ಈಗಿನ ಸಾಮಾನ್ಯ ಜರಲ್ಲಿ ಕಂಡು ಬರುವ ನೋವುಗಳಲ್ಲಿ ಈ ಮೊಣಕಾಲಿನ ನೋವು ಮೊದನೇ ಸ್ಥಾನದಲ್ಲಿದೆ. ಅದರಲ್ಲೂ ಮುಖ್ಯವಾಗಿ ೪೦ರಿಂದ ೪೫ ವರ್ಷ ದಾಟಿದವರಲ್ಲಿ ಇದು ಸರ್ವೇಸಾಮಾನ್ಯವಾಗದೆ. ಈ ಮೊಣಕಾಲಿನ ಸಮಸ್ಯೆಗಳು ಕೆಲವೊಮ್ಮೆ ಗಾಯದಿಂದಾಗಿ ಉಂಟಾಗಬಹುದು, ಅಥವಾ ನಾವು ಸೇವಿಸುವ ಆಹಾರದಲ್ಲಿ ನಮ್ಮ ದೇಹ ಹಾಗೂ ಮೂಳೆಗಳಿಗೆ ಬೇಕಾದ ಪೋಶಕಾಂಶಗಳು ಸಿಗದಿದ್ದಾಗ ಮೊಣಕಾಲು ನೋವಿನ ಸಮಸ್ಯೆಗಳು ಕಾಣಿಸಬಹುದು.
ಅನೇಕ ವಿಧದ ಮೊಣಕಾಲು ನೋವುಗಳನ್ನು ಹಲವು ವಿಧವಾಗಿ ಗುಣಪಡಿಸಬಹುದು. ಕೆಲವೊಎ ಸ್ವಯಂ ಆರೈಕೆಯಿಂದ ಗುಣಪಡಿಸಿಕೊಂಡರೆ, ನಾವು ಸೇವಿಸುವ ಆಹಾರಗಳನ್ನು ಉತ್ತಮ ಪಡಿಸಿಕೊಂಡರೂ ಸಹ ಮೊಣಕಾಲು ನೋವನ್ನು ತಡೆಗಟ್ಟಬಹುದು. ಹಾಗೂ ಶಸ್ತçಚಿಕಿತ್ಸೆಯ ಮೂಲಕವು ಮೊಣಕಾಲು ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್ನೆಸ್ ಕ್ಲಿನಿಕ್ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.
ಮೊಣಕಾಲು ನೋವಿನ ಲಕ್ಷಣಗಳು:
ಮೊಣಕಾಲಿನ ನೋವುಗಳನ್ನು ಕೇವಲ ನೋವುನಿದ ಮಾತ್ರವೇ ಗುರುತಿಸುತ್ತವೆ ಅದು ನಮಗೆ ಕಾಣುವುದಿಲ್ಲ. ಆದರೆ ಇನ್ನೂ ಕೆಲವು ಪ್ರಕರಣಗಳಲ್ಲಿ ಈ ಕೆಳಗಿನ ರೋಗ ಲಕ್ಷಣಗಳೂ ಸೇರಿವೆ.
• ಮೊಣಕಾಲಿನಲ್ಲಿ ಊತ ಮತ್ತು ಬಿಗಿತ
• ನೋವಿನ ಸ್ಥಳ ಕೆಂಪು ಮತ್ತು ಬಿಸಿಯಾಗಿರುವುದು
• ದೌರ್ಬಲ್ಯ ಅಥವಾ ಅಸ್ಥಿರತೆ
• ಮೊಣಕಾಲು ಸಂಪೂರ್ಣ ನೇರಗೊಳಿಸಲು ಸಾಧ್ಯವಾಗದಿರುವುದು ಇತ್ಯಾದಿ.
ಕಾರಣಗಳು:
ಮೊಣಕಾಲು ನೋವು ಗಾಯಗಳು, ಸಂಧಿವಾತ, ಹಾಗೂ ಇತರ ಸಮಸ್ಯೆಗಳಿಂದ ಉಂಟಾಗಬಹುದು. ಇನ್ನು ಸಾಮಾನ್ಯವಾಗಿ ಕೆಲವು ಕಾರಣಗಳು ಮೊಣಕಾಲಿನ ಸಮಸ್ಯೆಯನ್ನು ಸೃಷ್ಟಿಸುತ್ತವೆ ಅವುಗಳೆಂದರೆ
• ಅಧಿಕ ತೂಕ: ಅಧಿಕ ತೂಕ ಅಥವಾ ಬೊಜ್ಜು ಮೊಣಕಾಲಿನ ಮೇಲೆ ತೂಕವನ್ನು ಹೆಚ್ಚಿಸುತ್ತದೆ. ಸಾಮಾನ್ಯ ಚಟುವಟಿಕೆಗಳಾದ ವಾಕಿಂಗ್ ಮೆಟ್ಟಿಲು ಹತ್ತುವುದು ಇಳಿಯುವುದು ಇತ್ಯಾದಿಗಳಿಂದ ಮೊಣಾಲಿನ ಮೇಲೆ ಒತ್ತಡ ಹೆಚ್ಚಾಗುತ್ತದೆ.
• ಸ್ನಾಯುವಿನ ನಮ್ಯತೆ: ಸ್ನಾಯುವಿನ ನಮ್ಯತೆಯು ಮೊಣಕಾಲುಗಳ ನೋವಿನ ಅಪಾಯವನ್ನು ಹೆಚ್ಚಿಸುತ್ತದೆ.
• ಕೆಲವು ಕ್ರೀಡೆ ಮತ್ತು ಕೆಲಸ: ನಾವು ಮಾಡುವ ಕೆಲಸಗಳು ಅಥವಾ ಕ್ರೀಡೆಯಿಂದಾಗಿ ಮೊಣಕಾಲಿನ ನೋವು ಪ್ರಾರಂಭವಾಗಬಹುದು. ಉದಾಹರಣೆಗೆ: ಬಾಸ್ಕೆಟ್ಬಾಲ್, ಜಿಗಿತಗಳು, ಅಥವಾ ನಿಂತು ಮಾಡುವ ಕೆಲಸಗಳು ಇದರ ಅಪಾಯವನ್ನು ಹೆಚ್ಚಿಸುತ್ತದೆ.
• ಹಿಂದಿನ ಗಾಯ: ಹಿಂದಿನ ಮೊಣಾಲಿನ ಗಾಯವಿದ್ದರೆ ಮತ್ತೆ ಮೊಣಕಾಲಿನ ನೋವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.
ಉತ್ತಮ ಆಹಾರಗಳು
ಮೊಣಕಾಲಿನ ನೋವು ಕಡಿಮೆ ಮಾಡಲು ಕೆಲವು ಆಹಾರಗಳು:
• ಹಸಿರು ಸೊಪ್ಪು ಮತ್ತು ತರಕಾರಿಗಳು: ಎಲೆ ತರಕಾರಿಗಳನ್ನು ತಿನ್ನುವುದರಿಂದ ದೇಹದಲ್ಲಿ ಊತ ಕಡಿಮೆಗೊಳಿಸಲು ಸಹಕಾರಿಯಾಗುತ್ತದೆ. ಈ ಕಾರಣದಿಂದಾಗಿ ನಮ್ಮ ದೈನಂದಿನ ಆಹಾರದಲ್ಲಿ ಈ ತರಕಾರಿಗಳನ್ನು ಬಳಸಿದರೆ ಉತ್ತಮ.
• ಡ್ರೈ ಫ್ರೂಟ್ಸ್ : ದೇಹಕ್ಕೆ ವಿಟಮಿನ್ ಮತ್ತು ಪ್ರೋಟಿನ್ಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದರಿಂದ ಇದು ಮೂಳೆಗಳನ್ನು ಬಲಪಡಿಸುತ್ತದೆ.
• ಹಣ್ಣುಗಳು: ಮುಖ್ಯವಾಗಿ ಕಿತ್ತಳೆ, ಸ್ಟ್ರಾಬೆರಿ , ಚೆರಿ, ಹಣ್ಣುಗಳು ವಿಟಮಿನ್ ಸಿ, ಲೈಕೋಪಿನ್ ಪೋಶಕಾಂಶಗಳಿವೆ.
• ಹಾಲು: ಕ್ಯಾಲಿಯಂ ಹೇರಳವಾಗಿರುವುದರಿಂದ ಮೂಳೆಗಳ ಬಲಕ್ಕೆ ತುಂಬಾ ಉತ್ತಮವಾಗಿದೆ.