News Kannada
Tuesday, September 27 2022

ಆರೋಗ್ಯ

ಬೇಸಿಗೆಯಲ್ಲಿ ಜೀವಸತ್ವಗಳುಳ್ಳ ಆಹಾರ ಸೇವಿಸಿ! - 1 min read

Photo Credit :

ಬೇಸಿಗೆಯಲ್ಲಿ ಜೀವಸತ್ವಗಳುಳ್ಳ ಆಹಾರ ಸೇವಿಸಿ!

ಬೇಸಿಗೆಯ ನೆತ್ತಿ ಸುಡುವ ಬಿಸಿಲು ಚರ್ಮ ಮಾತ್ರವಲ್ಲ, ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಈ ದಿನಗಳಲ್ಲಿ ಚರ್ಮದ ರಕ್ಷಣೆ ಮಾಡಬೇಕಾದರೆ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದಲ್ಲದೆ ಜತೆಗೆ ಹೆಚ್ಚಿನ ನೀರು, ಒಂದಷ್ಟು ಆರೋಗ್ಯಕಾರಿ ಆಹಾರ ಸೇವನೆ ಮಾಡುವುದು ಅತಿ ಮುಖ್ಯ.

ನಾವು ಆರೋಗ್ಯದಿಂದ ಇರಬೇಕಾದರೆ ಜೀವ ಸತ್ವಗಳು ಆಹಾರದ ಮೂಲಕ ದೇಹಕ್ಕೆ ಸೇರ್ಪಡೆಯಾಗುತ್ತದೆ. ಅಷ್ಟೇ ಅಲ್ಲದೇ ದೇಹದ ಆರೋಗ್ಯವನ್ನು ವೃದ್ಧಿಸುತ್ತಾ ಸೋಂಕು ತರುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ. ಜೀವಸತ್ವಗಳು ಕಾಳುಗಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಇವೆಲ್ಲದರಲ್ಲಿ ಹೆಚ್ಚಾಗಿರುತ್ತದೆ.

ರಕ್ತಹೀನತೆಯಿಂದಲೂ ತ್ವಚೆ ಕಾಂತಿ ಕಳೆದುಕೊಳ್ಳುತ್ತದೆ. ಈ ಸಂದರ್ಭ ಪೌಷ್ಠಿಕಾಂಶಗಳುಳ್ಳ ಹಾಲು ಮೊಸರು, ತುಪ್ಪ, ಮೊಟ್ಟೆ ಮೊದಲಾದ ಪದಾರ್ಥಗಳನ್ನು ಸೇವಿಸಬೇಕು. ನೀರನ್ನು ಹೇರಳವಾಗಿ ಸೇವಿಸಿದರೆ ಇದು ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಅದರ ಹೊಳಪನ್ನು ಹೆಚ್ಚಿಸುತ್ತದೆ.

ಬ್ಲಾಕ್ ಬೆರ್ರಿ, ಬ್ಲೂ ಬೆರ್ರಿ, ಹುಳಿಯಿಲ್ಲದ ದಾಕ್ಷಿ ಹಣ್ಣುಗಳು, ಸ್ಟ್ರಾ ಬೆರ್ರಿ, ಟೊಮೇಟೊದಲ್ಲಿರುವ ಲೈಕೊಪಿನ್, ದಾಳಿಂಬೆಯಲ್ಲಿರುವ ಪಾಲಿಫೆನಾಲ್ಸ್ ಇವೆಲ್ಲವೂ ಚರ್ಮದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ. ಇನ್ನು ಮೊಟ್ಟೆ, ಮೊಟ್ಟೆಯ ಬಿಳಿ ಭಾಗ, ಕಡಿಮೆ ಕೊಬ್ಬಿನಂಶ ಹೊಂದಿರುವ ಡೈರಿ ಉತ್ಪನ್ನಗಳು, ಬ್ರೊಕೋಲಿ, ಕ್ಯಾರೆಟ್ ನಲ್ಲಿರುವ ಕೆರೊಟೆನಾಯಿಡ್ಸ್ ಚರ್ಮದ ಬಿಗಿತಕ್ಕೆ ಕಾರಣವಾಗುವಂತಹ ಅಂಶಗಳನ್ನು ಹೊಂದಿವೆ. ನೆಲ್ಲಿಕಾಯಿ, ಸೀಬೆ ಕಾಯಿ, ಸಿಟ್ರಿಕ್ ಆಸಿಡ್ ಇರುವಂತಹ ಹಣ್ಣುಗಳು, ವಿಟಮಿನ್ ಈ ಭರಿತ ತರಕಾರಿಗಳು, ಎಣ್ಣೆಗಳು, ಬೀಜಗಳು ಅದರಲ್ಲಿ ಬಾದಾಮಿ, ಸೂರ್ಯಕಾಂತಿ ಎಣ್ಣೆ, ಆಲಿವ್, ಇವೆಲ್ಲವೂ ಸುಕ್ಕನ್ನು ನಿವಾರಿಸುವ ಅಂಶಗಳನ್ನು ಹೊಂದಿದ್ದು ಇವುಗಳನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಆರೋಗ್ಯದ ರಕ್ಷಣೆ ಸಾಧ್ಯವಾಗಲಿದೆ.

ತಣ್ಣನೆಯ  ನೀರು, ಮಾಂಸಭರಿತ ಸಾಲೋಮನ್ ಮೀನು, ಆಲಿವ್, ಅವಕಡ, ಗಾಢ ಹಸಿರು ಬಣ್ಣದ ಎಲೆಗಳಿರುವ ತರಕಾರಿಗಳನ್ನು ನಮ್ಮ ನಿತ್ಯದ ಆಹಾರಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಬಿ.ಕಾಂಪ್ಲೆಕ್ಸ್ ಅಂಶ ಹೊಂದಿರುವ ಆಹಾರದ ಕಡೆಗೂ ಆದ್ಯತೆ ನೀಡಬೇಕು ಗ್ರೀನ್ ಟೀ ಸೇವನೆ ಅತ್ಯುತ್ತಮವಾಗಿದೆ.

ಇದಲ್ಲದೆ ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸುವುದು, ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು. ಇದೆಲ್ಲದರ ಜೊತೆಗೆ ಸಮಯಕ್ಕೆ ಸರಿಯಾಗಿ ನಿದ್ದೆ, ಊಟ ಮುಂಜಾನೆ ಒಂದಷ್ಟು ಹೊತ್ತು ವ್ಯಾಯಾಮ ಕೂಡ ಚರ್ಮದ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹ ಆರೋಗ್ಯವಾಗಿದ್ದರೆ ಚರ್ಮ ಆರೋಗ್ಯದಿಂದ ಕೂಡಿ ಕಾಂತಿಯುತವಾಗಿರಲು ಸಾಧ್ಯವಾಗುತ್ತದೆ.

See also  ಹೆರಿಗೆ ನಂತರ ಆರೋಗ್ಯ ಕಾಳಾಜಿ ಅತೀ ಅಗತ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು