ಕುತ್ತಿಗೆ ನೋವು ಸಾಮಾನ್ಯವಾಗಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೆ ಇರುವುದರಿಂದ ಅಥವಾ ಹೆಚ್ಚಾಗಿ ಕಂಪ್ಯೂಟರ್ ಪರದೆಯ ಮೇಲೆ ನೋಡಿ ಕೆಲಸ ಮಾಡುವುದರಿಂದ ಉಂಟಾಗಬಹುದು. ವಿರಳವಾಗಿ ಕುತ್ತಿಗೆ ನೋವು ಗಂಭೀರ ಸಮಸ್ಯೆಯ ಲಕ್ಷಣವಾಗಿ ಕಂಡುಕೊಳ್ಳಬಹುದು.
ಕುತ್ತಿಗೆಯು ತಲೆಯ ತೂಕವನ್ನು ಬೆಂಬಲಿಸುವುದರಿಂದ ಕುತ್ತಿಗೆಯ ಚಲನೆಯನ್ನು ನಿರ್ಬಂಧಿಸುವ ಅಪಾಯವನ್ನು ಹೊಂದಿರಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್ನೆಸ್ ಕ್ಲಿನಿಕ್ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.
ಕುತ್ತಿಗೆ ನೋವಿಗೆ ಕಾರಣಗಳು
• ಸ್ನಾಯು ಸೆಳೆತ : ಕಂಪ್ಯೂಟರ್ ಅಥವಾ ಫೋನ್ ಅನ್ನು ಹಲವಾರು ಗಂಟೆಗಳ ಕಾಲ ಬಳಸುವುದರಿಂದ ಸಾಮಾನ್ಯವಾಗಿ ಸ್ನಾಯುವಿನ ಒತ್ತಡವನ್ನು ಪ್ರಚೋದಿಸುತ್ತದೆ.
• ನರ ಸಂಕುಚಿತಗೊಳ್ಳುವುದು : ಕತ್ತಿನ ಹರ್ನಿಯೇಟೆಡ್ ಡಿಸ್ಕ್ ಅಥವಾ ಮೂಳೆ ಬೆನ್ನುಹುರಿಯಿಂದ ಕವಲೊಡೆಯುವ ನರಗಳ ಮೇಲೆ ಒತ್ತಡ ಬೀರಬಹುದು.
• ಗಾಯಗಳು : ತಲೆಯ ಹಿಂಬದಿಯ ಗಾಯಗಳು ಸಾಮಾನ್ಯವಾಗಿ ಕತ್ತಿಗೆ ನೋವಿಗೆ ಮೂಲವಾಗಿರಬಹುದು.
• ರೋಗಗಳು : ರುಮಟಾಯ್ಡ್ ಸಂಧಿವಾತ, ಕ್ಯಾನ್ಸ್ರ್ ನಂತಹ ಕೆಲವು ರೋಗಗಳು ಕುತ್ತಿಗೆ ನೋವನ್ನು ಉಂಟು ಮಾಡಬಹುದು.
ರೋಗ ಲಕ್ಷಣಗಳು
• ಕುತ್ತಿಗೆಯನ್ನು ಚಲನೆ ಮಾಡುವಾಗ ಅಥವಾ ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ ತಲೆಯನ್ನು ಒಂದೇ ಸ್ಥಳದಲ್ಲಿ ತುಂಬಾ ಸಮಯದ ವರೆಗೆ ಹಿಡಿದಿಟ್ಟು ಕೆಲಸ ಮಾಡುವುದರಿಂದ ಕುತ್ತಿಗೆ ನೋವು ಉಲ್ಬಣಿಸಬಹುದು.
• ಸ್ನಾಯುಗಳ ಬಿಗಿತ ಮತ್ತು ಸೆಳೆತದಿಂದಾಗಿ
• ತಲೆನೋವಿನಿಂದಾಗಿ
ಪರಿಹಾರ
• ಉತ್ತಮ ಭಂಗಿಯನ್ನು ಬಳಸಿ : ನಿಲ್ಲುವಾಗ ಮತ್ತು ಕುಳಿತಿರುವಾಗ ಸರಿಯಾದ ಭಂಗಿಯನ್ನು ಬಳಸಿ. ಕಂಪ್ಯೂಟರ್, ಮೊಬೈಲ್ ಬಳಸುವಾಗ ನಿಮ್ಮ ತಲೆಯನ್ನು ಮೇಲಕ್ಕೆ ಇರಿಸಿ.
• ಆಗಾಗ್ಗೆ ವಿರಾಮ ತೆಗೆದುಕೊಳ್ಳಿ : ದೀರ್ಘಕಾಲ ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಿದ್ದರೆ ಕತ್ತನ್ನು ತಿರುಗಿಸುತ್ತಿರಿ. ಭುಜಗಳನ್ನು ಹಿಗ್ಗಿಸಿ.
• ಧೂಮಪಾನ ಮಾಡುವುದನ್ನು ನಿಲ್ಲಿಸಿ : ಇದು ಕುತ್ತಿಗೆ ನೋವಿನ ಅಪಾಯವನ್ನು ಹೆಚ್ಚಿಸುತ್ತದೆ.
• ಭುಜದ ಮೇಲೆ ಭಾರ ಹಾಕುವುದನ್ನು ತಪ್ಪಿಸಿ
• ಸರಿಯಾದ ಭಂಗಿಯಲ್ಲಿ ಮಲಗಿ
• ಬಿಸಿನೀರಿನ ಅಥವಾ ತಣ್ಣಿರೀನ ಶಾಖ ನೀಡುವುದು
• ಕುತ್ತಿಗೆ ನೋವಿನ ಭಾಗದಲ್ಲಿ ಮಸಾಜ್ ಮಾಡುವುದು.
• ವ್ಯಾಯಾಮ ಮಾಡುವುದು
ಆಹಾರ ಕ್ರಮಗಳು
ಯಾವುದೇ ಆಹಾರವು ತ್ವರಿತ ಪರಿಹಾರವನ್ನು ನೀಡುವುದಿಲ್ಲವಾದರೂ ಉತ್ತಮ ಪೋಷಣೆಯನ್ನು ನೀಡಿ ನೋವಿನ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ.
ಒಮೆಗಾ3 ನೊಂದಿಗೆ ಹಣ್ಣು ತರಕಾರಿ ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳನ್ನು ತಿನ್ನುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.
• ಪಾಲಕ್, ಹಸಿರು ಎಲೆಗಳು, ಕೇಲ್, ವಾಲ್ ನಟ್ಸ್, ಬಾದಾಮಿ, ಸಾಲ್ಮನ್, ಟೂನ ಮೀನುಗಳು, ಕಲ್ಲಂಗಡಿ ದಾಳಿಂಬೆ, ಚೆರಿ, ಮುಂತಾದ ಆಹಾರಗಳು ಉತ್ತಮ.
• ದೇಹದಲ್ಲಿ ಉರಿಯೂತ ಉಂಟುಮಾಡುವ ಆಹಾರಗಳನ್ನು ಸೇವಿಸಲೇ ಬಾರದು ಮುಖ್ಯವಾಗಿ ಸಕ್ಕರೆ, ಪಾನೀಯ, ಮಧ್ಯಪಾನ, ಸಂಸ್ಕರಿಸಿದ ಮಾಂಸ, ಕೆಂಪು ಮಾಂಸಗಳು ಉರಿಯೂತಕ್ಕೆ ಹಾನಿಕಾರಕ.