News Kannada
Tuesday, February 07 2023

ಆರೋಗ್ಯ

ಬಾಡಿ ಸ್ಕಲ್ಪ್ 2021 ಕ್ಯಾಲೆಂಡರ್‌ನಲ್ಲಿ ಬಾಡಿಬಿಲ್ಡರ್‌ಗಳ ಹೊಸ ಮೂಲಮಾದರಿ!

Photo Credit :

ಬಾಡಿ ಸ್ಕಲ್ಪ್ 2021 ಕ್ಯಾಲೆಂಡರ್‌ನಲ್ಲಿ ಬಾಡಿಬಿಲ್ಡರ್‌ಗಳ ಹೊಸ ಮೂಲಮಾದರಿ!

ಬಾಡಿಬಿಲ್ಡರ್ಗಳ ಬಗ್ಗೆ ಹಿಂದಿನಿಂದಲೂ ಬಂದಿರುವ ಅಭಿಪ್ರಾಯಗಳನ್ನು ನಿಕೋಸ್ ನಾರ್ಕಿಸೋಸ್ ಛಾಯಾಗ್ರಹಣದಲ್ಲಿ ಮೂಡಿಬಂದ ಬಾಡಿ ಸ್ಕಲ್ಪ್ಟ್ 2021 ಕ್ಯಾಲೆಂಡರ್ ಮುರಿದಿದೆ. ನಮ್ಮ ಹತ್ತಿರದವರ ಮತ್ತು ಆತ್ಮೀಯರ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಾಗಿರುವಂತಹ ಇಂತಹ ಆಪತ್ತಿನ ದಿನಗಳಲ್ಲಿ ಭಾರತದ ಎಲ್ಲಾ ದೇಹದಾಡ್ಯರ ನಂಬಿಕೆ ಮತ್ತು ಭರವಸೆಯ ಮೂಲಕ ಒಟ್ಟು ಗೂಡಿಸಿರುವುದು ಆರೋಗ್ಯ ಮತ್ತು ಫಿಟ್ನೆಸ್ ಹಾದಿಯಲ್ಲಿ ಉಳಿಯುವಂತೆ ಮಾಡಿದೆ.

ಬಾಡಿ ಸ್ಕಲ್ಪ್ಟ್ ವಾರ್ಷಿಕ ಕ್ಯಾಲೆಂಡರ್ ಆಗಿದ್ದು, ಇದು ಬೆಂಗಳೂರು ಮೂಲದ ಪ್ರಸಿದ್ಧ ಫ್ಯಾಷನ್ ಮತ್ತು ಫಿಟ್ನೆಸ್ ಛಾಯಾಗ್ರಾಹಕ ನಿಕೋಸ್ ನಾರ್ಕಿಸೋಸ್ ಮಾಂತ್ರಿಕ ಕ್ಯಾಮರಾದಿಂದ ಸೆರೆಹಿಡಿಯಲ್ಪಟ್ಟ ದೇಶಾದ್ಯಂತ ಇರುವ ಬಾಡಿಬಿಲ್ಡರ್ಗಳ ಛಾಯಾಚಿತ್ರಗಳನ್ನು ಒಳಗೊಂಡಿದೆ.

2021 ಕ್ಯಾಲೆಂಡರ್‌ನ ಥೀಮ್ “ಬ್ಯೂಟಿ ವಿಥ್ ಇಂಟೆಲೆಕ್ಟ್” ಆಗಿದ್ದು, ಕ್ಯಾಲೆಂಡರ್‌ನ ಕುರಿತು ಮಾತನಾಡಿದ ಅವರು, “ಬಾಡಿಬಿಲ್ಡರ್‌ಗಳು ಸಾಮಾನ್ಯವಾಗಿ ಕಡಿಮೆ ಬುದ್ಧಿಶಕ್ತಿ ಹೊಂದಿರುತ್ತಾರೆಂಬುದು ರೂಢಿಯಲ್ಲಿದೆ. ಹಾಗೆಯೇ ಐಐಟಿಗಳಿಂದ ಪದವಿ ಪಡೆದವರು ಕೂಡ ಮಾಡೆಲಿಂಗ್‌ಗೆ ಅನರ್ಹರೆಂದು” ಹೇಳಲಾಗುತ್ತದೆ ಎಂದು ಛಾಯಾಗ್ರಾಹಕ ನಿಕೋಸ್ ನಾರ್ಕಿಸೋಸ್ ನ್ಯೂಸ್‌ಕಾರ್ನಾಟಕ.ಕಾಂಗೆ ತಿಳಿಸಿದರು. 2021 ಬಾಡಿ ಸ್ಕಲ್ಪ್ಟ್ ಕ್ಯಾಲೆಂಡರ್ ನಲ್ಲಿ ದೇಹದಾಡ್ಯಾತೆಯ ಬಗ್ಗೆ ಇರುವ ಗೆ ಈ ತಪ್ಪು ಕಲ್ಪನೆಗಳನ್ನು ಪ್ರಶ್ನಿಸಲು ಬಯಸುತ್ತೇನೆ ಎಂದು ನಿಕೋಸ್ ಹೇಳಿದ್ದಾರೆ.

ಕ್ಯಾಲೆಂಡರ್‌ನ ಕವರ್ ಪೇಜ್‌ನಲ್ಲಿ ಐಐಟಿ- ದೆಹಲಿಯಿಂದ ಸ್ನಾತಕೋತ್ತರ ಪದವಿ ಪಡೆದ ಪಿಯೂಷ್ ದಾಸ್ ರವರ ಫೋಟೋ ವನ್ನು ಮುದ್ರಿಸಲಾಗುತ್ತದೆ. ಪಿಯೂಷ್ ಮುಲತಃ ತ್ರಿಪುರದವರು ಆದರೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಫಿಟ್‌ನೆಸ್ ಕ್ಯಾಲೆಂಡರ್‌ನ ಮುಖಪುಟದಲ್ಲಿ ಭಾರತೀಯರ ಈಶಾನ್ಯ ಭಾಗದಿಂದ ಮಾದರಿಯನ್ನು ಪ್ರದರ್ಶಿಸಿದ ಮೊದಲ ವ್ಯಕ್ತಿ ಎಂಬ ಹೆಮ್ಮೆಯಿದೆ ಎಂದು ಹೇಳಿದರು.

ಈ ಉದ್ಯಮವು ಕೇವಲ ಮಾಡೆಲಿಂಗ್‌ಗೆ ಮಾತ್ರ ಸೀಮಿತವಾಗಿಲ್ಲದ ಕಾರಣ, ಬಾಡಿಬಿಲ್ಡರ್ ಈ ಕ್ಷೇತ್ರದಲ್ಲಿ ಸರಿಯಾದ ರೀತಿಯ ತರಬೇತಿ ಮತ್ತು ಶಿಕ್ಷಣವನ್ನು ಹೊಂದಿರ ಬೇಕಾದದ್ದು ಮುಖ್ಯ ಎಂದು ನಿಕೋಸ್ ನಂಬಿದ್ದಾರೆ. ದೇಹದಾಢ್ಯತೆಯೂ ಭಾರತೀಯ ಇತಿಹಾಸದಲ್ಲಿ ನೆಲೆಯೂರಿತ್ತೆಂದು ಎಂದು ನಿಕೋಸ್ ಬಲವಾಗಿ ನಂಬುತ್ತಾರೆ. ಭಾರತೀಯ ಪುರಾಣಗಳಲ್ಲಿ, ಕಮಾನು-ವಿಶಿಷ್ಟ ಬಾಡಿಬಿಲ್ಡರ್ ಆಗಿದ್ದ ಹನುಮಾನ್ ಇದಕ್ಕೆ ಸ್ಪಷ್ಟ ಉದಾಹರಣೆ.

ಇಂದಿನ ಕಾಲಘಟ್ಟದ ನಟರಾದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್‌ರಂತಹವರ ದೇಹದಾಧ್ಯತೆಯ ಕಲ್ಪನೆಯು ಪಾಶ್ಚಿಮಾತ್ಯ ಪರಿಕಲ್ಪನೆಯಾಗಿದೆ. ” ದೇಹವು ಉತ್ತಮವಾಗಿ ನಿರ್ಮಿಸಲ್ಪಟ್ಟಾಗ, ನಾವು ಅವರನ್ನು” ಅರ್ನಾಲ್ಡ್ ಶ್ವಾರ್ಜಿನೆಗ್ಗರ್ “ಎಂದು ಕರೆಯುತ್ತೇವೆ,” ಈ ಉದ್ಯಮದ ಪಾಶ್ಚಿಮಾತ್ಯೀಕರಣಕ್ಕೆ ಪ್ರಮುಖ ಕಾರಣವೆಂದರೆ ಅದು ಪ್ರತಿಭೆಗಳ ಕೊರತೆಯಿಂದಲ್ಲ ಈ ದೇಶದಲ್ಲಿನ ಪ್ರತಿಭೆಗಳು ಪ್ರಚಾರವನ್ನು ಪಡೆಯದೇ ಇರುವುದು ಎಂದು ನಿಕೋಸ್ ಹೇಳುತ್ತಾರೆ.

ನಿಕೋಸ್ ಕೇವಲ ಛಾಯಾಗ್ರಾಹಕನಲ್ಲ; ಅವರು ಸಮಾಜಕ್ಕೆ ಕನ್ನಡಿ ಹಿಡಿದ ಕಲಾವಿದ. “ನಾನು 2015 ರಲ್ಲಿ ಛಾಯಾಗ್ರಹಣವನ್ನು ಪ್ರಾರಂಭಿಸಿದಾಗ, ದೇಶದ ಹೊರಗಿನಿಂದ ಸಾಕಷ್ಟು ಮಾದರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಾನು ಗಮನಿಸಿದ್ದೇನೆ. “ನಮ್ಮ ಭಾರತೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ನಾವು ವಿದೇಶಿ ಮಾದರಿಗಳನ್ನು ಬಳಸುತ್ತಿದ್ದೆವು” ಎಂದು ನಿಕೋಸ್ ವಿವರಿಸಿದ್ದಾರೆ.

See also  ಕ್ರಿಯಾಶೀಲರಾಗಿರಲು ಮಾನಸಿಕ ಆರೋಗ್ಯ ಬಹುಮುಖ್ಯ

ಕಳೆದುಹೋದ ಭಾರತೀಯತೆಯ ಅರ್ಥವನ್ನು ದೇಹದಾಡ್ಯಾತೆಯ ಉದ್ಯಮಕ್ಕೆ ಮರಳಿ ತರಲು, ಕ್ಯಾಲೆಂಡರ್ ದೇಶಾದ್ಯಂತ ಮಾದರಿಗಳನ್ನು ಒಳಗೊಂಡಿದೆ. ನಿಕೋಸ್ ಛಾಯಾಗ್ರಹಣಕ್ಕೆ ಧೋತಿಗಳಂತಹ ಭಾರತೀಯ ಉಡುಪುಗಳನ್ನು ಬಳಸಲಾಗಿದೆ ಮತ್ತು ಎಲ್ಲಾ ವಿಧದ ಚರ್ಮದ ಬಣ್ಣಗಳ ಪುರುಷರು ಮತ್ತು ಮಹಿಳೆಯರನ್ನು ಮಾಡೇಲ್ಗಳಾಗಿ ಬಳಸಿಕೊಳ್ಳಲಾಗಿದೆ ಎಂದು ಅವರು ನ್ಯೂಸ್ ಕರ್ನಾಟಕ ಡಾಟ್ ಕಾಮ್ ಗೆ ತಿಳಿಸಿದರು.

ದೇಹದಾಡ್ಯಾತೆಯನ್ನು ಭಾರತೀಯ ಮೂಲಗಳೊಂದಿಗೆ ಮರುಸಂಪರ್ಕಿಸುವುದರ ಜೊತೆಗೆ, ಆರೋಗ್ಯಕರ ಫಿಟ್‌ನೆಸ್ ಅಭ್ಯಾಸವನ್ನು ಪ್ರೋತ್ಸಾಹಿಸುವ ಮೂಲಕ ನಿಕೋಸ್ ಕಲಾವಿದರಿಗೆ ಒಂದು ಸ್ಥಾನವನ್ನು ನೀಡಲು ಬಯಸುತ್ತಾರೆ. ಬಾಡಿ ಶೇಮಿಂಗ್ ಮಾಡುವ ಜನರಿಗೆ ಸೋಷಿಯಲ್ ಮೀಡಿಯಾ ಒಂದು ಸ್ಥಳವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಬಾಡಿ ಸ್ಕಲ್ಪ್ 2021 ರಲ್ಲಿ ಕಾಣಿಸಿಕೊಂಡ ಮಾದರಿಗಳು:

ಪಿಯೂಷ್ ದಾಸ್

ಪಿಯೂಷ್ ದಾಸ್ ಮೂಲತಃ ತ್ರಿಪುರ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಐಐಟಿ-ದೆಹಲಿಯಿಂದ ಸ್ನಾತಕೋತ್ತರ ಪದವಿ ಪಡೆದ ಇವರು ಪಿಯೂಷ್ ಕ್ಯಾಲೆಂಡರ್‌ನ ಮುಖ ಪುಟದಲ್ಲಿ ಕಾಣಿಸಿಕೊಂಡಿದ್ದಾರೆ.

ಕುಶಾಲ್ ಗುರುಂಗ್

ಕುಶಾಲ್ ಗುರುಂಗ್ ಪಶ್ಚಿಮ ಬಂಗಾಳ ಮೂಲದವರಾದರೂ ಈಗ ಮುಂಬೈನಲ್ಲಿ ನಟ ಮತ್ತು ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ವಿಕ್ಕಿ ಕೌಶಲ್ ಅವರಂತಹ ದೊಡ್ಡ ನಟರೊಂದಿಗೆ ಅವರು ಪರದೆಯನ್ನು ಹಂಚಿಕೊಂಡಿದ್ದು, ಮಸಲ್ಮೇನಿಯಾ ಮಾದರಿ ವಿಭಾಗದಲ್ಲಿ 2016 ರಲ್ಲಿ ಭಾರತದ ಮೊದಲ ರನ್ನರ್ ಅಪ್ ಆಗಿದ್ದರು.

ನವೀನ್ ನಾಯಕ್

ನವೀನ್ ನಾಯಕ್ ಅವರು  ಗೋವಾದ ಮಾಡೆಲ್ ಹಾಗೂ ತೋರ್ ಫಿಟ್ನೆಸ್ ಜಿಮ್ ಮಾಲೀಕ. ಫಿಟ್ನೆಸ್ ಸ್ಪರ್ಧೆಗಳಲ್ಲಿ ಅವರು ರಾಜ್ಯಮಟ್ಟದ ಹಲವಾರು ಪದಕಗಳನ್ನು ಮತ್ತು ಟ್ರೋಫಿಗಳನ್ನು ಗೆದ್ದಿದ್ದಾರೆ.

ರಿಷಿ ಶೇಟ್

ರಿಷಿ ಶೆಟ್ ಗೋವಾ ಮೂಲದ ಮಾಡೆಲ್ ಆಗಿದ್ದು, ಗೋವಾ ಮೆನ್ ಫಿಸಿಕ್ ಚಾಂಪಿಯನ್‌ ಶಿಪ್ 2019 ರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಅಂಕಿತಾ ಸಿಂಗ್

ಅಂಕಿತಾ ಸಿಂಗ್ ಬೆಂಗಳೂರು ಮೂಲದ ಮಾಡೆಲ್ ಆಗಿದ್ದು, ಅವರು ಮೂಲತಃ ಲಕ್ನೋ ಮೂಲದವರಾಗಿದ್ದಾರೆ. ಅವರು ಡಿವೈನ್ ನ್ಯೂಟ್ರಿಷನ್ ಮತ್ತು ರೈಟ್ ಬೈಟ್ ಪ್ರೋಟೀನ್ ಬಾರ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ, ಅವರು ಪ್ರತಿಷ್ಠಿತ ಭಾರತೀಯ ಬಾಡಿ ಬಿಲ್ಡರ್ಸ್ ಫೆಡರೇಶನ್ (ಐಬಿಬಿಎಫ್) ಅಥ್ಲೀಟ್, ಬಿಕಿನಿ ಸ್ಪರ್ಧಿ, ಫಿಟ್‌ನೆಸ್ ಸಲಹೆಗಾರ, ಲೈಫ್‌ಸ್ಟೈಲ್ ಬ್ಲಾಗರ್, ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ಕೂಡಾ ಆಗಿದ್ದರು. ಈ ಹಿಂದೆ ಮಿಸ್ ಕರ್ನಾಟಕ ಮತ್ತು ಮಿಸ್ ಇಂಡಿಯಾದಂತಹ ಪ್ರಶಸ್ತಿಗಳನ್ನ ಕೂಡಾ ಗೆದ್ದಿದ್ದಾರೆ.

ಕೌಶಿಕ್ ಮೋಹನ್

ಬೆಂಗಳೂರು ಮೂಲದ ಕೌಶಿಕ್ ಮೋಹನ್ ಅವರು ಕರ್ನಾಟಕ ರಾಕ್ಸ್ ಕ್ಲಾಸಿಕ್ ಪುರುಷರ ಮೈಕಟ್ಟು ವಿಭಾಗದಲ್ಲಿ 2017 ರನ್ನರ್ ಅಪ್ ಆಗಿದ್ದರು.

ಅವಿದ್ ಆನಂದ್ ಮೊರಾಜ್ಕರ್

ಅವಿದ್ ಆನಂದ್ ಮೊರಾಜ್ಕರ್ ಗೋವಾ ಮೂಲದ ಮಾಡೆಲ್ ಆಗಿದ್ದು, ಪ್ರಸ್ತುತ ಗೋವಾ ವಿಶ್ವವಿದ್ಯಾಲಯದ ಸಹಾಯಕ ಕ್ರೀಡಾ ಅಧಿಕಾರಿಯೂ ಆಗಿದ್ದಾರೆ. 2020 ರಲ್ಲಿ ನಡೆದ 9ನೇ ಫೆಡರೇಶನ್ ಕಪ್ ಸೀನಿಯರ್ ಪುರುಷರ ಸ್ಪೋರ್ಟ್ಸ್ ಫಿಸಿಕ್ ನ್ಯಾಷನಲ್ ಚಾಂಪಿಯನ್‌ಶಿಪ್ ನಲ್ಲಿ 4 ನೇ ಸ್ಥಾನ, 2019 ರ ಏಪ್ರಿಲ್‌ನಲ್ಲಿ ನಡೆದ ಗೋವಾ ರಾಜ್ಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 69 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ, ಅತ್ಯುತ್ತಮ ಪೋಸರ್ ಸೇರಿದಂತೆ ಅವರ ವೃತ್ತಿಜೀವನದಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಮಾರ್ಚ್ 2019 ರಲ್ಲಿ ನಡೆದ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ ಶಿಪ್ ನಲ್ಲಿ “ಮಾಪುಸಾ ಶ್ರೀ 2020” ನಲ್ಲಿ 2 ನೇ ಸ್ಥಾನ, ಮತ್ತು ಮಿಸ್ಟರ್ ಇಂಪ್ಯಾಕ್ಟ್ 2019 ರಲ್ಲಿ ಮೊದಲ ಸ್ಥಾನವನ್ನ” ಪಡೆದಿದ್ದಾರೆ.

See also  ದೇಹದ ಕೊಬ್ಬು ನಿವಾರಣೆಗೆ ಆಡಿನ ಹಾಲು ಉತ್ತಮ

ಉಮರ್ ರಶೀದ್

ಶ್ರೀನಗರ ಮೂಲದ ಉಮರ್ ರಶೀದ್ ಕಾಶ್ಮೀರದಿಂದ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡ ಮೊದಲ ಕ್ರೀಡಾಪಟು ಎನಿಸಿದ್ದಾರೆ. ಅವರು ಮಿಸ್ಟರ್ ಕಾಶ್ಮೀರ 2017 ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು 2017 ರ ಮಸಲ್ಮೇನಿಯಾ ಇಂಡಿಯಾ ಹೆವಿವೈಟ್ ಚಾಂಪಿಯನ್ ಆಗಿದ್ದಾರೆ. 

ಮನನ್ ಚೌಹಾನ್

ಮನನ್ ಚೌಹಾನ್ ದೆಹಲಿ ಮೂಲದ ಮಾಡೆಲ್ ಆಗಿದ್ದಾರೆ. 23 ವರ್ಷದ ಎಂಬಿಎ ಪದವೀಧರರಾದ ಮನನ್ ಎಡ್ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ.

ಸುಮಿತ್ ಕುಮಾರ್

ಹರಿಯಾಣ ಸುಮಿತ್ ಕುಮಾರ್  ಅವರು ಎಂ.ಕಾಂ ಪದವಿ ಪಡೆದಿದ್ದಾರೆ. ಮಿಸ್ಟರ್ ಹರಿಯಾಣ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ, ಮಿಸ್ಟರ್ ಹರಿಯಾಣ ಹಿರಿಯ ಚಿನ್ನದ ಪದಕದ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು 2018 ರಲ್ಲಿ ಮಿಸ್ಟರ್ ಹಿಸಾರ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ವೀರೇಂದ್ರ ವಸ್ತ್

ವೀರೇಂದ್ರ ವಸ್ತ್ ನವದೆಹಲಿಯವರಾಗಿದ್ದು, ಸಸ್ಯಾಹಾರಿ ಬಾಡಿಬಿಲ್ಡರ್ ಮತ್ತು ತರಬೇತುದಾರರಾಗಿದ್ದಾರೆ. ಅವರು ಕಳೆದ 8 ವರ್ಷಗಳಿಂದ ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು ಫಿಟ್‌ ಫ್ಯಾಕ್ಟರ್ ಪ್ರಾದೇಶಿಕ ಚಾಂಪಿಯನ್‌ ಶಿಪ್ -2019 ರಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಮೈಕೆಲ್ ರಜಪೂತ್

ಮೈಕಲ್ ರಜಪೂತ್ ಪಂಜಾಬ್ ಮೂಲದವರಾಗಿದ್ದು, ಮುಂಬೈ ಮೂಲದ ನಟ ಕಮ್ ಮಾಡೆಲ್ ಆಗಿದ್ದಾರೆ.

ಕಪಿಲ್ ಕಶ್ಯಪ್

ಕಪಿಲ್ ಕಶ್ಯಪ್ ದೆಹಲಿ ಮೂಲದ ಮಾಡೆಲ್ ಆಗಿದ್ದು, ಜಿಎಫ್‌ಎಫ್‌ಐ ಮತ್ತು ಬಿಸಿಐಪಿ ಮಾಸ್ಟರ್ ಕೋಚ್ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

202
Srinivasa Pejathaya

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು