News Kannada
Saturday, November 26 2022

ಆರೋಗ್ಯ

ಬಿಳಿ ಕೂದಲು ತಡೆಯಲು ಈ ಮನೆಮದ್ದುಗಳನ್ನು ಬಳಸುತ್ತಿದ್ದರೆ ಎಚ್ಚರ! - 1 min read

Photo Credit :

ಬಿಳಿ ಕೂದಲು ತಡೆಯಲು ಈ ಮನೆಮದ್ದುಗಳನ್ನು ಬಳಸುತ್ತಿದ್ದರೆ ಎಚ್ಚರ!

ಕೂದಲು ಬಿಳಿಯಾಗುವುದನ್ನು ತಡೆಯಲು ಉತ್ತಮ ಹಾಗೂ ಸುರಕ್ಷಿತ ವಿಧಾನವೆಂದರೆ ಅದು ಮನೆಮದ್ದುಗಳು ಎಂದು ಭಾವಿಸಲಾಗಿದೆ. ಇವುಗಳು ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈಗಿಂತ ತುಂಬಾ ಸುರಕ್ಷಿತ ಎಂದು ಇದುವರೆಗೆ ನಂಬಲಾಗಿತ್ತು. ಆದರೆ ನೀವು ಓದಿರುವ ಮತ್ತು ನಂಬಿಕೊಂಡು ಬಂದಿರುವ ಕೆಲವು ಮನೆಮದ್ದುಗಳು ಬಿಳಿ ಕೂದಲು ತಡೆಯಲು ಪರಿಣಾಮಕಾರಿಯಾಗಿಲ್ಲ ಎಂದರೆ ಅಚ್ಚರಿಯಾಗಬಹುದು. ಹೌದು, ಈ ಕೆಳಗಿನ ಮನೆಮದ್ದನ್ನು ಬಳಸುತ್ತಾ ಇದ್ದರೆ ಇಂದಿನಿಂದ ನಿಲ್ಲಿಸಿಬಿಡಿ. ಯಾಕೆಂದು ನೀವೇ ತಿಳಿಯಿರಿ.

1. ಕರಿಬೇವಿನ ಎಲೆ
ಕೂದಲು ಬಿಳಿಯಾಗುವುದನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವಲ್ಲಿ ಇದು ವಿಫಲವಾಗಿದೆ. ಈ ಎಲೆಗಳು ಹೆಚ್ಚಿನವರಿಗೆ ಅಲರ್ಜಿ ಕೂಡ ಉಂಟು ಮಾಡುವ ಸಾಧ್ಯತೆಯಿದೆ.

2. ಲಿಂಬೆ
ಹೆಚ್ಚಿನ ಜನರು ತಲೆಹೊಟ್ಟು ನಿವಾರಣೆ ಮತ್ತು ಬಿಳಿ ಕೂದಲು ತಡೆಯಲು ಲಿಂಬೆ ಬಳಸುವರು. ಆದರೆ ಲಿಂಬೆಯಲ್ಲಿ ಬ್ಲೀಚಿಂಗ್ ಗುಣಗಳು ಇರುವ ಕಾರಣ ಇದು ಬಿಳಿ ಕೂದಲಿನ ಸಮಸ್ಯೆ ಮತ್ತಷ್ಟು ಕೆಡಿಸುವುದು.

3. ಮೊಸರು
ಬಿಳಿ ಕೂದಲು ತಡೆಯಲು ಹೆಚ್ಚಿನವರು ಮೊಸರು ಬಳಸುವರು. ಮೊಸರಿನಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ನಿವಾರಿಸುವುದು. ಆದರೆ ಕೂದಲು ಬಿಳಿಯಾಗುವುದನ್ನು ತಡೆಯುವುದಿಲ್ಲ.

4. ಬೆಳ್ಳುಳ್ಳಿ
ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ ಮನೆ ಔಷಧಿ. ಆದರೆ ಬಿಳಿ ಕೂದಲು ತಡೆಯಲು ಇದು ಪರಿಣಾಮಕಾರಿಯಲ್ಲ. ಕೂದಲಿನ ಬೆಳವಣಿಗೆಗೆ ಇದರಲ್ಲಿನ ಅಲಿಸಿನ್ ನೆರವಾಗುವುದು. ಆದರೆ ಇದು ಬಿಳಿ ಕೂದಲು ತಡೆಯಲ್ಲ.

5. ಈರುಳ್ಳಿ
ಈರುಳ್ಳಿ ಕೂಡ ಕೂದಲು ಬಿಳಿಯಾಗುವುದನ್ನು ತಡೆಯುವುದು ಎಂದು ನಂಬಲಾಗಿದೆ. ಆದರೆ ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು, ಬಿಳಿ ಕೂದಲು ತಡೆಯಲು ಅಲ್ಲ. ಇದರಲ್ಲಿರುವ ಸಲ್ಫರ್ ಕೂದಲು ಉದುರುವುದು, ತುಂಡಾಗುವುದನ್ನು ತಡೆಯುವುದು. ಆದರೆ ಬಿಳಿಯಾಗುವುದನ್ನಲ್ಲ.

 

See also  ಬೇಸಿಗೆಯಲ್ಲಿ ಅನಾನಸ್ ಸೇವಿಸಿ ಆರೋಗ್ಯವಾಗಿರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು