News Kannada
Wednesday, October 04 2023
ಆರೋಗ್ಯ

ವೈಟಮಿನ್ ಬಿ 12 ಡಿಫೀಶಿಯನ್‌ಸ್ಸಿ ಸರಿ ಪಡಿಸುವುದು ಹೇಗೆ

How to fix vitamin B12 deficiency
Photo Credit : Pixabay

ಜೀರ್ಣ ಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯದಿದ್ದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀರ್ಣಕ್ರಿಯೆ ನಮ್ಮ ದೇಹದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ.

ಜೀರ್ಣಕ್ರಿಯೆ ಸಮಸ್ಯೆ ಇರುವವರು ವೈಟಮಿನ್ ಬಿ 12 ಅನ್ನು ಪ್ರತ್ಯೇಕವಾಗಿ ಆಹಾರದಲ್ಲಿ ಸೇರಿಸುವುದುದು ನಮ್ಮ ದೇಹಕ್ಕೆ ತುಂಬಾ ಅವಶ್ಯಕ ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ವೈಟಮಿನ್ ಬಿ 12 ಇದು ಹೆಚ್ಚಾಗಿ ಮಾಂಸಹಾರ ಸೇವನೆ ಮಾಡುವ ಜನರಲ್ಲಿ ಹೇರಳವಾಗಿ ಕಂಡು ಬರುತ್ತದೆ. ವೈಟಮಿನ್ ಬಿ 12 ಹೆಚ್ಚಾಗಲು ನಮ್ಮ ದೇಹಕ್ಕೆ ಮಾಂಸಾಹಾರದಿಂದ ಮಾತ್ರವೇ ಸಾಧ್ಯ. ರಕ್ತದ ಕಣ ನಮ್ಮ ದೇಹದಲ್ಲಿ ಕಡಿಮೆ ಇದ್ದಾಗ ವೈಟಮಿನ್ ಬಿ 12 ಆಹಾರದಿಂದ ಅದನ್ನು ಸಾಕಷ್ಟು ಪ್ರಮಾಣದಲ್ಲಿ ನಿವಾರಿಸಬಹುದು. ಅನೀಮೀಯಾ ಇರುವವರು ಹಾಗೂ ಮದ್ಯ ಸೇವನೆ ಮಾಡುವವರು ವೈಟಮಿನ್ ಬಿ 12 ಸೇವಿಸುವುದು ಉತ್ತಮ.

ವೈಟಮಿನ್ ಬಿ 12 ಡಿಫೀಶಿಯನ್‌ಸ್ಸಿ ಲಕ್ಷಣಗಳು

ಕೆಂಪಗಾಗಿರುವ ನಾಲಗೆ ಹಾಗೂ ಬಾಯಲ್ಲಿ ಪದೇ ಪದೇ ಹುಣ್ಣಾಗುವುದು, ನಾಲಗೆ ಊದಿಕೊಳ್ಳುವುದು, ನಾಲಗೆಯಲ್ಲಿ ಉರಿ ಬರುವುದು, ಕಣ್ಣು ಮಂಜಾಗುವುದು, ಸೆಸ್ಸೇಷನ್, ಮೈಕೈ ಊರಿ ಬರುವುದು, ಉಸಿರಾಟದ ತೊಂದರೆ, ಕಾಸ್ಟಿಪೇಶನ್, ಹಸಿವಾಗದಿರುವುದು ವೈಟಮಿನ್ ಬಿ 12 ಡಿಫೀಶಿಯನ್‌ಸ್ಸಿಯ ಸಾಮಾನ್ಯ ಲಕ್ಷಣಗಳಾಗಿವೆ.

ಆಹಾರಗಳು

ಮಾಂಸ, ಚೀಸ್, ಹಾಲಿನ ಉತ್ಪನ್ನಗಳು, ಅನ್ನ ಹಾಗೂ ಮೊಟ್ಟೆಗಳಲ್ಲಿ ಸಾಕಷ್ಟು ಪ್ರಮಾಣದ ವೈಟಮಿನ್ ಬಿ 12 ಇರುವುವುದರಿಂದ ಮಾಂಸಹಾರಿಗಳಿಗೆ ವೈಟಮಿನ್ ಬಿ 12 ಡಿಫೀಶಿಯನ್‌ಸಿ ಬರುವುದು ಬಹಳ ಕಡಿಮೆ ಎಂದರೂ ತಪ್ಪಾಗಲಾರದು. ಸಸ್ಯಹಾರ ಸೇವಿಸುವವರಿಗೆ ಹಾಲಿನ ಉತ್ಪನ್ನಗಳಲ್ಲಿ ಸಿಗುತ್ತದೆ. ವಿಟಮಿನ್ ಬಿ 12 ತೀರಾ ಕಡಿಮೆ ಇದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ಮಾತ್ರೆಗಳ ರೂಪದಲ್ಲಿ ಅಥವಾ ಇಂಜೆಕ್ಷನ್ ಗಳ ರೂಪದಲ್ಲಿ ವೈಟಮಿನ್ ಬಿ 12 ಪಡೆದುಕೊಳ್ಳಬಹುದು.

See also  ಸಜ್ಜನರ ಸಂಗದಿಂದ ಸುಗಮ ಬದುಕು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು