ಹುರಿಯದೆ ಇರುವಂತಹ ಕಾಫಿಯಿಂದ ಪಡೆಯುವಂತಹ ಗ್ರೀನ್ ಕಾಫಿ(ಹಸಿರು ಕಾಫಿ)ಯಲ್ಲಿ ಉತ್ತಮ ಪ್ರಮಾಣದಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿದೆ ಮತ್ತು ಇದು ತೂಕ ಇಳಿಸಲು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಕಾಫಿಯನ್ನು ಹುರಿದ ವೇಳೆ ಅದರಲ್ಲಿ ಇರುವಂತಹ ಕ್ಲೋರೋಜೆನಿಕ್ ಆಮ್ಲದ ಪ್ರಮಾಣವು ಕಡಿಮೆ ಆಗುವುದು. ಇದರಿಂದಾಗಿ ಹುರಿಯದೆ ಇರುವ ಅಥವಾ ಗ್ರೀನ್ ಕಾಫಿ ತೂಕ ಇಳಿಸಿಕೊಳ್ಳಲು ಸಹಕಾರಿ.
ವೈಜ್ಞಾನಿಕವಾಗಿಯೂ ಕೆಲವು ಸಾಕ್ಷ್ಯಗಳು ಗ್ರೀನ್ ಕಾಫಿಯ ಈ ಅಂಶಕ್ಕೆ ಸಿಕ್ಕಿದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕಾರಿ ಆಹಾರ ಕ್ರಮದಿಂದ ಗ್ರೀನ್ ಕಾಫಿಯಿಂದ ತೂಕ ಇಳಿಸಬಹುದು.
ಗ್ರೀನ್ ಕಾಫಿ ತೂಕ ಇಳಿಸಲು ಸಹಕಾರಿಯೇ?
ಹೌದು, ಆರೋಗ್ಯಕಾರಿ ಜೀವನಶೈಲಿ ಅನುಸರಿಸಿದರೆ ಆಗ ಗ್ರೀನ್ ಕಾಫಿ ಸೇವನೆ ಮಾಡಿದರೆ ಖಂಡಿತವಾಗಿಯೂ ತೂಕ ಇಳಿಸಬಹುದು.
ಗ್ರೀನ್ ಕಾಫಿ ಯಾವಾಗ ಕುಡಿಯಬೇಕು?
ಬೆಳಗ್ಗಿನ ಉಪಾಹಾರ ಅಥವಾ ದಿನದ ಬೇರೆ ಯಾವುದೇ ಸಮಯದಲ್ಲೂ ಗ್ರೀನ್ ಕಾಫಿ ಕುಡಿಯಬಹುದು. ಊಟವಾದ ಬಳಿಕ ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಹಾಗೂ ತೂಕ ಇಳಿಸಲು ನೆರವಾಗುವುದು. ಅಧಿಕ ಕಾರ್ಬ್ ಇರುವ ಆಹಾರ ಸೇವಿಸಿದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು.
ಗ್ರೀನ್ ಕಾಫಿ ತಯಾರಿಸುವುದು ಹೇಗೆ?
ಬ್ಲ್ಯಾಕ್ ಕಾಫಿ ತಯಾರಿಸಿದಂತೆ ಗ್ರೀನ್ ಕಾಫಿ ತಯಾರಿಸಬಹುದು. ಇದಕ್ಕೆ ದಾಲ್ಚಿನಿ ಅಥವಾ ಜೇನುತುಪ್ಪ ಹಾಕಿದರೆ ರುಚಿ ಹೆಚ್ಚುವುದು.