News Kannada
Tuesday, March 28 2023

ಆರೋಗ್ಯ

ಹುಷಾರ್.. ಆಭರಣಗಳಿಂದಲೂ ಅಲರ್ಜಿ ಬರಬಹುದು!

Photo Credit :

ಹುಷಾರ್.. ಆಭರಣಗಳಿಂದಲೂ ಅಲರ್ಜಿ ಬರಬಹುದು!

ಬಹಳಷ್ಟು ಜನಕ್ಕೆ ಆಭರಣಗಳ ಅಲರ್ಜಿ ಇರುತ್ತದೆ. ಅದು ಅವರಿಗೆ ಗೊತ್ತೇ ಆಗುವುದಿಲ್ಲ. ಹೀಗಾಗಿ ಕತ್ತಿನ ಭಾಗವನ್ನು ಕೆರೆದುಕೊಳ್ಳುತ್ತಾ ಗಾಯ ಮಾಡಿಕೊಳ್ಳುತ್ತಿರುತ್ತಾರೆ.

ಕೆಲವು ಆಭರಣಗಳು ತ್ವಚೆಗೆ ಹೊಂದಿಕೆಯಾಗದ ಕಾರಣ ಸಮಸ್ಯೆಗಳು ಕಂಡು ಬರುತ್ತವೆ ಅದರಲ್ಲೂ ಸಾಮಾನ್ಯವಾಗಿ ಮಹಿಳೆಯರು ಕತ್ತು, ಕಿವಿ ಬೆರಳು, ಮೂಗು ಮತ್ತು ಕೈಗಳಿಗೆ ಆಭರಣಗಳನ್ನು ಧರಿಸುವುದರಿಂದಾಗಿ ಆ ಜಾಗಗಳಲ್ಲಿ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಆಭರಣಗಳಿಂದ ಕಾಣಿಸಿಕೊಂಡ ಸಮಸ್ಯೆ ಎಂಬುದು ಗೊತ್ತಾಗದೆ ಅವರು ಬೇರೆ ಬೇರೆ ರೀತಿಯ ಚಿಕಿತ್ಸೆಗಳನ್ನು ಪಡೆಯುವ ಸಾಧ್ಯತೆಯೂ ಒಮ್ಮೊಮ್ಮೆ ಇರುತ್ತದೆ.

ಮಹಿಳೆಯೊಬ್ಬರಿಗೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಅದು ಏತಕ್ಕೆ ಬರುತ್ತದೆ ಎಂಬುದರ ಬಗ್ಗೆ ತಿಳಿಯಲು ಎಲ್ಲ ರೀತಿಯ ಪರೀಕ್ಷೆ ಮಾಡಲಾಯಿತು. ಎಲ್ಲವೂ ನಾರ್ಮಲ್ ಇತ್ತು. ಕೊನೆಗೆ ಆಕೆ ಧರಿಸಿದ ವಜ್ರದ ಮೂಗುತಿಯೇ ಆಕೆಯ ತಲೆನೋವಿಗೆ ಕಾರಣ ಎಂಬುದನ್ನು ಪತ್ತೆ ಹಚ್ಚಲಾಯಿತು.

ಹೀಗೆ ಕೆಲವೊಮ್ಮೆ ನಾವು ಇಷ್ಟಪಟ್ಟು ಧರಿಸುವ ಆಭರಣವೂ ನಮಗೆ ತೊಂದರೆ ನೀಡುತ್ತವೆ. ಕೆಲವೊಂದು ವಸ್ತುವು ನಮ್ಮ ತ್ವಚೆಗೆ ಹೊಂದಾಣಿಕೆಯಾಗುವುದಿಲ್ಲ. ಆಗ ಇಂತಹ ಅಲರ್ಜಿಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಚಿನ್ನ ಸೇರಿದಂತೆ ದುಬಾರಿ ಲೋಹದ ಆಭರಣಗಳ ತಯಾರಿಕೆ ವೇಳೆ ಬಳಸಲಾಗುವ ನಿಕ್ಕಲ್ ಈ ಅಲರ್ಜಿಗೆ ಕಾರಣ ಎಂದು ಹೇಳಲಾಗುತ್ತದೆ.

ಚಿನ್ನ ಮತ್ತು ಬೆಳ್ಳಿ ಆಭರಣಗಳಲ್ಲಿ ನಿಕ್ಕಲ್ ಬಳಕೆಯಾಗುವುದರಿಂದ ಅದು ತ್ವಚೆಗೆ ತೊಂದರೆಕೊಡುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದಾಗ ಆಭರಣಗಳು ಮತ್ತು ಅದರಲ್ಲಿರುವ ನಿಕ್ಕಲ್ ಮುಂತಾದ ಲೋಹಗಳಿಗೆ ತ್ವಚೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತದೆಯಂತೆ ಆಗ ಆಭರಣ ಅಲರ್ಜಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಕೆಲವೊಮ್ಮೆ ಆಭರಣದ ಕೆಲ ಭಾಗಗಳಲ್ಲಿರುವ ಲೋಹಗಳು ಮತ್ತು ಅವುಗಳ ಘರ್ಷಣೆ, ಲೋಹದ ಕಣಗಳು, ಸೋಪ್, ಧೂಳು ಮುಂತಾದವು ಕೂಡ ತ್ವಚೆಗೆ ಸರಿಹೊಂದದೆ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ತುರಿಕೆ ಮತ್ತು ಸಣ್ಣಗಿನ ಕಜ್ಜಿಗಳು ಕಂಡು ಬಂದು ಅಸಹ್ಯ ಹುಟ್ಟಿಸಲೂ ಬಹುದು. ಇದು ಎಲ್ಲರಲ್ಲಿ ಕಾಣಿಸುವುದಿಲ್ಲ ಬದಲಿಗೆ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಆಭರಣ ಧರಿಸುವ ಕಿವಿ, ಕುತ್ತಿಗೆ, ಬೆರಳುಗಳಲ್ಲಿ ಆಭರಣ ಧರಿಸಿದ ಸಂದರ್ಭ ತುರಿಕೆ, ಕಜ್ಜಿಗಳು ಕಾಣಿಸಿದರೆ ಅದನ್ನು ಆಭರಣ ಅಲರ್ಜಿ ಎನ್ನಬಹುದಾದರೂ ಕೆಲವೊಮ್ಮೆ ಸ್ವಚ್ಛತೆಯ ಕೊರತೆಯಿಂದಲೂ ಈ ತೊಂದರೆ ಕಾಣಿಸಬಹುದು.

ಆಭರಣ ಧರಿಸಿದ ಭಾಗಗಳು ಕೆಂಪಾಗುತ್ತವೆ, ಚಿಕ್ಕದಾದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ತ್ವಚೆ ದಪ್ಪವಾದಂತೆ ಭಾಸವಾಗುವುದು ಹೀಗೆ ಕೆಲವೊಂದು ಲಕ್ಷಣಗಳು ಕಾಣಿಸಬಹುದು. ಕೆಲವರಿಗೆ ಚಿನ್ನಾಭರಣ ಧರಿಸಿದರೆ ಯಾವುದೇ ಸಮಸ್ಯೆ ಕಾಣಿಸದೆ ಇತರೆ ಫ್ಯಾನ್ಸಿ ಆಭರಣಗಳನ್ನು ಧರಿಸಿದಾಗ ಸಮಸ್ಯೆಗಳು ಕಾಣಿಸಬಹುದು. ಸಾಮಾನ್ಯವಾಗಿ ಚಿನ್ನದ ಒಡವೆ ಧರಿಸುವವರಿಗೆ ಇಂತಹ ಸಮಸ್ಯೆ ಕಡಿಮೆಯೇ ಆದರೆ ಫ್ಯಾನ್ಸಿ ಆಭರಣಗಳನ್ನು ಧರಿಸುವವರು ಇಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ನಮ್ಮ ತ್ವಚೆಗೆ ಯಾವುದು ಹೊಂದಿಕೆಯಾಗದೆ ಸಮಸ್ಯೆ ನೀಡುತ್ತದೆಯೋ ಅಂತಹ ಆಭರಣಗಳನ್ನು ಧರಿಸದಿರುವುದು ಒಳಿತು.

See also  ಬೀಟ್ರೋಟ್ ಸೇವಿಸಿ ಆರೋಗ್ಯವಾಗಿರಿ..

ಜತೆಗೆ ಇಂತಹ ಸಮಸ್ಯೆಗಳು ಕಂಡು ಬಂದರೆ ಚರ್ಮ ರೋಗದ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇತ್ತೀಚೆಗಿನ ದಿನಗಳಲ್ಲಿ ಚಿನ್ನ, ಬೆಳ್ಳಿ ಬಳಕೆಗಿಂತ ಇತರೆ ಲೋಹಗಳ ಬಳಕೆ ಜಾಸ್ತಿಯಾಗಿರುವುದರಿಂದ ಕೆಲವು ಲೋಹಗಳು ತ್ವಚೆಗೆ ಸರಿ ಹೊಂದದೆ ಸಮಸ್ಯೆಗಳನ್ನು ತರಬಹುದು. ನೀವು ಯಾವ ಲೋಹ ಧರಿಸುತ್ತೀರೋ ಅದು ತ್ವಚೆಗೆ ಹೊಂದಿಕೆಯಾದರೆ ಮಾತ್ರ ಬಳಸಿ ಇಲ್ಲದೆ ಹೋದರೆ ಅಂತಹುಗಳಿಂದ ದೂರ ಇರುವುದೇ ಒಳಿತು. ಏಕೆಂದರೆ ಅವುಗಳನ್ನು ಧರಿಸಿ ತ್ವಚೆಯನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಧರಿಸದರಿರುವುದೇ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು