ಭೇದಿಯನ್ನು ಎರಡು ರೀತಿಯಾಗಿ ವಿಂಗಡಿಸಬಹುದು ಮೊದಲನೆಯದ್ದು ಇನ್‍ಫೆಕ್ಷನ್‍ನಿಂದಾಗಿ ಭೇದಿ ಪ್ರಾರಂಭವಾಗಿದ್ದಲ್ಲಿ ಜ್ವರರದ ಲಕ್ಷಣಗಳು ಕಂಡುಬರಬಹುದು ಇಂತಹ ಸಂದರ್ಭದಲ್ಲಿ ಆಂಟಿಬಯೋಟಿಕ್ ಜೊತೆಗೆ ಸರಿಯಾದ ಮೆಡಿಸಿನ್ ಬಳಸುವುದು ಉತ್ತಮ. ಎರಡನೆಯದ್ದು ಆಹಾರದ ಅಜೀರ್ಣದಿಂದಾಗಿ ಉಂಟಾಗಿರಬಹುದು ಈ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ.
ಮನೆಯಲ್ಲಿನ ಮನೆ ಮದ್ದುಗಳನ್ನು ಬಳಸಿ ಭೇದಿಯನ್ನು ಕಡಿಮೆಗೊಳಿಸಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ.ಅನುರಾಧ ಹೇಳುತ್ತಾರೆ.
ಭೇದಿ ಪ್ರಾರಂಭವಾದಗ ಅದನ್ನು ಒಮ್ಮೆಗೆ ನಿಲ್ಲಿಸುವಂತೆ ಜೌಷಧಗಳನ್ನು ಬಳಸಬಾರದು. ಒಂದು ವೇಳೆ ದೇಹದಲ್ಲಿ ನಿಶ್ಯಕ್ತಿ ಉಂಟಾದಾಗ ಮಾತ್ರವೇ ಬೇಧಿಯನ್ನು ನಿಲ್ಲಿಸಬಹುದು. ಮುಖ್ಯವಾಗಿ ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ಭೇದಿ ಉಂಟಾದಾಗ ಜಾಗೃತೆ ವಹಿಸಬೇಕಾಗುತ್ತದೆ.
ಭೇದಿ ಪ್ರಾರಂಭವಾದಾಗ ನೀರಿಗೆ ಉಪ್ಪು ಮತ್ತು ಸಕ್ಕರೆ ಬೆರೆಸಿ ಸ್ವಲ್ಪ ಸ್ವಲ್ಪವೇ ಕುಡಿಯಬೇಕು. ಆಹಾರವನ್ನು ಸೇವಿಸುವಾಗ ಹೆಚ್ಚಾಗಿ ಗಂಜಿಯನ್ನು ಸೇವಿಸುವುದು, ಅನ್ನದ ಪ್ರಮಾಣ ಕಡಿಮೆಗೊಳಿಸಿ ಗಂಜಿಯನ್ನು ಸೇವಿಸುವುದು ಒಳ್ಳೆಯದು. ಜೊತೆಗೆ ಬೆಳ್ತಿಗೆ ಅಕ್ಕಿಯನ್ನು ಸ್ವಲ್ಪವೆ ಹುರಿದು ನೀರು ಹಾಕಿ ಅನ್ನದಂತೆ ಬೇಯಿಸಿ ಅದರ ನೀರನ್ನು ಬಾಯಾರಿಕೆಯಾದಾಗ ಕುಡಿಯುವುದು ಹಾಗೂ ಅದೇ ಅನ್ನವನ್ನು ಮಜ್ಜಿಗೆಯ ಜೊತೆ ಸೇವಿಸುವುದು ಬಹಳ ಉಪಕಾರಿ.
ಅರಳಿಗೆ(ಹೊದ್ಲು) ನೀರು ಹಾಕಿ ಅದನ್ನು ಬೇಯಿಸಿ ಅದರ ಗಂಜಿಯನ್ನು ತಿನ್ನುವುದರಿಂದ ಹೊಟ್ಟೆಗೆ ಉತ್ತಮ. ಭೇದಿಯ ಸಮಯದಲ್ಲಿ ದಾಳಿಂಬೆ ಹೊರತು ಪಡಿಸಿ ಬೇರೆ ಯಾವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ.
ಹೆಚ್ಚಾಗಿ ನೀರು ಕುಡಿಯುವುದು ಕೂಡ ಆ ಸಂದರ್ಭದಲ್ಲಿ ಉತ್ತಮವಲ್ಲ. ನೀರನ್ನು ಗಂಜಿಯ ರೂಪದಲ್ಲಿ ಸೇವಿಸಬಹುದು. ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಅದಿಕ್ಕೆ ಜೀರಿಗೆ ಮತ್ತೆ ಕಾಯಿತುರಿ ಸೇರಿಸಿ ರುಬ್ಬಿಕೊಂಡು ಪ್ರಮಾಣಕ್ಕೆ ಸರಿಯಾಗಿ ಮಜ್ಜಿಗೆ ಸೇರಿಸಿ ತಂಬುಳ್ಳಿ ಮಾಡಿ ತಿನ್ನುವುದು ಕೂಡ ಬೇಧಿಗೆ ತುಂಬಾ ಉಪಯುಕ್ತ.
ಭೇದಿಯ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.