News Kannada
Monday, September 26 2022

ಆರೋಗ್ಯ

ಎಳನೀರು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..! - 1 min read

Photo Credit :

ಎಳನೀರು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

ಬೇಸಿಗೆಯಲ್ಲಿ ದಾಹ ತಣಿಸಲು ತಂಪು ಪಾನೀಯಗಳಿಗೆ ಮೊರೆ ಹೋಗುವುದು ಸಾಮಾನ್ಯ. ಹಾಗೆಂದು ಕೈಗೆ ಸಿಕ್ಕಿದ್ದೆಲ್ಲವನ್ನು ಕುಡಿದು ಬಿಟ್ಟರೆ ತಕ್ಷಣಕ್ಕೆ ದಾಹ ಕಡಿಮೆಯಾಗಬಹುದು ಆದರೆ ಅದರ ಪರಿಣಾಮ ಮಾತ್ರ ಭೀಕರವಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೇಸಿಗೆ ಕಾಲ ಬರುತ್ತಿದ್ದಂತೆಯೇ ನಾಯಿಕೊಡೆಗಳಂತೆ ತಂಪು ಪಾನೀಯಗಳ ಅಂಗಡಿ ಹುಟ್ಟಿಕೊಳ್ಳುತ್ತವೆ. ಜತೆಗೆ ಅಗ್ಗದ ಬೆಲೆಗೆ ಅವು ನಮಗೆ ತಂಪುಪಾನೀಯಗಳನ್ನು ಒದಗಿಸುತ್ತವೆ. ಇವುಗಳನ್ನು ಕುಡಿಯುವುದು ನಿಜಕ್ಕೂ ಒಳ್ಳೆಯದಲ್ಲ. ಸಾಧ್ಯವಾದರೆ ಬೇಸಿಗೆ ದಿನಗಳಲ್ಲಿ ತಮ್ಮೊಂದಿಗೆ ನೀರಿನ ಬಾಟಲನ್ನು ಒಯ್ಯುವುದನ್ನು ರೂಢಿ ಮಾಡಿಕೊಂಡರೆ ಉತ್ತಮ. ಇನ್ನು ಕುಡಿಯಲೇ ಬೇಕೆನಿಸಿದಾಗ ಅದರಲ್ಲೂ ಬೇಸಿಗೆಯಲ್ಲಿ ಎಳನೀರನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಬಹಳಷ್ಟು ಜನ ಆರೋಗ್ಯ ಹದಗೆಟ್ಟಾಗ ಮಾತ್ರ ಎಳನೀರು ಸೇವಿಸುತ್ತಾರೆ. ಉಳಿದಂತೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಆರೋಗ್ಯದ ದೃಷ್ಠಿಯಿಂದ ಎಳನೀರು ಎಷ್ಟು ಒಳ್ಳೆಯದು ಎಂಬುದು ಗೊತ್ತೇ ಇಲ್ಲ.
ಎಳನೀರು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದು ಬಂದಿದೆ. ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜ ಇರುವುದರಿಂದಾಗಿ ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ, ದೇಹದಾಢ್ರ್ಯಕ್ಕೂ ಇದು ಉಪಯೋಗಕರವಾಗಿದೆ.

ಗರ್ಭಿಣಿ ಮಹಿಳೆ ಇದನ್ನು ನಿಯಮಿತವಾಗಿ ಸೇವಿಸಿದರೆ ಸುಂದರ ಹಾಗೂ ಸ್ವಾಸ್ಥ್ಯ ಮಗು ಹುಟ್ಟಲಿದೆ. ಈ ಎಲ್ಲ ಗುಣ ಹೊಂದಿರುವುದರಿಂದಲೇ ತೆಂಗಿನ ಮರವನ್ನು ಕಲ್ಪವೃಕ್ಷವೆಂತಲೇ ಕರೆಯಲಾಗುತ್ತದೆ. ಧಾರ್ಮಿಕ ಮಹತ್ವದ ಜೊತೆಗೆ ಔಷಧಿಯ ಗುಣವನ್ನು ಹೊಂದಿದ್ದು, ವಿಟಮಿನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಖನಿಜ ಗುಣವನ್ನು ಹೊಂದಿದೆ.

ತೆಂಗಿನಲ್ಲಿ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವಿಲ್ಲ, ಹಾಗಾಗಿ ಬೊಜ್ಜು ಕರಗಲು ಸಹಾಯಮಾಡುತ್ತದೆ. ಬೇಸಿಗೆಯಲ್ಲಿ ನೀರು ಸೇವನೆಗಿಂತ ಎಳನೀರು ಸೇವನೆಯಿಂದ ಹೆಚ್ಚು ಖುಷಿ ಕೊಡಲಿದೆ. ಕೇವಲ ಖುಷಿಯಲ್ಲದೇ ದೇಹವನ್ನು ಲವಲವಿಕೆಯಿಂದಲೂ ಇಡಲಿದೆ. ಆರೋಗ್ಯವಷ್ಟೇ ಅಲ್ಲದೆ ಇದರ ಸೇವನೆಯಿಂದ ಮುಖದ ತ್ವಚೆಯನ್ನು ಹೊಂದಿದೆ.

ಶಕ್ತಿ ನೀಡುವ ಗುಣ ಹೊಂದಿರುವ ಎಳನೀರುನ್ನು ವ್ಯಾಯಾಮದ ನಂತರ ಸೇವನೆ ಮಾಡುವುದು ಸೂಕ್ತ, ಅತಿ ಹೆಚ್ಚು ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನಾದರೂ ಬಾಯಿ ರುಚಿಗೋಸ್ಕರ ರಾಸಾಯನಿಕ ಮಿಶ್ರಿತ ತಂಪು ಪಾನೀಯ ಸೇವಿಸುವವರು ಎಳನೀರು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

See also  ಕೊರೋನಾ ನಡುವೆ ಇನ್‍ಫ್ಲ್ಯೂಯೆಂಜ್ಹಾ ಭಯ...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು