News Kannada
Monday, November 28 2022

ಆರೋಗ್ಯ

ಮಕ್ಕಳ ದೈಹಿಕ–ಮಾನಸಿಕ ಆರೋಗ್ಯ ಕಾಪಾಡುವುದು ಅಗತ್ಯ - 1 min read

Photo Credit :

ಮಕ್ಕಳ ದೈಹಿಕ–ಮಾನಸಿಕ ಆರೋಗ್ಯ ಕಾಪಾಡುವುದು ಅಗತ್ಯ

ಕೊರೋನಾ ಮಹಾಮಾರಿಯಿಂದ ಹಲವು ರೀತಿಯ ಸಮಸ್ಯೆಗಳು ತಲೆದೋರಿದೆ. ಅದರಲ್ಲೂ ಕೊರೋನಾದಿಂದಾಗಿ ಮಕ್ಕಳ ಜೀವನ ಶೈಲಿಯಲ್ಲಿ ಹಲವು ರೀತಿಯ ಬದಲಾವಣೆಗಳಾಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಮಕ್ಕಳ ಆರೋಗ್ಯದ ಮೇಲೆಯೂ ಪರಿಣಾಮ ಬೀರಿದೆ.

ಬಹಳಷ್ಟು ಮಕ್ಕಳು ಬದಲಾದ ಶಿಕ್ಷಣ ಪದ್ಧತಿ, ಮಕ್ಕಳು ಎದುರಿಸಿದ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ನಿವಾರಿಸುವ ಕುರಿತಂತೆ  ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮಕ್ಕಳ ರೋಗಗಳ ಸಲಹಾತಜ್ಞ ಡಾ. ಭುವನೇಶ್ವರ್ ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅವರು ಹೇಳುವಂತೆ, ಕೊರೋನಾವು ಶಾಲೆಯಿಂದ ಹಿಡಿದು ಹೊರಾಂಗಣ ಆಟಗಳವರೆಗೆ ಮಕ್ಕಳ ಎಲ್ಲಾ ರೀತಿಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಮಕ್ಕಳು ಲ್ಯಾಪ್ ಟಾಪ್ ಮತ್ತು ಟಿವಿ ಸ್ಕ್ರೀನ್‍ಗೆ ಅಂಟಿಕೊಂಡು ಬಿಟ್ಟಿದ್ದಾರೆ, ಎಷ್ಟೆಂದರೆ ಹೆಚ್ಚಿನ ಬಾರಿ ಅವರಿಗೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅಲ್ಲಿ ಶಿಕ್ಷಕರೊಂದಿಗೆ ಮತ್ತು ಸ್ನೇಹಿತರೊಂದಿಗೆ ದ್ವಿಮುಖ ಸಂವಹನದ ಕೊರತೆಯಿರುತ್ತದೆ ಮತ್ತು ಈ ಮೂಲಕ ಸಾಮಾಜಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ಎಲ್ಲಾ ಚಟುವಟಿಕೆಗಳು ಈಗ ಸಾಮಾನ್ಯ ಎಂಬಂತೆ ಕಂಡರೂ, ಇದು ಮಕ್ಕಳ ಸಮಗ್ರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಹೆಚ್ಚಿನ ಮಕ್ಕಳಿಗೆ ಶಾಲೆಯ ಹೊತ್ತಲ್ಲಿ ಮತ್ತು ಉಳಿದ ಸಮಯದಲ್ಲೂ ಆನ್‍ಲೈನ್ ತರಗತಿಗಳಿಂದ ಮಕ್ಕಳ ಸ್ಕ್ರೀನ್ ಟೈಮ್ ಹೆಚ್ಚಾಗಿದೆ. ಅಸೈನ್‍ಮೆಂಟ್‍ಗಳು ಮತ್ತು ಸಂಶೋಧನೆಯಿಂದ ಮಕ್ಕಳು ಮತ್ತಷ್ಟು ಹೆಚ್ಚು ಡಿಜಿಟಲ್ ಸಮಯಕ್ಕೆ ತೆರೆದುಕೊಳ್ಳತೊಡಗಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿರುವ ಕಾರಣ ಶಾಲಾವಧಿಯ ಬಳಿಕ ಮಕ್ಕಳನ್ನು ಚಿತ್ರಕಲೆ, ತೋಟಗಾರಿಕೆ, ಕ್ರಾಫ್ಟ್ ಮೊದಲಾದ ಹವ್ಯಾಸಗಳಲ್ಲಿ ತೊಡಗಿಕೊಳ್ಳುವಂತೆ ಪೋಷಕರು ಮಾಡುವುದು ಅನಿವಾರ್ಯವಾಗಿದೆ.

ಕಂಪ್ಯೂಟರ್ ಮತ್ತು ಲ್ಯಾಪ್‍ಟಾಪ್ ಮುಂದೆ ಕುಳಿತುಕೊಳ್ಳುವಾಗ ಸೂಕ್ತವಾದ ಭಂಗಿಯನ್ನು ಪಾಲಿಸುವುದು ತುಂಬಾ ಮುಖ್ಯವಾಗಿದ್ದು, ಆನ್‍ಲೈನ್ ತರಗತಿಯ ವೇಳೆ ಸೋಫಾ ಅಥವಾ ಕೌಚ್ ಮೇಲೆ ಕೂರದಂತೆ ನೋಡಿಕೊಳ್ಳಬೇಕು. ಸೂಕ್ತವಾದ ಮೇಜು ಮತ್ತು ಕುರ್ಚಿಯ ವ್ಯವಸ್ಥೆ ಮಾಡಿ ಮತ್ತು ಕುರ್ಚಿಯಲ್ಲಿ ಅವರ ಬೆನ್ನು ನೇರವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅಗತ್ಯ. 

ಇನ್ನು ಹೆತ್ತವರು ತಮ್ಮ ಮಕ್ಕಳನ್ನು ಹೊರಗೆ ಕಳಿಸಲು ಹೆದರುತ್ತಿರುವುದರಿಂದ ಆಡುವ ಸಮಯವನ್ನೂ ಟಿವಿ, ಲ್ಯಾಪ್‍ಟಾಪ್, ಅಥವಾ ವೀಡಿಯೋ ಗೇಮ್‍ಗಳು ಆವರಿಸಿಕೊಂಡಿವೆ. ಇದರಿಂದ ಅವರು ಹೊರಗೆ ಬರಬೇಕಾದರೆ, ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಪೋಷಕರು ಮಾಡಬೇಕು. ಮನೆಯ ಗೇಟ್ ಒಳಗಡೆಯೇ ಅವರೊಂದಿಗೆ ಕ್ರಿಕೆಟ್ ಅಥವಾ ಬ್ಯಾಡ್ಮಿಂಟನ್ ಆಡಲು ಪ್ರಯತ್ನಿಸುವುದರಿಂದ ದೈಹಿಕ ವ್ಯಾಯಾಮ ಸಿಗುತ್ತದೆ.

ಕೆಲವು ಮಕ್ಕಳಲ್ಲಿ ಆನ್‍ಲೈನ್ ತರಗತಿಗಳ ಒತ್ತಡ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಅವರಿಗೆ ತಮ್ಮ ಶಿಕ್ಷಕರು ಮತ್ತು ಸ್ನೇಹಿತರ ಜೊತೆ ಬೌತಿಕ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರೊಂದಿಗೆ ನಿರಂತರವಾಗಿ ಅವರ ತರಗತಿಗಳ ಬಗ್ಗೆ ಚರ್ಚಿಸಿ. ನಿಮ್ಮಲ್ಲಿ ಪ್ರಶ್ನೆಗಳನ್ನು ಕೇಳುವಂತೆ ಪ್ರೋತ್ಸಾಹಿಸಿ. ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅವರಿಗೆ ಧ್ಯಾನವೂ ಸಹಾಯಕವಾಗಬಹುದು. ಆನ್‍ಲೈನ್ ತರಗತಿಗಳಿಂದ ಮಕ್ಕಳು ಮನೆಯಿಂದ ಹೊರಗೆ ಕಾಲಿಡುತ್ತಿಲ್ಲವಾದುದರಿಂದ ಮಕ್ಕಳನ್ನು ಬಾಧಿಸಿರುವ ಮತ್ತೊಂದು ಸಮಸ್ಯೆಯೆಂದರೆ ಜಡಪೂರಿತ ಜೀವನಶೈಲಿ. ಇದನ್ನು ಹೋಗಲಾಡಿಸಲು ಪ್ರತಿ ದಿನ 20-30 ನಿಮಿಷ ವ್ಯಾಯಾಮ ಮಾಡುವುದು ಸಹಾಯವಾಗಲಿದೆ.

See also  ಎ.ಜೆ. ವೈದ್ಯರ ಸಾಧನೆ: 2 ವರ್ಷದ ಬಾಲಕನಿಗೆ ಬೇರ್ಪಟ್ಟ ಕಾಲುಗಳ ಮರು ಜೋಡನೆ

ಹೆತ್ತವರು ತಮ್ಮ ಮಕ್ಕಳಿಗೆ ಈಗಿನ ಪರಿಸ್ಥಿತಿಯನ್ನು ವಿವರಿಸಿ ಅದಕ್ಕೆ ಹೊಂದಿಕೊಂಡು ಹೋಗಾಗಬೇಕಾದ ಅನಿವಾರ್ಯತೆಯನ್ನು ಮಕ್ಕಳಿಗೆ ವಿವರಿಸಿ ಹೇಳುವುದು ಮುಖ್ಯ. ಕಲಿಕೆಯ ಬಗ್ಗೆ ಅವರೊಂದಿಗೆ ಚರ್ಚಿಸುವುದು ಮತ್ತು ಅವರ ಅನುಮಾನಗಳನ್ನು ಪರಿಹರಿಸುವುದರಿಂದ ಅವರಿಗೆ ತಾವು ಅನುಭವಿಸುತ್ತಿರುವ ಒತ್ತಡವನ್ನು ಮೀರಿ ನಿಲ್ಲಲು ಸಹಾಯವಾಗಬಹುದು. ಜೊತೆಗೆ, ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಹಾಯ ನೀಡುವುದರಿಂದ, ನಿಯಮಿತವಾಗಿ ವ್ಯಾಯಾಮ ಮಾಡಲು ಪೆÇ್ರೀತ್ಸಾಹ ನೀಡುವುದರಿಂದ ಮತ್ತು ಜಡ ಜೀವನಶೈಲಿಯಿಂದ, ಹೆಚ್ಚುತ್ತಿರುವ ಸ್ಕ್ರೀನ್ ಟೈಮ್‍ನಿಂದ  ಹೊರಬರಲು ಒಳಾಂಗಣ ಚಟುವಟಿಕೆಗಳಿಗೆ ಸಹಾಯ ಮಾಡುವುದು ಅಗತ್ಯ ಎನ್ನುವುದು ಡಾ. ಭುವನೇಶ್ವರ್ ಅವರ ಅಭಿಪ್ರಾಯವಾಗಿದೆ.

ಪಾಸ್ತಾ, ಪಿಜ್ಜಾ, ಡೀಪ್ ಫ್ರೈಡ್ ಸ್ನಾಕ್ಸ್ ಮೊದಲಾದ ಜಂಕ್ ಫುಡ್‍ಗಳನ್ನು ನಿವಾರಿಸಿ. ಸ್ನಾಕ್ಸ್‍ನಲ್ಲಿ ಕಾಳುಗಳು, ಬೀಜಗಳನ್ನು ಸೇರಿಸಿ ಹೆಚ್ಚು ತರಕಾರಿಗಳನ್ನು ತಿನ್ನುವಂತೆ ಮಕ್ಕಳನ್ನು ಆಕರ್ಷಿಸಲು ಬಣ್ಣಬಣ್ಣದ ಸಲಾಡ್‍ಗಳನ್ನು ತಯಾರಿಸಿ ಆಹಾರ ಪದ್ಧತಿಯಲ್ಲಿ ಸೊಪ್ಪುಗಳನ್ನು ಸೇರಿಸಿ ಮಕ್ಕಳು ಎಲ್ಲಾ ಹೊತ್ತಿನ ಅಹಾರಗಳನ್ನು- ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಬೋಜನದಲ್ಲಿ ಸೇರಿಸುವುದು ಒಳ್ಳೆಯದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು