ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಅವಶ್ಯಕವಾದ ಒಂದು ಅಂಶ. ಆದರೆ ಅದು ಹೆಚ್ಚಾಗದಂತೆ ನೋಡಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಹೃದಯ ಸಂಬಂಧಿ ಖಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ.
ಮುಖ್ಯವಾಗಿ ನಮ್ಮ ಜೀವನ ಶೈಲಿಯಿಂದ ಹಾಗೂ ನಾವು ತಿನ್ನುವ ಆಹಾರದಿಂದ ಕೊಲೆಸ್ಟ್ರಾಲ್ ಬರುವ ಸಾಧ್ಯತೆಗೆಳಿರುತ್ತವೆ ಎಂದು ಕಾಕುಂಜೆ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ.ಅನುರಾಧಾ ಹೇಳತ್ತಾರೆ.
ಆರೋಗ್ಯಕರ ಪಥ್ಯ ಹಾಗೂ ಪ್ರತಿನಿತ್ಯ ವ್ಯಾಯಾಮದಿಂದ ದೇಹದಲ್ಲಿ ಶೇಖರಣೆಯಾಗುವ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಬಹುದು. ರಕ್ತದ ಪರೀಕ್ಷೆಯ ಮೂಲಕ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ತಿಳಿದುಕೊಳ್ಳಬಹುದು. ಹಾಗೂ ಕೆಲವೊಮ್ಮೆ ಕಿಡ್ನಿ ಸಮಸ್ಯೆ, ಡಯಾಬಿಟಿಕ್ ಸಮಸ್ಯೆ, ಹೈಪೋ ಥೈರಾಯಿಡ್‍ನಿಂದಾಗಿಯೂ ಸಹ ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ.
ಆಹಾರದಲ್ಲಿ ಟ್ರಾನ್ಸ್ ಫ್ಯಾಟ್‍ಗಳು ಹೆಚ್ಚಾಗಿರುವ ಆಹಾರಗಳಾದ ಪ್ಯಾಕೇಜ್ಡ್ ಫುಡ್, ಸ್ನಾಕ್ಸ್, ಎಣ್ಣೆಯಲ್ಲಿಕರಿದ ಆಹಾರಗಳನ್ನು ಸಾದ್ಯವಾದಷ್ಟು ಕಡಿಮೆಗೊಳಿಸಬೇಕು. ಜೊತೆಗೆ ಒಬೆಸಿಟಿ ಇದ್ದಾಗಲೂ ಸಹ ಕೊಲೆಸ್ಟ್ರಾಲ್ ಬರುವ ಸಾಧ್ಯತೆಗಳಿವೆ. ಹೀಗಾಗಿ ನಾವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಸ್ಯಾಚುರೇಟೆಡ್ ಹಾಗೂ ಸಕ್ಕರೆಯ ಅಂಶ ಹೊಂದಿರುವ ಆಹಾರಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು. ಅವುಗಳ ಬದಲಾಗಿ ಹಣ್ಣು, ತರಕಾರಿಗಳ ಜೊತೆಗೆ ಉತ್ತಮ ಫ್ಯಾಟ್ ಹೊಂದಿರುವ ತೆಂಗಿನಎಣ್ಣೆ, ಆಲಿವ್ ಎಣ್ಣೆಯನ್ನು ನಮ್ಮ ದಿನ ನಿತ್ಯದ ಆಡುಗೆಯಲ್ಲಿ ಹಾಗೂ ದಿನಿತ್ಯದ ಆಹಾರದಲ್ಲಿ ಬಳುವುದು ಉತ್ತಮ.
ಇದರ ಜೊತೆಗೆ ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸುವುದರಿಂದಲೂ ಸಹ ನಾವು ಈ ಕೊಲೆಸ್ಟ್ರಾಲ್‍ನಿಂದ ದೂರವಿರಬಹುದು.