News Kannada
Friday, January 27 2023

ಆರೋಗ್ಯ

ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಸೇವಿಸುವ ಮುನ್ನ ಒಂದು ಬಾರಿ ಯೋಚಿಸಿ

Photo Credit :

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಅದೇ ರೀತಿ ಕಳೆದ ಎರಡು ವರ್ಷಗಳಿಂದ ನಾವು ಕಾಣುತ್ತಿರುವಂತೆ ಕೊರೋನಾ ಜಗತ್ತಿನೆಲ್ಲೆಡೆ ಕಾಡುತ್ತಿದೆ. ಒಂದನೆಯ ಬಳಿಕ ಇದೀಗ ಎರಡನೆಯ ಅಲೆ ಕೂಡ ಜಗತ್ತಿಗೆ ಅಪ್ಪಳಿಸಿದೆ.
ಸಾಮಾನ್ಯವಾಗಿ ಈ ಸಂದರ್ಭದಲ್ಲಿ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಭಯದಿಂದ ಜನರೆಲ್ಲರೂ ಆಯುರ್ವೇದ ಚಿಕಿತ್ಸೆ ಅಥವಾ ಮನೆ ಮದ್ದು ಮಾಡಿ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ಹೇಳುವುದಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಕರಿಮೆಣಸಿನ ಕಷಾಯ ನೆಲನೆಲ್ಲಿ ಕಷಾಯ ವೈದ್ಯರ ಸಲಹೆಯಿಲ್ಲದೆ ತಮ್ಮಷ್ಟಕ್ಕೆ ತಾವು ಸೇವಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.ಇಂತಹ ಕಷಾಯಗಳು ಎಲ್ಲರ ದೇಹಕ್ಕೆ ಹೊಂದಬಹುದು ಎಂದು ಹೇಳಲು ಸಾಧ್ಯವಿಲ್ಲ. ಕೆಲವರ ಶರೀರ ಉಷ್ಣ ಪ್ರಕೃತಿಯನ್ನು ಹೊಂದಿರುತ್ತದೆ.

ಇಂತಹ ವ್ಯಕ್ತಿಗಳಿಗೆ ಆಯುರ್ವೇದ ಗಿಡಮೂಲಿಕೆಗಳ ಕಷಾಯವು ಮಾರಕವಾಗುವ ಸಾಧ್ಯತೆ ಇರುತ್ತವೆ. ತಮ್ಮ ದೇಹಕ್ಕೆ ಯಾವ ರೀತಿಯ ಔಷಧಿ ಸೇವಿಸಬೇಕೆಂದು ತಮ್ಮ ವೈದ್ಯರಿಗೆ ಮಾತ್ರ ತಿಳಿದಿರುತ್ತದೆ.ಅವರ ಸಲಹೆ ಮೇರೆಗೆ ನಾವು ಅಂತಹ ಔಷಧಿಗಳನ್ನು ಸೇವಿಸಬಹುದು.

ಕೇವಲ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಎನ್ನುವ ಯೋಚನೆಯಲ್ಲಿ ಹೊಸದೊಂದು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಲ್ಲರ ದೇಹ ಸ್ಥಿತಿಗೆ ಎಲ್ಲ ರೀತಿಯ ಔಷಧಿಗಳು ಹೊಂದಿಕೊಳ್ಳುವುದು ಅಸಾಧ್ಯ.

ಮೊದಲನೇ ಅಲೆ ಕೊರೋನಾ ಸಂದರ್ಭದಲ್ಲಿ ಬಿಸಿನೀರಿಗೆ ಇತರ ಗಿಡಮೂಲಿಕೆಗಳನ್ನು ಹಾಕಿ ಆವಿ ತೆಗೆದುಕೊಳ್ಳುವ ಪ್ರವೃತ್ತಿಯನ್ನು ಪಟ್ಟಣಗಳಲ್ಲಿ ಹಾಗೂ ಹಳ್ಳಿ ಮನೆಗಳಲ್ಲೂ ಆರಂಭಗೊಂಡಿತ್ತು. ಈ ಬಗ್ಗೆ ಹೇಳುವುದಾದರೆ ಪದೇ ಪದೇ ಈ ರೀತಿಯ ಆವಿಯನ್ನು ತೆಗೆದುಕೊಳ್ಳುವುದರಿಂದ ಮುಂದೆ ಬೇರೊಂದು ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಯಾವುದೇ ಸ್ವ ಚಿಕಿತ್ಸೆ ತೆಗೆದುಕೊಳ್ಳುವ ಮೊದಲು ಅದು ನಮ್ಮ ದೇಹಕ್ಕೆ ಹೊಂದಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲೇಬೇಕು. ಎಂದು ಕಾಕುಂಜೆ ಆಯುರ್ವೇದ ವೆಲ್ ನೆಸ್ ವೈಧ್ಯೆ ಅನುರಾಧ ಅವರು ಹೇಳುತ್ತಾರೆ.

ಸಮಯಕ್ಕೆ ಸರಿಯಾಗಿ ಉತ್ತಮ ನಿದ್ರೆ ಉತ್ತಮ ಆಹಾರ ಸೇವನೆ ಮಾಡಿದರೆ ನಮ್ಮ ದೇಹಸ್ಥಿತಿಯ ಸಮತೋಲನದಲ್ಲಿರುತ್ತದೆ. ಇತ್ತೀಚೆಗೆ ಎಲ್ಲರೂ ಒತ್ತಡದ ಜೀವನವನ್ನು ನಡೆಸುವ ಪರಿಪಾಠವನ್ನು ಹೊಂದಿದ್ದಾರೆ. ಸರಿಯಾಗಿ ನಿದ್ರೆ ಮಾಡುತ್ತಿಲ್ಲ. ಆಹಾರದ ವಿಚಾರದಲ್ಲಿ ಉದಾಸ ಬಾವ ಹೊಂದಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಡಾ. ಅನುರಾಧ ಅವರು ಹೇಳುತ್ತಾರೆ ಹಸಿವು ಯಾವಾಗ ಆಗುತ್ತದೆಯೋ ಆ ಸಂದರ್ಭದಲ್ಲಿ ನಾವು ಹೊಟ್ಟೆಗೆ ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕು. ಬದಲಾಗಿ ಇಷ್ಟೇ ಸಮಯಕ್ಕೆ ಆಹಾರ ತೆಗೆದುಕೊಳ್ಳುತ್ತೇವೆ ಎನ್ನುವ ದಿನಚರಿಯನ್ನು ಇರಿಸಿ ಕೊಳ್ಳಬಾರದು ಎನ್ನುತ್ತಾರೆ.

ಅದೇ ರೀತಿ ನಮ್ಮ ವಾತಾವರಣಕ್ಕೆ ಹೊಂದಿಕೊಂಡು ನಮ್ಮ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಜಂಕ್ ಫುಡ್ ಫಾಸ್ಟ್ ಫುಡ್ ಗಳನ್ನು ಆದಷ್ಟು ಸೇವಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು.
ಮನೆಯಲ್ಲೇ ಉತ್ತಮ ರೀತಿಯ ತರಕಾರಿಗಳನ್ನು ಬೇಯಿಸಿ ಅದನ್ನೇ ತಿನ್ನಬೇಕು ಎಂದು ಸಲಹೆ ನೀಡುತ್ತಾರೆ. ಈ ರೀತಿ ಉತ್ತಮ ಆಹಾರ ಪದ್ಧತಿ ಗಳನ್ನು ರೂಡಿಸಿಕೊಂಡರೆ ತನ್ನಿಂದ ತಾನಾಗಿ ಅಮ್ಮ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದಲೇ ಜ್ವರ ಅಥವಾ ಇತರ ಆರೋಗ್ಯದ ಸಂದರ್ಭದಲ್ಲಿ ಆ ರೋಗನಿರೋಧಕ ಶಕ್ತಿಯು ಅದರೊಂದಿಗೆ ಹೋರಾಡುತ್ತದೆ ಎನ್ನುತ್ತಾರೆ ಡಾ. ಅನುರಾಧ.ಕೊರೋನಾ ಗೆ ಹೆದರಿ ವೈದ್ಯರ ಸಲಹೆ ಇಲ್ಲದೆ ಕಷಾಯ ಗಳಂತಹ ಔಷಧಿಗಳನ್ನು ಸೇವಿಸುವುದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೆ ಈ ಸಮಸ್ಯೆ ಯಾವುದರಿಂದ ಹುಟ್ಟಿಕೊಂಡಿದ್ದು ಎಂದು ತಿಳಿಯುವುದು ಕೂಡ ಕಷ್ಟಸಾಧ್ಯ.

See also  ಪ್ರೀತಿಸುತ್ತಾ ಬದುಕೋದನ್ನು ಕಲಿಯೋಣ!

ಆಯುರ್ವೇದ ಔಷಧಿ ಗಳಿಗೆ ಅಡ್ಡಪರಿಣಾಮಗಳಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆಯುರ್ವೇದ ಪುಸ್ತಕ ದಲ್ಲಿರುವಂತೆ ಯಾವ ರೀತಿಯ ದೇಹಕ್ಕೆ ಯಾವ ರೀತಿಯ ಔಷಧಿಗಳು ಸರಿ ಹೊಂದಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಇಲ್ಲವೆನ್ನುವುದು ಔಷಧಿಯಿಂದ ಹೇಳಲು ಸಾಧ್ಯವಿಲ್ಲ ಬದಲಾಗಿ ನಮ್ಮ ದೇಹದ ಸ್ಥಿತಿಗೆ ಅನುಗುಣವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು.

ಆಯುರ್ವೇದ ಔಷಧಿ ಗಳಿಗೆ ಅಡ್ಡಪರಿಣಾಮಗಳಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆಯುರ್ವೇದ ಪುಸ್ತಕ ದಲ್ಲಿರುವಂತೆ ಯಾವ ರೀತಿಯ ದೇಹಕ್ಕೆ ಯಾವ ರೀತಿಯ ಔಷಧಿಗಳು ಸರಿ ಹೊಂದಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಇಲ್ಲವೆನ್ನುವುದು ಔಷಧಿಯಿಂದ ಹೇಳಲು ಸಾಧ್ಯವಿಲ್ಲ ಬದಲಾಗಿ ನಮ್ಮ ದೇಹದ ಸ್ಥಿತಿಗೆ ಅನುಗುಣವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ಡಾ. ಅನುರಾಧ ಅವರು ಸಲಹೆ ನೀಡುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

One thought on “ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಸೇವಿಸುವ ಮುನ್ನ ಒಂದು ಬಾರಿ ಯೋಚಿಸಿ

  1. Absolutely… Simple principles to be followed, not complicated formulations! Very good information, much needed.

Leave a Reply

Your email address will not be published. Required fields are marked *

4283
Swathi M G

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು