News Kannada
Wednesday, October 04 2023
ಆರೋಗ್ಯ

ತಲೆನೋವು ಕಡಿಮೆ ಮಾಡುವ ಕೆಲವು ಆಹಾರ ಕ್ರಮಗಳು

Some diets that can reduce headaches
Photo Credit : Pixabay

ತಲೆನೋವು ಮನುಷ್ಯನ ಜೀವನದಲ್ಲಿ ಹಲವು ಬಾರಿ ಅನುಭವಿಸಿರುವ ಒಂದು ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ತಲೆನೋವು ಹಲವು ಕಾರಣಗಳಿಂದ ಉಂಟಾಗಬಹುದು ಸಾಮಾನ್ಯವಾಗಿ ಒತ್ತಡ, ಶೀತದಿಂದಾಗಿ, ಅಥವಾ ಗಾಳಿಗೆ ಮುಖವೊಡ್ಡುವುದರಿಂದ ಹಾಗೂ ಇನ್ನಿತರ ಸಮಸ್ಯೆಗಳಿಂದ ಉಂಟಾಗಬಹುದು ಎಂದು ಕಾಕುಂಜೆ ವೆಲ್ ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ತಲೆನೋವಿನ ವಿಧಗಳು

ಸಾಮಾನ್ಯವಾಗಿ ೧೫೦ಕ್ಕೂ ಹೆಚ್ಚು ವಿಧದ ತಲೆನೋವುಗಳಿವೆ. ಆದರೆ ಅವುಗಳಲ್ಲಿ ಮುಖ್ಯವಾಗಿ ಪ್ರಾಥಮಿಕ ಮತ್ತು ದ್ವೀತಿಯಕ ತಲೆನೋವು ಎಂದು ವಿಂಗಡಿಸಬಹುದು.

• ಪ್ರಾಥಮಿಕ ತಲೆನೋವು
ನಮ್ಮ ತಲೆಯಲ್ಲಿ ಅತಿಯಾದ ಚಟುವಟಿಕೆಯಿಂದ ಪ್ರಾಥಮಿಕ ತಲೆನೋವು ಉಂಟಾಗಬಹುದು. ಆದರೆ ಇವು ವೈದ್ಯಕೀಯ ಚಿಕಿತ್ಸೆಗೆ ಒಗ್ಗಿಕೊಳ್ಳುವ ತಲೆನೋವು ಅಲ್ಲ ಸಣ್ಣ ಮಟ್ಟದ ಮನೆಮದ್ದಿನಿಂದಲೂ ಗುಣಮುಖವಾಗಬಹುದು.

ಪ್ರಾಥಮಿಕ ತಲೆನೋವಿನ ಕೆಲವು ವಿಧಗಳು ಹೀಗಿವೆ:

• ಒತ್ತಡದ ತಲೆನೋವು
• ಮದ್ಯಪಾನ ಸೇವನೆಯಿಂದ ಉಂಟಾಗುವ ತಲೆನೋವು
• ಸಂಸ್ಕರಿಸಿದ ಆಹಾರದಿಂದ
• ನಿಕೋಟಿನ್ ಸೇವನೆಯಿಂದ
• ನಿದ್ರೆ ಕೊರತೆ ಅಥವಾ ನಿದ್ರೆಯಲ್ಲಿ ಬದಲಾವಣೆ
• ದೈಹಿಕ ಚಟುವಟಿಕೆಯ ಕೊರತೆ
• ಹಸಿವಿನಿಂದಾಗಿ ತಲೆನೋವು
• ಕೆಮ್ಮುವಾಗ, ಸೀನುವಾಗ ಉಂಟಾಗುವ ತಲೆನೋವು ಇತ್ಯಾದಿ
ಈ ಪ್ರಾಥಮಿಕ ತಲೆನೋವು ಅಪಾಯಕಾರಿಯಲ್ಲ. ಆದರು ಅವು ತುಂಬಾ ನೋವಿನಿಂದ ಕೂಡಿರುತ್ತದೆ ಹಾಗೂ ನಮ್ಮ ದಿನನಿತ್ಯದ ಜೀವನ ಶೈಲಿಗೆ ಅಡ್ಡಿಪಡಿಸುತ್ತದೆ.

ದ್ವಿತೀಯಕ ತಲೆನೋವು

ಈ ರೀತಿಯ ತಲೆನೋವು ಅಪಾಯಕಾರಿಯಲ್ಲ ಇದಕ್ಕೆ ಆಧಾರವಾಗಿ ಚಿಕಿತ್ಸೆ ನೀಡಿ ತಲೆನೋವು ಪರಿಹಾರ ಮಾಡಿಕೊಳ್ಳಬಹುದು.

ದ್ವಿತೀಯಕ ತಲೆನೋವಿನ ಕೆಲವು ವಿಧಗಳು ಹೀಗಿವೆ:

• ನಿರ್ಜಲೀಕರಣ
• ಸೈನಸ್
• ಅತಿಯಾದ ಔಷಧೀಯ ಬಳಕೆ ಇತ್ಯದಿ.
ತಲೆನೋವನ್ನು ಕಡಿಮೆ ಮಾಡುವುದು ಹೇಗೆ
• ತಲೆಗೆ ಬಿಸಿ ಅಥವಾ ತಣ್ಣನೆಯ ನೀರಿನ ಬ್ಯಾಗ್ ಇಡಿ ಅಥವಾ ಶಾಖನೀಡಿ
•  ವ್ಯಾಯಾಮ ಮಾಡಿ
• ತಲೆ, ಕುತ್ತಿಗೆ ಅಥವಾ ಬೆನ್ನಿಗೆ ಮಸಾಜ್ ನೀಡುವುದು
• ನಿಶಬ್ದ ಕೋಣೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು
• ಅಥವಾ ಒಂದು ವಾಕ್ ಹೋಗುವುದು

ಆಹಾರ ಕ್ರಮಗಳು

• ಸೊಪ್ಪು ತರಕಾರಿಗಳು ತಲೆನೋವು ನಿವಾರಣೆಗೆ ಬಹಳ ಉಪಯುಕ್ತ. ಇವುಗಳಲ್ಲಿ ಮೆಗ್ನೇಸಿಯಮ್ ಅಂಶ ಹೊಂದಿರುವುದರಿದ ಇವು ತಲೆನೋವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
• ಡ್ರೈ ಫ್ರೂಟ್ಸ್ ಗಳಾದ ಬಾದಾಮಿ, ವಾಲ್‌ನಟ್ಸ್, ಗೋಡಂಬಿ ಬೀಜಗಳು ತಲೆನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
• ಮೀನುಗಳಲ್ಲಿ ಒಮೆಗಾ ೩ಇರುವುದಿಂದ ಅವು ಉರಿಯೂತದ ಅಂಶವನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ ಸಾಲ್ಮನ್ ಕಾಡ್, ಮ್ಯಾಕೆರಲ್ ಇತ್ಯಾದಿ
• ಹಣ್ಣುಗಳಲ್ಲಿ ಕೆಲವು ಪೊಟ್ಯಾಸಿಯಂ, ಮತ್ತು ಮೆಗ್ನೇಸಿಯಂ ಹೊಂದಿರುವುದರಿದ ಆರೋಗ್ಯಕರ ನರಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಮುಖ್ಯವಾಗಿ ಅವಕಾಡೋ, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಅಂಜೂರ, ರಾಸ್‌ಬೆರಿ, ಹಲಸಿನಹಣ್ಣು, ಇತ್ಯದಿ.
• ಬೀಜಗಳು ಉರಿಯೂತದ ವಿರುದ್ದ ಹೋರಾಡುವ ಒಮೆಗಾ೩ ಅಂಶ ಹಾಗೂ ಮೆಗ್ನೇಸಿಯಂ ಹೊಂದಿದ್ದು ಸಂಕುಚಿತಗೊಡ ರಕ್ತನಾಳಗಳ ಸೆಳೆಯವನ್ನು ಕಡಿಮೆಗೊಳಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ ಗಸಗಸೆ ಬೀಜ, ಎಳ್ಳು, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಚಿಯಾ ಬೀಜ ಇತ್ಯಾದಿ.

See also  ಬೆಳ್ತಂಗಡಿ: ಜಿಲ್ಲಾ ಮಟ್ಟದ ನಾಕೌಟ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ "ವಿಪ್ರ ಕಪ್ -2022"
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು