News Kannada
Thursday, December 01 2022

ಆರೋಗ್ಯ

ಆಹಾರ ಸೇವನೆಗೂ ಇರಲಿ ಮಾರ್ಗಸೂಚಿ

Photo Credit :

ಆಹಾರ ಸೇವನೆಗೂ ಇರಲಿ ಮಾರ್ಗಸೂಚಿ

ನಮ್ಮಲ್ಲಿ ಹೆಚ್ಚಿನವರು ಏನಾದರೂ ಸೇವಿಸಬೇಕೆನಿಸಿದಾಗಲೆಲ್ಲ ಅದನ್ನು ಸೇವಿಸಿ ಬಿಡುತ್ತಾರೆ. ಅಷ್ಟೇ ಅಲ್ಲ ಹಸಿವಾದಾಗಲೆಲ್ಲ ಕೈಗೆ ಏನು ಸಿಗುತ್ತೋ ಅದನ್ನು ತಿಂದು ಹಸಿವು ನೀಗಿಸಿಕೊಂಡು ಬಿಡುತ್ತಾರೆ. ಇದೆಲ್ಲದರ ನಡುವೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಯಾವ್ಯಾವುದೋ ಹೊತ್ತಿಗೆ ಆಹಾರ ಸೇವಿಸುವವರು ಇದ್ದಾರೆ. ಇದೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

ಯಾವಾಗ ಏನನ್ನು ಸೇವಿಸಬೇಕೆನ್ನುವುದನ್ನು ನಮ್ಮ ಪೂರ್ವಿಕರೇ ನಿಗದಿ ಮಾಡಿಟ್ಟಿದ್ದಾರೆ. ಅವತ್ತಿನ ಅವರ ಕಾರ್ಯಕ್ಕೆ ತಕ್ಕಂತೆ ಬೆಳಗ್ಗೆ ತಿಂಡಿ ತಿಂದು ಜಮೀನಿನ ಕೆಲಸಕ್ಕೆ ಹೋಗಿ ಮಧ್ಯಾಹ್ನ ಊಟ ಮಾಡಿ ಮತ್ತೆ ಕೆಲಸ ಮಾಡಿ ರಾತ್ರಿ ಊಟ ಮಾಡಿ ನಿಶ್ಚಿಂತರಾಗಿ ಮಲಗಿ ಬಿಡುತ್ತಿದ್ದರು. ಯಾವ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳುತ್ತಿರಲಿಲ್ಲ. ಈಗ ಹಾಗಿಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಒತ್ತಡಕ್ಕೊಳಗಾಗುತ್ತಿದ್ದು, ತಮ್ಮ ಬದುಕಿನ ಆಮೂಲ್ಯ ಕ್ಷಣಗಳನ್ನು ಒತ್ತಡದಲ್ಲಿಯೇ ಕಳೆದು ಕೊಳ್ಳುತ್ತಿದ್ದಾರೆ.

ಊಟ ತಿಂಡಿಗೂ ಸಮಯ ನೀಡದೆ ಬಿಡುವಾದಾಗ ಒಂದಷ್ಟು ಆಹಾರ ಸೇವಿಸಿಕೊಂಡು ಅಥವಾ ಪಾರ್ಟಿ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚು ಸೇವಿಸಿ ದಿನ ಕಳೆಯುತ್ತಾರೆ. ಬಹಳಷ್ಟು ಮಂದಿಗೆ ಆಹಾರ ಸೇವನೆಯ ಕ್ರಮಗಳೇ ತಿಳಿಯದೆ ಸಮಯ ಸಿಕ್ಕಾಗ, ಸಿಕ್ಕಿದ್ದೆಲ್ಲವನ್ನು ಸೇವಿಸಿ ದೇಹ ಮತ್ತು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ನಾವೆಲ್ಲರೂ ಆರೋಗ್ಯವಂತ ಜೀವನವನ್ನೇ ಬಯಸುತ್ತೇವೆ. ಆದರೆ ಆರೋಗ್ಯವಾಗಿರಬೇಕಾದರೆ ನಾವು ಸೇವಿಸುವ ಆಹಾರವೂ ಅಷ್ಟೇ ಮುಖ್ಯ ಎಂಬುವುದನ್ನು ಮರೆತು ಬಿಡುತ್ತೇವೆ. ಹೀಗಾಗಿ ಬಹಳಷ್ಟು ರೋಗಗಳು ನಮ್ಮನ್ನು ಕಾಡುತ್ತವೆ.

ಇತ್ತೀಚೆಗೆ ನಮ್ಮನ್ನು ಕಾಡುವ ರೋಗಗಳಿಗೆ ನಮ್ಮ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಕಾರಣವಾಗುತ್ತಿವೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಪಾಶ್ಚಿಮಾತ್ಯ ಆರೋಗ್ಯ ಪದ್ಧತಿಯತ್ತ ವಾಲಿರುವ ನಾವು ಬಾಯಿರುಚಿಗಾಗಿ ನಮ್ಮ ದೇಹಕ್ಕೆ ಒಗ್ಗದ ಪದಾರ್ಥಗಳನ್ನೆಲ್ಲ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಮನಸ್ಸಿಗೆ ಇಷ್ಟವಿಲ್ಲದನ್ನು ಹಸಿವಿನ ಕಾರಣಕ್ಕೆ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಬದಲು ಮನಸ್ಸಿಗೆ ಮತ್ತು ದೇಹಕ್ಕೆ ಹೊಂದುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಆದರೆ ಅದನ್ನು ನಮ್ಮಲ್ಲಿ ಎಷ್ಟು ಮಂದಿ ಅನುಸರಿಸುತ್ತಾರೆ ಎನ್ನುವುದು ಬಹಳ ಮುಖ್ಯವಾಗುತ್ತಿದೆ.

ನಾವು ಆರೋಗ್ಯವಾಗಿರಬೇಕಾದರೆ ನಮ್ಮಲ್ಲೊಂದು ಆಹಾರದ ಕ್ರಮವಿರಬೇಕು. ಮತ್ತು ಅದನ್ನು ನಾವೇ ಆಯ್ಕೆ ಮಾಡಿಕೊಂಡಿರಬೇಕು. ಕೆಲವರು ಬೆಳಗ್ಗಿನ ಆಹಾರ ಸೇವನೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ತಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಂಡು ನಿಧಾನವಾಗಿ ಮನಸ್ಸು ಬಂದ ಸಮಯಕ್ಕೆ ಮಾಡಿ ಮುಗಿಸುತ್ತಾರೆ. ಇದು ಆರೋಗ್ಯದ ದೃಷ್ಟಿಯಲ್ಲಿ ಮಾರಕ. ವೈದ್ಯರು ಹೇಳುವ ಪ್ರಕಾರ ಬೆಳಗ್ಗಿನ ಉಪಹಾರ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಅಲ್ಲದೆ ದಿನದ ಅತೀ ಮುಖ್ಯವಾದ ಆಹಾರವಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗಿನ ಉಪಹಾರವನ್ನು ತಪ್ಪಿಸಿಕೊಳ್ಳಬಾರದಂತೆ.

ತುಂಬಾ ಹಸಿದುಕೊಂಡಿರುವುದು ಮತ್ತು ಒಮ್ಮೆಲೆ ಹೊಟ್ಟೆ ತುಂಬಾ ತಿಂದು ಬಿಡುವುದು ಆಹಾರ ಸೇವನೆಯ ಲಕ್ಷಣವಲ್ಲ. ಆದ್ದರಿಂದ ಆಹಾರ ಸೇವನೆಯ ವಿಚಾರದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಅತ್ಯಗತ್ಯ.

See also  ಬಿಪಿ ಸಮಸ್ಯೆ ಕಾಡುತ್ತಿದೆಯೇ ಭಯಪಡಬೇಡಿ...

ರಾತ್ರಿ ಊಟ ಮಾಡಿದ ತಕ್ಷಣ ಮಲಗದೆ, ಮಲಗುವ ಕನಿಷ್ಟ 2ಗಂಟೆ ಮೊದಲು ಆಹಾರ ಸೇವಿಸಿದರೆ ಉತ್ತಮ. ರುಚಿಯಾಗಿದೆ ಎಂಬ ಕಾರಣಕ್ಕೆ ಹೆಚ್ಚು ತಿನ್ನದೆ ಮಿತ ಸೇವನೆ ಮುಖ್ಯ. ದೇಹದ ತೂಕ ಹೆಚ್ಚಾಗಿ ಬೊಜ್ಜು ಬೆಳೆಯದಂತೆ ಮಾಡಲು ಮುಂಜಾನೆ ವಾಕಿಂಗ್ ವ್ಯಾಯಾಮ ಮಾಡುವುದು ಒಳ್ಳೆಯ ಅಭ್ಯಾಸ. ಪ್ರತಿ ದಿನ ಆಹಾರ ಮಾತ್ರವಲ್ಲದೆ ಸುಮಾರು 8 ರಿಂದ 12 ಲೋಟಗಳಷ್ಟು ನೀರು ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿರುವ ಬೇಡದ ಅಂಶಗಳು ಹೊರಹೋಗಲು ಸಾಧ್ಯವಾಗುತ್ತದೆ.

ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಬೇಕು. ಇದರಿಂದ ಹೊಟ್ಟೆ ಉಬ್ಬರ ತಡೆಯಬಹುದಲ್ಲದೆ, ಪ್ರೊಟೀನ್ ಅಂಶ ಹೆಚ್ಚಿಸಲು ಸಾಧ್ಯವಾಗುತ್ತದೆ. ಕೊಬ್ಬಿನ ಅಂಶವಿರುವ ಡಾಲ್ಡಾ, ವನಸ್ಪತಿಗಳನ್ನು ಕಡಿಮೆ ಮಾಡಬೇಕು. ಅಷ್ಟೇ ಅಲ್ಲ ಸಕ್ಕರೆ ಮತ್ತು ಉಪ್ಪು ಸೇವನೆ ಮಿತವಾಗಿರುವಂತೆ ನೋಡಿಕೊಳ್ಳಬೇಕು. ಕಾರ್ಬೋನೇಟೆಡ್ ಪಾನೀಯಗಳು, ಕರಿದ ತಿಂಡಿಗಳು, ಧೂಮಪಾನ, ಮಧ್ಯಪಾನ ಮೊದಲಾದವುಗಳಿಂದ ದೂರವಿದ್ದಷ್ಟು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು