News Kannada
Tuesday, July 05 2022

ಆರೋಗ್ಯ

ಒಬೆಸಿಟಿ: ಕಾರಣಗಳು ಮತ್ತು ತಡೆಗಟ್ಟಲು ಕೆಲವು ಆಹಾರ ಕ್ರಮಗಳು - 1 min read

Photo Credit :

Listen to the Article narrated by the author:

ಒಬೆಸಿಟಿ ಸಾಮಾನ್ಯವಾಗಿ ತುಂಬಾನೇ ದೇಹದ ಕೊಬ್ಬನ್ನು ಹೊಂದಿರುವಂತಹುದು. ಹಾಗೂ ಓವರ್ ವೈಟ್ ಎಂದರೆ ತೂಕ ಜಾಸ್ತಿ ಹೊಂದಿರುವುದು. ಸಾಮನ್ಯವಾಗಿ ನಮ್ಮ ಶರೀರದ ಮಾಂಸಖಂಡಗಳಿಂದ, ಎಲುಬುಗಳಿಂದ ಅಥವಾ ದೇಹದಲ್ಲಿರುವ ನೀರಿನಿಂದ ಓವರ್ ವೈಟ್ ಬರುವ ಸಾಧ್ಯತೆಗಳಿವೆ.

ಒಬ್ಬ ಮನುಷ್ಯನಿಗೆ ತನ್ನ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಸರಿಯಾಗಿರಬೇಕು. ಒಂದು ವೇಳೆ ಎತ್ತರೆಕ್ಕೆ ಅನುಗುಣವಾಗಿ ನಮ್ಮ ದೇಹ ತೂಕ 10ರಿಂದ 20 ಶೇ. ಹೆಚ್ಚಾಗಿದ್ದರೆ ಅದನ್ನು ಒಬೆಸಿಟಿ ಎಂದು ಕರೆಯಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ.ಅನುರಾಧ ಹೇಳುತ್ತಾರೆ.

ಒಬೆಸಿಟಿಗೆ ಕೆಲವು ಮುಖ್ಯ ಕಾರಣಗಳು:

ಕಾಬ್ರೋಹೈಡ್ರೇಟ್ಸ್ ಹೆಚ್ಚು ಇರುವ ಆಹಾರಗಳನ್ನು ತಿನ್ನುವುದರಿಂದ ಅದು ಕೊಬ್ಬಾಗಿ ಪರಿವರ್ತನೆಗೊಂಡು ನಮ್ಮ ದೇಹದಲ್ಲಿ ಸಂಗ್ರವಾಗುತ್ತದೆ.

ದೇಹಕ್ಕೆ ಯಾವುದೇ ರೀತಿಯ ವ್ಯಾಯಮಗಳಿಲ್ಲದಿರುವುದು ಕೂಡ ಒಬೆಸಿಟಿಗೆ ಕಾರಣವಗಬಹುದು.

ಹಲವರು ಒತ್ತಡದಲ್ಲಿರುವಾಗ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಪದೇ ಪದೇ ಆಹಾರಗಳನ್ನು ಸೇವಿಸುವುದರಿಂದ ಒಬೆಸಿಟಿ ಬರಲು ಮುಖ್ಯ ಕಾರಣವಾಗಬಹುದು.

ಥೈರೋಯಿಡ್, ಪಿಸಿಒಡಿ ಸಮಸ್ಯೆ ಇರುವವರಿಗೆ ಸ್ವಲ್ಪವೇ ಆಹಾರ ತಿಂದರೂ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ.

ಹಲವು ಬಾರಿ ವಂಶಪಾರಂಪರರ್ಯವಾಗಿ ಬರುವಂತಹ ಸಾಧ್ಯತೆಗಳು ಇವೆ.

ಒಬೆಸಿಟಿಯಿಂದ ನಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮುಖ್ಯವಾಗಿ ಡಯಾಬಿಟಿಸ್, ಸ್ಟ್ರೋಕ್, ಹೃದಯ ಸಂಬಂಧಿ ಖಾಯಿಲೆಗಳು, ಹಾಗೂ ಕೆಲವು ತರಹದ ಕ್ಯಾನ್ಸರ್ ಗಳಿಗೆ ಈ ಒಬೆಸಿಟಿ ದಾರಿಮಾಡಿಕೊಡಬಹುದು.

ಆಹಾರಗಳು:

ತುಂಬಾ ವ್ಯಾಯಮ ಮಾಡುವ ದೇಹಗಳಿಗೆ ಹೆಚ್ಚಿನ ಕಾಬ್ರೋಹೈಡ್ರೇಟ್ಸ್ ಸೇವಿಸಿದರೆ ಅದು ಕರಗಿ ಹೋಗುವ ಸಂಭವ ಜಾಸ್ತಿ. ಕುಳಿತು ಕೆಲಸ ಮಾಡುವ ಜನರಿಗೆ ಆದಷ್ಟು ಆಹಾರದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಆಹಾರ ಸೇವಿಸುವುದರಿಂದ ಒಬೆಸಿಟಿ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಕಡಿಮೆ ಕಾಬ್ರೋಹೈಡ್ರೇಟ್ಸ್ ಆಹಾರಗಳನ್ನು ಸೇವಿಸುವುದು ಉತ್ತಮ. ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದು, ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ಸರಿದೂಗಿಸಿಕೊಳ್ಳಬಹುದು.

See also  ಬೆಂಗಳೂರು: ಮೆದುಳು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

25278
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು