NewsKarnataka
Wednesday, December 01 2021

ಆರೋಗ್ಯ

ಡಯಾಬಿಟಿಸ್ ನ ಕೆಲವು ಅಡ್ಡಪರಿಣಾಮಗಳು

ಡಯಾಬಿಟಿಸ್ ನ ಕೆಲವು ಅಡ್ಡಪರಿಣಾಮಗಳು

ಡಯಾಬಿಟಿಸ್ ಸೈಲೆಂಟ್ ಕಿಲ್ಲರ್ ಎಂದೇ ಕರೆಯಲ್ಪಡುವಂತಹ ರೋಗ. 2040ರಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ಮಧುಮೇಹಿಗಳು ಇರಲಿದ್ದಾರೆ ಎಂದು ವರದಿಗಳು ಹೇಳಿವೆ. ಈಗ ವಿಶ್ವದೆಲ್ಲೆಡೆ ಸುಮಾರು 123 ಮಿಲಿಯನ್ ಮಧುಮೇಹಿಗಳಿದ್ದಾರೆ. ಮಧುಮೇಹದಿಂದ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ. ಇದು ಯಾವುದು ಎಂದು ತಿಳಿಯುವ…

ಅಧಿಕ ಕೊಲೆಸ್ಟ್ರಾಲ್
ನಿಮಗೆ ಮಧುಮೇಹವಿದೆಯೆಂದು ತಿಳಿದಾಗ ಕೊಲೆಸ್ಟ್ರಾಲ್ ಕೂಡ ಅತಿಯಾಗಿದೆ ಎಂದು ಪರೀಕ್ಷೆಯಿಂದ ತಿಳಿದುಬಂದರೆ, ಇದು ಮಧುಮೇಹದ ಅಡ್ಡಪರಿಣಾಮ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಅದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್(ಎಚ್ ಡಿಎಲ್) ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಅನಾರೋಗ್ಯಕರ ಕೊಬ್ಬಿನ ಕೋಶ ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದು.

ಮೆದುಳಿನ ಆರೋಗ್ಯ ಸಮಸ್ಯೆಗಳು
ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಅಡ್ಡಪರಿಣಾಮವೆಂದರೆ, ಅವರ ಜ್ಞಾಪಕಶಕ್ತಿ ಮತ್ತು ಮೆದುಳಿನ ಕಾರ್ಯವು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುವುದು. ಇದರಿಂದ ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಸಮಸ್ಯೆ ಕಾಣಿಸಬಹುದು. ಕೆಲವು ಮಧುಮೇಹಿಗಳಲ್ಲಿ ಮೆದುಳಿಗೆ ರಕ್ತಸಂಚಾರವು ಅಸಾಮಾನ್ಯವಾಗಿರುವ ಕಾರಣದಿಂದ ಹೀಗೆ ಆಗಬಹುದು ಎಂದು ಅಧ್ಯಯನವು ತಿಳಿಸಿವೆ.

ದಂತ ಕಾಯಿಲೆಗಳು
ಮಧುಮೇಹಿಗಳು ಒಸಡಿನ ಸಮಸ್ಯೆಗೆ ಸಿಲುಕುವುದು ಅಧಿಕ ಮತ್ತು ಇದು ಅನಿರೀಕ್ಷಿತವಾದ ಅಡ್ಡಪರಿಣಾಮವಾಗಿದೆ. ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾದಾಗ, ಅದು ಒಸಡಿನಲ್ಲಿ ಕಾಲಜನ್ ಅಂಗಾಂಶವನ್ನು ಮಾರ್ಪಡಿಸುವ ಕಾರಣದಿಂದಾಗಿ ಹೆಚ್ಚು ಉರಿಯೂತ ಮತ್ತು ಸೋಂಕಿಗೆ ಒಳಗಾಗುವುದು.

ಶ್ರವಣದೋಷ
ಮಧುಮೇಹಿಗಳಲ್ಲಿ ಶ್ರವಣದೋಷವು ಅತಿಯಾಗಿ ಕಾಣಿಸಿಕೊಳ್ಳುವುದು ಎಂದು ಹಲವಾರು ಅಧ್ಯಯನ ವರದಿಗಳು ಹೇಳಿವೆ. ಇದು ಮಧುಮೇಹದ ಮತ್ತೊಂದು ಅಡ್ಡಪರಿಣಾಮವಾಗಿದೆ.

ಕಿಡ್ನಿ ವೈಫಲ್ಯ
ಇದು ತುಂಬಾ ಗಂಭೀರವಾಗಿರುವಂತಹ ಮತ್ತು ಅನಿರೀಕ್ಷಿತವಾಗಿ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿರುವಂತಹ ವ್ಯಕ್ತಿಯ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವು ಕಿಡ್ನಿಯು ರಕ್ತವನ್ನು ಶುದ್ಧೀಕರಿಸುವ ವೇಳೆ ಅದರ ಕೋಶಗಳಿಗೆ ಹಾನಿ ಮಾಡುವುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೆ ಇದ್ದರೆ ಆಗ ಪ್ರಾಣಹಾನಿ ಸಂಭವಿಸುವಂತಹ ಸಾಧ್ಯತೆಗಳು ಹೆಚ್ಚಾಗಿರುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!