ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನದಲ್ಲಿ ಇಲ್ಲದೆ ಇದ್ದರೆ ಅದನ್ನು ಸಮತೋಲನಕ್ಕೆ ತರಲು ಔಷಧಿಯ ಜತೆಗೆ ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸಬೇಕು. ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಇರುವ ಆಹಾರ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಅಂತಹ ಆಹಾರಗಳು ಯಾವುದು ಎಂದು ತಿಳಿಯುವ.
- ಹಣ್ಣುಗಳು
ಮಧುಮೇಹಿಗಳು ಹಣ್ಣುಗಳನ್ನು ತಿನ್ನಬಾರದು ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಹಣ್ಣುಗಳಲ್ಲಿ ನೈಸರ್ಗಿಕದತ್ತ ಸಕ್ಕರೆಯಿದೆ. ಕಡಿಮೆ ಗ್ಲೈಸೆಮಿಕ್ ಇರುವ ಹಣ್ಣುಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು. ಸೇಬು, ದ್ರಾಕ್ಷಿ, ಪ್ಲಮ್ಸ್, ಕಿತ್ತಳೆ, ಸ್ಟ್ರಾಬೆರಿ, ಪೀಚ್, ಚೆರ್ರಿಗಳನ್ನು ಮಧುಮೇಹಿಗಳು ಸೇವಿಸಬಹುದು.
- ಕಡಿಮೆ ಗ್ಲೈಸೆಮಿಕ್ ಇರುವ ಇತರ ಆಹಾರಗಳು
ಓಟ್ಸ್, ಕಿಡ್ನಿ ಬೀನ್ಸ್, ಕ್ವಿನೋವಾ, ಹಾಲು, ಬಾದಾಮಿ, ಆಲಿವ್ ತೈಲ, ಅಕ್ಕಿ ಹೊಟ್ಟಿನ ಎಣ್ಣೆ, ವಾಲ್ ನಟ್ಸ್ ಮತ್ತು ತರಕಾರಿಗಳಾದ ಕ್ಯಾರೆಟ್, ಬ್ರಾಕೋಲಿ, ಟೊಮೆಟೊ ಮತ್ತು ಹೂಕೋಸು.
ಕಡಿಮೆ ಗ್ಲೈಸೆಮಿಕ್ ಇರುವ ಆಹಾರ ತಿಂದರೆ ಆಗುವ ಇತರ ಲಾಭಗಳು
ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು. ಇದರಿಂದ ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ಕಡಿಮೆ ಮಾಡುವುದು.
ತೂಕ ಇಳಿಸಲು ಇದು ಸಹಕಾರಿ ಆಗಿದೆ.
ಹೃದಯದ ಕಾಯಿಲೆ ಅಪಾಯವನ್ನು ಇದು ಕಡಿಮೆ ಮಾಡುವುದು.