NewsKarnataka
Sunday, January 23 2022

ಆರೋಗ್ಯ

ತೂಕ ಇಳಿಸಲು ರಾಮಬಾಣ ನಿಂಬೆ ರಸ

ನಿಂಬೆ ರಸದ ಉಪಯೋಗಗಳು

ಟಾಕ್ಸಿನ್ ಹೊರ ಹಾಕಲು ಸಹಾಯ : ಈ ಮಿಶ್ರಣದಲ್ಲಿ ಸಾಕಷ್ಟು ಆಮ್ಲೀಯ ಗುಣಗಳಿರುವುದರಿಂದ ಇದನ್ನು ಕ್ಷಾರೀಯ(ಆಲ್ಕೈನ್) ಪಾನೀಯದ ಉತ್ತಮ ಮೂಲ ಎಂದು ಹೇಳಬಹುದು. ಇದು ದೇಹದ ಪಿಎಚ್‍ಅನ್ನು ಸಮತೋಲನಗೊಳಿಸುತ್ತದೆ. ಯಕೃತ್ತಿನಲ್ಲಿರುವ ಟಾಕ್ಸಿನ್‍ಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯವೂ ಬಿಸಿ ನೀರು ಮತ್ತು ನಿಂಬೆಯ ಮಿಶ್ರಣವನ್ನು ಸೇವಿಸುವುದು ಒಂದು ಉತ್ತಮ ಅಭ್ಯಾಸ ಎನ್ನಬಹುದು.

ಸ್ಥೂಲಕಾಯ ನಿವಾರಣೆ : ನೀವೇನಾದರೂ ನಿಮ್ಮ ತೂಕವನ್ನು ಕಡಿಮೆಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ, ಇದು ಸುಲಭ ಉಪಾಯ. ಪ್ರತಿನಿತ್ಯ ಬೆಳಿಗ್ಗೆ ಒಂದು ಲೋಟ ಬಿಸಿನೀರಿಗೆ ನಿಬೆ ಹಣ್ಣಿನ ರಸ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿಯಾದರೂ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಿತ ನೀರು ಸೇವನೆ ಮತ್ತು ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿದರೆ, ಉತ್ತಮ ಫಲಿತಾಂಶ ಕಾಣಬಹುದು.

ಮಲಬದ್ಧತೆ ನಿವಾರಣೆ : ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಆಸಿಡ್ ಇದೆ. ಈ ಸಿಟ್ರಿಕ್ ಆಸಿಡ್ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಇನ್ನು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಪೆಕ್ಟಿನ್ ಫೈಬರ್ ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿದೆ. ನಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ದೂರಾಗುತ್ತದೆ.

ಮಧುಮೇಹ ನಿಯಂತ್ರಣ : ಮಧುಮೇಹ ಸಂಬಂಧಿ ಕಣ್ಣಿನ ರೋಗಗಳನ್ನು ನಿವಾರಿಸುವುದರೊಂದಿಗೆ, ನಿಂಬೆ ಹಣ್ಣಿನಲ್ಲಿರುವ ಹೆಸ್ಪರ್ಟಿನ್(hesperetin) ಎಂಬ ರಾಸಾಯನಿಕ ರಕ್ತದಲ್ಲಿರುವ ಸಕ್ಕರೆಯ ಅಂಶ (ಸಕ್ಕರೆಯ ಪ್ರಮಾಣವು ರಕ್ತದಲ್ಲಿ ಹೆಚ್ಚು ಇದ್ದಾಗ)ವನ್ನು ಸಹ ಕಡಿಮೆ ಮಾಡುತ್ತದೆ.

ಹೊಟ್ಟೆ ನೋವು ನಿವಾರಣೆ : ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ. ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚರ್ಮ ಸಮಸ್ಯೆಗಳಿಗೆ ರಾಮಬಾಣ : ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗಿರುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ.

ನಿಂಬೆ ರಸವು ಪೆಕ್ಟಿನ್‍ಅನ್ನು ಒಳಗೊಂಡಿರುತ್ತದೆ. ದೈನಂದಿನ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಾದ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಉತ್ತೇಜಿಸುತ್ತದೆ. ಉನ್ನತ ಆರೋಗ್ಯ ಪರಿಕಲ್ಪನೆಗೆ ಈ ಮಿಶ್ರಣ ದಿವ್ಯ ಔಷಧ ಎನ್ನಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.