆದು 7 ತಿಂಗಳು ಕಳೆದಿದ್ದು ಮಗುವಿನ ಎರಡೂ ಕಾಲಿನಲ್ಲಿ ಬಲ ಹಾಗೂ ಸಂಪೂರ್ಣ ಪ್ರಗತಿಯಾಗಿದೆ.

ಅತ್ಯಂತ ವಿರಳ ಹಾಗೂ ವಿಶ್ವದಲ್ಲಿಯೇ ಅತ್ಯಂತ ಕಿರಿಯ ಮಗು ಎಂದು ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ವಿವರಿಸಿದರು.

 

See also  ಮಕ್ಕಳಲ್ಲಿ ಫಿಜರ್ ಲಸಿಕೆ ʼ90%ಕ್ಕಿಂತʼ ಹೆಚ್ಚು ಪರಿಣಾಮಕಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು