News Kannada
Tuesday, October 04 2022

ಆರೋಗ್ಯ

ಗರ್ಭಿಣಿ ಮಹಿಳೆಯರೇ ಹುಷಾರಾಗಿರಿ! - 1 min read

Photo Credit :

ಗರ್ಭಿಣಿ ಮಹಿಳೆಯರೇ ಹುಷಾರಾಗಿರಿ!

ಮನುಷ್ಯ ಸೃಷ್ಠಿಯಲ್ಲಿ ಮಗುವಿಗೆ ಜನ್ಮ ನೀಡುವುದು ಹೆಣ್ಣಿನ ಜೀವನದಲ್ಲೊಂದು ಪ್ರಮುಖ ಘಟ್ಟ. ಹಿಂದಿನ ಕಾಲದಲ್ಲಿ ಇನ್ನೂ ವೈದ್ಯಕೀಯ ಕ್ಷೇತ್ರ ಈಗಿನಷ್ಟು ಮುಂದುವರಿಯದ ಕಾಲದಲ್ಲಿ ಹೆಣ್ಣಿಗೆ ಹೆರಿಗೆ ಎನ್ನುವುದು ಮರುಜನ್ಮ ಎಂದೇ ಭಾವಿಸಲಾಗುತ್ತಿತ್ತು.

ಈಗ ಹಾಗಿಲ್ಲ ವೈದ್ಯಕೀಯ ಕ್ಷೇತ್ರ ಮುಂದುವರಿದ ಕಾರಣದಿಂದಾಗಿ ಹೆರಿಗೆ ಸಮಯದಲ್ಲಿ ತಾಯಿ-ಮಗುವಿನ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೂ ಗರ್ಭಿಣಿಯರು ಒಂದಷ್ಟು ಎಚ್ಚರಿಕೆಯಿಂದ ಇರುವುದು ಮತ್ತು ವೈದ್ಯರು ಹೇಳಿದ ರೀತಿಯಲ್ಲಿ ಆಹಾರ ಸೇರಿದಂತೆ ಇತರೆ ಚಟುವಟಿಕೆಗಳನ್ನು ನಡೆಸುವುದು ಅಗತ್ಯ. ತಾನು ಆರೋಗ್ಯವಾಗಿದ್ದಾಗ ಮಾತ್ರ ಮಗು ಆರೋಗ್ಯವಂತ ಮಗುವಾಗಿ ಹುಟ್ಟಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರು ಅರಿಯಬೇಕಾಗಿದೆ.

ಗರ್ಭಾವಸ್ಥೆಯ ದಿನಗಳು ಮಾಮೂಲಿಯಾಗಿರುವುದಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಸೇವನೆ ಬಗ್ಗೆಯೂ ಒಂದಷ್ಟು ತಿಳಿದುಕೊಂಡು ಅದರಂತೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ವೈದ್ಯರ ಸಲಹೆ ಪ್ರಕಾರ ಹೇಳುವುದಾದರೆ ಗರ್ಭಿಣಿಯರಿಗೆ ಕೆಲವೊಮ್ಮೆ ಹೊಟ್ಟೆ ತುಂಬಿದ ಅನುಭವವಾಗಿ ಊಟವೇ ಬೇಡ ಎಂದೆನಿಸಬಹುದು. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವರು ಊಟವನ್ನೇ ತ್ಯಜಿಸಿ ಬಿಡುತ್ತಾರೆ. ಈ ರೀತಿ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಬದಲಿಗೆ ಸ್ವಲ್ಪ ಪ್ರಮಾಣದ ಆಹಾರವನ್ನು ಆಗಾಗ್ಗೆ ಸೇವಿಸಬೇಕು.

ಇನ್ನು ಪ್ರತಿನಿತ್ಯ 8 ರಿಂದ 12 ಲೋಟಗಳಷ್ಟು ನೀರನ್ನು ಕಡ್ಡಾಯವಾಗಿ ಸೇವಿಸಬೇಕು. ಇದರಿಂದ ಸಾರಾಗವಾಗಿ ಮಲವಿಸರ್ಜನೆಗೆ ಅನುಕೂಲವಾಗುತ್ತದೆ. ಗರ್ಭಿಣಿಯರ ಆರೋಗ್ಯಕ್ಕೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಗತ್ಯ ಇರುವ ಕಾರಣ ಅದು ದೊರೆಯಲು ದಿನಕ್ಕೆ ಕನಿಷ್ಟ 600ಮಿ.ಲೀ.ನಷ್ಟಾದರೂ ಹಾಲು ಕುಡಿಯಬೇಕು. ವಾಂತಿ ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಈ ವೇಳೆ ಕೆಲವು ಆರೋಗ್ಯಕ್ಕೆ ಹಿಡಿಸದ ಪದಾರ್ಥಗಳನ್ನು ದೂರ ಇಡಬೇಕು. ಅದರಲ್ಲೂ ಕರಿದ ತಿಂಡಿ, ಸಂಸ್ಕರಿಸಿಟ್ಟ ಪದಾರ್ಥಗಳನ್ನು ಸೇವಿಸಬಾರದು.

ಹೆಚ್ಚು ಕಾಫಿ, ಟೀ, ತಂಪು ಪಾನೀಯ ಕುಡಿಯುವುದು, ಚಾಕೋಲೆಟ್ ತಿನ್ನುವುದು ಅಪಾಯಕಾರಿ. ಇವುಗಳಲ್ಲಿರುವ ಕೆಫಿನ್ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶವನ್ನು ತಡೆದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾಕಿಂಗ್, ವ್ಯಾಯಾಮ ಮಾಡುವರು ಅದನ್ನು ಅಡ್ಡಿಯಿಲ್ಲದೆ ಮುಂದುವರಿಸಬಹುದು. ಆದರೆ ಅತಿಯಾಗಿ ಮಾಡಬಾರದು. ದೂರದ ಪ್ರಯಾಣ, ಪ್ರವಾಸ ಅಷ್ಟೊಂದು ಒಳ್ಳೆಯದಲ್ಲ. ಆಸ್ಪತ್ರೆಗೆ ಸಮೀಪದಲ್ಲೇ ಇರುವುದು, ಆಗಾಗ್ಗೆ ವೈದ್ಯರ ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ತಂಬಾಕು ಅಗೆಯುವುದು ಅಥವಾ ಬಾಯಲ್ಲಿಟ್ಟುಕೊಳ್ಳುವುದು, ನಶ್ಯೆ ಸೇವಿಸುವುದು ಸಾಮಾನ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಮಾರಕವಾಗಿದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಇದನ್ನೆಲ್ಲ ತ್ಯಜಿಸಲೇ ಬೇಕಾಗುತ್ತದೆ. ಏಕೆಂದರೆ ಇದರಿಂದ ಮಗುವಿಗೆ ಅಪಾಯವಾಗುವುದಲ್ಲದೆ, ಗರ್ಭಪಾತ, ಅವಧಿಗೆ ಮೊದಲೇ ಹೆರಿಗೆ, ಮಗುವಿನ ತೂಕ ಕಡಿಮೆಯಾಗುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಚಿಕ್ಕ ಪುಟ್ಟ (ಶೀತ, ತಲೆನೋವು ಹೀಗೆ) ತೊಂದರೆ ಕಾಣಿಸಿಕೊಂಡಾಗ ಮಾತ್ರೆ ಸೇವಿಸುವುದನ್ನು ನಿಲ್ಲಿಸಬೇಕು. ಯಾವುದೇ ಮಾತ್ರೆ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯವಾಗಿ ಪಡೆಯಬೇಕು. ಇಲ್ಲದಿದ್ದರೆ ಸೇವಿಸುವ ತಾಯಿಗೂ ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯ ತಂದೊಡ್ಡಬಹುದು.

See also  ಕೂಡಿ ಬಾಳೋದರಲ್ಲಿ ಸುಖವಿದೆ...

ಮೂಢನಂಬಿಕೆಗೆ ಮಾರು ಹೋಗದೆ, ಹೆಚ್ಚಿನ ಪಥ್ಯವೂ ಮಾಡದೆ ಉತ್ತಮ ಆರೋಗ್ಯಕರ ತರಕಾರಿ, ಮೊಟ್ಟೆ, ಹಾಲು ಮುಂತಾದ ಆಹಾರವನ್ನು ಸೇವಿಸುವುದು ಒಳ್ಳೆಯದು. ವೈದ್ಯರ ಸಲಹೆ ಪಡೆದು ಗರ್ಭ ಧರಿಸಿದ 14 ರಿಂದ 16 ವಾರಗಳ ಬಳಿಕ ಆರೋಗ್ಯ ವೃದ್ಧಿಸುವ ಮಾತ್ರೆಗಳಾದ ಐರನ್, ಪೋಲೆಟ್(ವಿಟಮಿನ್ ಬಿ9) ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬಹುದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು