ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯವಾದ ಕ್ಯಾನ್ಸರ್ಗಳಲ್ಲಿ ಒಂದು. ಅನುವಂಶಿಕ ಹಾಗೂ ಡಿಎನ್ಎ ಹಾನಿಯಿಂದಾಗಿ ಹಾಗೂ ಸ್ಥೂಲಕಾಯದಿಂದಾಗಿ ಈ ಕ್ಯನ್ಸರ್ ಉಂಟಾಗಬಹುದು. ನಮ್ಮ ಆರೋಗ್ಯದ ಜೊತೆಗೆ ನಮ್ಮ ಜೀವನ ಶೈಲಿಯೂ ಕೂಡ ನಿರ್ಣಯಕ ಪಾತ್ರವನ್ನು ವಹಿಸುತ್ತದೆ.
ಸಂಶೋಧನೆಯ ಪ್ರಕಾರ ಈಸ್ಟ್ರೋಜನ್ ಮಾನ್ಯತೆ, ಅತಿಯಾದ ಮಧ್ಯಪಾನ ಧೂಮಪಾನ, ಸಂಸ್ಕರಿತ ಆಹಾರಗಳಲ್ಲಿ ಸ್ತನ ಕ್ಯಾನ್ಸರ್ನ ಅಪಾಉ ಹೆಚ್ಚು. ಎನ್ನುತ್ತಾರೆ ಕಾಕುಂಜೆ ಆಯುರ್ವೇದಿಕ್ ವೆಲ್ನೆಸ್ ಕ್ಲಿನಿಕ್ನ ವೈದ್ಯೆ ಡಾ. ಅನುರಾಧ.
ಸ್ತನದ ಕ್ಯಾನ್ಸರ್ ಲಕ್ಷಣಗಳು
ಸ್ತನ ಕ್ಯಾನ್ಸರ್ ಎನ್ನುವುದು ಜೀವಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್ ಆಗಿದೆ.
• ಸ್ತನದಲ್ಲಿ ಗೆಡ್ಡ ಅಥವಾ ಸ್ತನ ದಪ್ಪಗಾಗುವುದು
• ಸ್ತನದ ಗಾತ್ರ ಹಾಗೂ ಆಕಾರದಲ್ಲಿ ಬದಲಾವಣೆ
• ಎದೆಯ ಮೇಲಿನ ಚರ್ಮದಲ್ಲಿ ಬದಲಾವಣೆಗಳು
• ಸ್ತನದ ಚರ್ಮದ ಸುತ್ತಲು ಸಿಪ್ಪೆ ಎಳುವುದು ಇತ್ಯಾದಿ.
ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಕೆಲವು ಆಹಾರಗಳು
ಸ್ತನ ಕ್ಯಾನ್ಸರ್ ಬೆಳವಣಿಗೆಯೊಂದಿಗೆ ಅನೇಕ ಅಂಶಗಳು ಸಂಬಂಧಿಸಿವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮ ಆಹಾರ ಕ್ರಮವನ್ನು ಸುಧಾರಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಇದು ಕೇವಲ ಒಂದು ಭಾಗವಷ್ಟೆ.
• ಎಲೆ ಹಸಿರು ತರಕಾರಿಗಳು ಇವು ಕ್ಯಾನ್ಸರ್ ವಿರೋಧಿ ಲಕ್ಷಣಗಳನ್ನು ಹೊಂದಿದೆ. ಮುಖ್ಯವಾಗಿ ಎಲೆಕೋಸು, ಸ್ಪಿನಿಚ್, ಮಸ್ರ್ಡ್ ಗ್ರೀನ್ ಇತ್ಯದಿಗಳು ಬಿಟಾ ಕ್ಯರೋಟಿನ್ ಲುಟಿನ್ ಸೇರಿದಂತೆ ಕ್ಯಾರೋಟಿನಾಯ್ಡ್ನಂತಹ ಉತ್ತಮ ನಿರೋಧಕಗಳನ್ನು ಹೊಂದಿದ್ದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.
• ಕ್ರೂಸಿಫೆರಸ್ ತರಕಾರಿಗಳಾದ ಎಲೆಕೋಸು, ಹೂಕೋಸು, ಕೋಸು ಗೆಡ್ಡೆ ತರಕಾರಿಗಳು ಸ್ತನ ಕ್ಯಾನ್ಸರ್ ವಿರೋಧಿ ಸಾಮಥ್ಯವನ್ನು ಹೊಂದಿದೆ.
• ಅಲಿಯಮ್ ತರಕಾರಿಗಳಾದ ಬೆಳ್ಳುಳ್ಳಿ, ಈರುಳ್ಳಿ, ಲೀಕ್ಸ್ಗಳು ಬಹಳ ಉತ್ತಮವಾಗಿದೆ.
• ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿಹಣ್ಣುಗಳು, ನಿಂಬೆಹಣ್ಣುಗಳು ಫೋಲೆಟ್, ವಿಟಮಿನ್ ಸಿ ಕ್ಯಾರೊಟೀನ್ ಹಾಗೂ ರೋಗನಿರೋಧಕಗಳನ್ನು ಹೊಂದಿದ್ದು ಸ್ತನ ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತದ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿ.
• ಬೆರಿ ಹಣ್ಣುಗಳು ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
• ಮೀನುಗಳಾದ ಸಾಲ್ಮನ್, ಸಾರ್ಡಿನ್, ಮ್ಯಾಕೆರೆಲ್ ಸೇರಿದಂತೆ ಫ್ಯಾಟ್ಯುಕ್ತ ಮೀನುಗಳಲ್ಲಿ ಒಮೆಗಾ ೩, ಸೆಲೆನಿಯಮ್, ಉತೃಷ್ಟಮಟ್ಟದ ರೊಗನಿರೋಧಕಗಳು ಇವೆ.
• ಧಾನ್ಯಗಳಾದ ಅಕ್ಕಿ, ಬಾರ್ಲಿ ಕಿನೋವಾ, ಕಂದು ಅಕ್ಕಿಗಳಂತಹ ಧಾನ್ಯಗಳಲ್ಲಿ ಫೈಬರ್, ಖನಿಜ ಒಳಗೊಂಡಿದೆ.