ಬಸಳೆ ಸೊಪ್ಪು ಆರೋಗ್ಯಕ್ಕೆ ಉತ್ತಮವಾದ ಪದಾರ್ಥವಾಗಿದ್ದು, ಬಸಳೆ ಸೊಪ್ಪಿನ ಪಲ್ಯ, ಕಷಾಯ ಸೇವನೆ ಮಾಡುವುದರಿಂದ ಮಲಬದ್ಧತೆ ಗುಣಮುಖವಾಗುತ್ತದೆ.
ಈ ಸೊಪ್ಪಿನಲ್ಲಿ ಎ,ಬಿ,ಸಿ ಜೀವಸತ್ವಗಳು, ಕಬ್ಬಿಣ, ಪೊಟಾಸಿಯಂ ನಂತ ಹೆಚ್ಚಿನ ಪೌಷ್ಟಿಕಾಂಶ ಇದ್ದು. ಆರೋಗ್ಯಕ್ಕೆ ತುಂಬಾನೇ ಪ್ರಯೋಜವಿದೆ.
ಬಾಯಿಹುಣ್ಣು ಇದ್ದರೆ ಬಸಳೆ ಸೊಪ್ಪನ್ನು ನಿಧಾನವಾಗಿ ಅಗೆಯುತ್ತಿದ್ದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ. ಅದಲ್ಲದೆ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಇದರ ಸಾಂಬಾರ್, ಪಲ್ಯವನ್ನು ವಾರಕ್ಕೆ ಒಂದು ಬಾರಿ ಸೇವನೆ ಮಾಡುವುದರಿಂದ ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಬಸಳೆಯನ್ನು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಬೆಳೆಸುತ್ತಾರೆ. ಇತ್ತೀಚೆಗೆ ನಗರದಲ್ಲಿ ವಾಸಿಸುವ ಜನರು ಇದರ ಪ್ರಯೋಜನವನ್ನು ತಿಳಿದು ಬೆಳೆಸುತ್ತಾರೆ. ಬಸಳೆಯ ಪಲ್ಯ, ಸಾಂಬಾರ್ ಗಳು ತುಂಬಾನೇ ರುಚಿಕರವಾಗಿರುತ್ತದೆ. ಅದಲ್ಲದೆ ಸೊಪ್ಪಿನಿಂದ ತಿಂಡಿಯನ್ನು ತಯಾರಿಸಬಹುದು.