News Kannada
Friday, October 07 2022

ಆರೋಗ್ಯ

ಸಾಂಕ್ರಾಮಿಕ ರೋಗಗಳತ್ತ ಎಚ್ಚರವಾಗಿರಿ! - 1 min read

Photo Credit :

ಸಾಂಕ್ರಾಮಿಕ ರೋಗಗಳತ್ತ ಎಚ್ಚರವಾಗಿರಿ!

ಒಂದೆಡೆ ರಣ ಬಿಸಿಲು ಮತ್ತೊಂದೆಡೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ. ವಾತಾವರಣದಲ್ಲಿ ಒಂದಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಒಂದಷ್ಟು ಸಾಂಕ್ರಾಮಿಕ ರೋಗಗಳು ಅಡರಿಕೊಳ್ಳುವ ಭಯ ಇದೀಗ ಎದುರಾಗತೊಡಗಿದೆ.

ಈ ಸಂಬಂಧ ಈಗಾಗಲೇ ಜಿಲ್ಲಾಡಳಿತಗಳು ಆರೋಗ್ಯ ಇಲಾಖೆಗೆ ಸ್ವಚ್ಛತೆ ಕಾಪಾಡಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತಂತೆ ಸೂಚನೆಗಳನ್ನು ನೀಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈಗಿನ ಪರಿಸ್ಥಿತಿಯಲ್ಲಿ ವಾಂತಿಬೇಧಿ, ಡೆಂಗ್ಯೂ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದನ್ನು ನಾವು ಕಾಣಬಹುದಾಗಿದೆ.

ಸಾಮಾನ್ಯವಾಗಿ ಬೇಸಿಗೆ ಕಾಲವೆಂದರೆ ಅದು ಒಂದು ರೀತಿಯಲ್ಲಿ ಕಾಯಿಲೆ ಹರಡುವ ಸಮಯ ಎಂದರೆ ತಪ್ಪಾಗಲಾರದು. ಸ್ವಲ್ಪ ಎಡವಿದರೂ ವಾಂತಿ, ಭೇದಿ, ಇನ್ನಿತರ ಕಾಯಿಲೆಗಳು ದಾಳಿಮಾಡಿ ಬಿಡುತ್ತವೆ. ಏನೇ ತಿಂದರೂ ಅರಗಿಸಿಕೊಳ್ಳುವ ಶಕ್ತಿ ಇಲ್ಲದೆ ಹೋದರೆ ಆರೋಗ್ಯ ಹದಗೆಡುವ ಸಂದರ್ಭವೇ ಹೆಚ್ಚು. ಬೇಸಿಗೆ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಉಪಟಳವೇ ಹೆಚ್ಚಾಗಿರುವ ಕಾರಣದಿಂದ ಅವು ಕೇವಲ ಒಬ್ಬರನ್ನು ಕಾಡಿ ಹೊರಟು ಹೋಗದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಬೀದಿ, ಗ್ರಾಮಗಳ ಜನರನ್ನು ಭಯಭೀತರನ್ನಾಗಿಸಿ ಬಿಡುತ್ತದೆ.

ವೈಯಕ್ತಿಕವಾಗಿ ವ್ಯಕ್ತಿ ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೆಲವೊಮ್ಮೆ ಸಾಂಕ್ರಾಮಿಕ ರೋಗಗಳು ಬೇರೆ ಬೇರೆ ಕಾರಣಗಳಿಗೆ ನಮ್ಮನ್ನು ಕಾಡಬಹುದು. ಬೀದಿಯಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯಗಳು ಸರಿಯಾಗಿ ಹರಿಯದೆ, ಸೊಳ್ಳೆ ಇನ್ನಿತರ ಕ್ರಿಮಿ ಕೀಟಗಳಿಗೆ ಆವಾಸ ಸ್ಥಾನವಾಗಿ ಮಾರ್ಪಟ್ಟು ಅದರಿಂದಲೂ ರೋಗ ಬರಬಹುದು. ಇಂತಹ ಪರಿಸ್ಥಿತಿಯಲ್ಲಿ ನಾವೆಷ್ಟೇ ಶುಚಿತ್ವ ಕಾಪಾಡಿದರೂ ಸ್ಥಳೀಯ ಸಂಸ್ಥೆ, ಎಚ್ಚೆತ್ತುಕೊಂಡು ಚರಂಡಿ, ಕಸದ ರಾಶಿ ಇನ್ನಿತರ ಅನೈರ್ಮಲ್ಯಕ್ಕೆ ಕಾರಣವಾಗಿರುವ ಸ್ಥಳಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡದೆ ಹೋದರೆ ಸಾಂಕ್ರಾಮಿಕ ರೋಗಗಳು ಹರಡಿ ಜೀವಕ್ಕೆ ಕುತ್ತು ತರುವ ಅಪಾಯಗಳಿರುತ್ತವೆ. ಸಾಂಕ್ರಾಮಿಕ ರೋಗಗಳು ಬಹಳಷ್ಟು ಸಾರಿ ನಾವು ಕುಡಿಯುವ ನೀರಿನಿಂದಲೇ ಹರಡಿ ಗ್ರಾಮ, ಬಡಾವಣೆ, ಬೀದಿಯ ಜನರಲ್ಲಿ ಸಾಮೂಹಿಕವಾಗಿ ಕಾಣಿಸಿಕೊಂಡು ಆಸ್ಪತ್ರೆ ಸೇರುವಂತೆ ಮಾಡಿ ಬಿಡುತ್ತದೆ.

ವಾಂತಿ, ಭೇಧಿಯನ್ನು ತಡೆಯಬೇಕಾದರೆ, ನಗರ ಪ್ರದೇಶದಲ್ಲಿ ಸರಬರಾಜು ಆಗುವ ಕುಡಿಯುವ ನೀರಿನ ಪೈಪ್ ಲೈನ್ ಗಳು ಸೋರಿಕೆಯಾಗದಂತೆ ಗಮನ ಹರಿಸಿ ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರ ವಹಿಸುವುದು ಸ್ಥಳೀಯ ಸಂಸ್ಥೆಗಳ ಜವಬ್ದಾರಿಯಾಗಿರುತ್ತದೆ.

ಬೇಸಿಗೆಯಲ್ಲಿ ನೀರಿನ ಸಂಗ್ರಹಣ ಟ್ಯಾಂಕ್ ಗಳನ್ನು ಮತ್ತು ಸಿಸ್ಟಮ್ ಗಳನ್ನು ಒಂದು ಬಾರಿ ತೊಳೆದು, ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಿಸುವುದು. ಹಾಗೂ ನಿಯಮಿತವಾಗಿ ಕಾಲ ಕಾಲಕ್ಕೆ ಕ್ಲೋರಿನೇಷನ್ ಮಾಡಿಸುವುದು ಅಗತ್ಯವಾಗಿರುತ್ತದೆ. ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಹೆಚ್2ಎಸ್ ಮೀಡಿಯಾ ಮುಖಾಂತರ ಪರೀಕ್ಷಿಸಿ ಅದರ ಗುಣಮಟ್ಟವನ್ನು ಕಾಪಾಡುವುದು ಬಹುಮುಖ್ಯವಾಗಿರುತ್ತದೆ.

ಬ್ಲೀಚಿಂಗ್ ಪೌಡರ್ ದಾಸ್ತಾನು ನಿರ್ವಹಣೆ ಕ್ಲೋರಿನೇಷನ್ ಮಾಡಲು ಬೇಕಾಗುವ ಅಗತ್ಯ ಬ್ಲೀಚಿಂಗ್ ಪೌಡರ್ ನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ನಿರ್ವಹಿಸುವುದಲ್ಲದೆ, ವಿಹೆಚ್ಎಸ್ಸಿ ಉಪಕೇಂದ್ರದ ನಿಧಿ ಹಾಗೂ ಎಆರ್ ಎಸ್ ನಿಧಿ ಲಭ್ಯತೆಯ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಸ್ಥಳೀಯ ವೈದ್ಯಾಧಿಕಾರಿಗಳು ಸಿದ್ಧರಾಗಿರಬೇಕು. ಕುಡಿಯುವ ನೀರಿನ ಸಂಗ್ರಹಣೆ ತಾಣದ ಸುತ್ತಮುತ್ತಲೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಗ್ರಾಮ ಪಂಚಾಯಿತಿ ಗಮನಕ್ಕೆ ತರುವ ಕೆಲಸವನ್ನು ಸಂಬಂಧಪಟ್ಟವರು ಅಥವಾ ಜನಪ್ರತಿನಿಧಿಗಳು ಮಾಡಬೇಕಾಗುತ್ತದೆ.

See also  ಬೇಸಿಗೆಯಲ್ಲಿ ಊಟದ ಜತೆಗೆ ಹಣ್ಣು ಇರಲಿ!

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ವಾಂತಿ ಭೇದಿ ಪ್ರಕರಣಗಳನ್ನು ನಿಭಾಯಿಸಲು ಬೇಕಾಗುವ ಔಷಧಿಗಳಾದ ಓ.ಆರ್.ಎಸ್ ದ್ರಾವಣ, ಟೆಟ್ರಸೈಕ್ಲಿನ್, ಸಿಪ್ರೋಪ್ಲಾಕ್ಸಿನ್, ಐವಿ ಪ್ಲ್ಯೂಡ್ಸ್ ಇತ್ಯಾಧಿಗಳ ಅಗತ್ಯ ದಾಸ್ತಾನುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರಿಸಿಕೊಂಡು ತರ್ತು ಸಂದರ್ಭಗಳಲ್ಲಿ ಜನತೆಗೆ ಅದನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು.

ಹೆಚ್ಚು ಜನ ಸೇರುವ ಮದುವೆ, ಜಾತ್ರೆ ಹೀಗೆ ಯಾವುದೇ ಸಮಾರಂಭ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತು ಆಹಾರವನ್ನು ಪರಿಶೀಲಿಸಿ ಸ್ವಚ್ಛತೆಗೆ ಆದ್ಯತೆ ನೀಡುವುದು ಒಳ್ಳೆಯದು. ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಅಡುಗೆ ಮುಖ್ಯಸ್ಥರು, ಸಹಾಯಕರಿಗೆ ಅಡುಗೆ ಮಾಡುವ ಸಮಯದಲ್ಲಿ ತಲೆಗೆ ಕ್ಯಾಪ್, ಕೈಚೀಲಗಳನ್ನು ಧರಿಸುವುದು ಮುಖ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು