ಹೊಸದಿಲ್ಲಿ: ಟೈಪ್ 2 ಡಯಾಬಿಟಿಸ್ ಹೊಂದಿರುವ ವ್ಯಕ್ತಿಯ ಮೂತ್ರಪಿಂಡದ ಕಾಯಿಲೆ ಪರೀಕ್ಷೆಗೆ ಸಂಶೋಧಕರ ತಂಡ ಕೃತಕ ಬುದ್ದಿಮತ್ತೆ ಆಧಾರಿತ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಹಾಂಗ್ಕಾಂಗ್ನ ಚೀನೀ ವಿಶ್ವವಿದ್ಯಾಲಯದ ಅಧ್ಯಯನವು ಟೈಪ್ 2 ಮಧುಮೇಹ ಹೊಂದಿರುವ ಜನರಲ್ಲಿ ಮೂತ್ರಪಿಂಡದ ಕಾಯಿಲೆಯನ್ನು ತಡೆಗಟ್ಟಲು ಕೃತಿಕ ಬುದ್ದಿಮತ್ತೆ ವಿಧಾನ ಬಳಕೆ ಮಾಡಿದೆ.
“ನಮ್ಮ ತಂಡವು ಕ್ಲಿನಿಕಲ್ ಡೇಟಾವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಕಿಡ್ನಿ ಕಾಯಿಲೆ ತಡೆಗೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ನೆರವಾಗಲಿದೆ ಎಂದು ಸ್ಯಾನ್ಫೋರ್ಡ್ನ ಬಯೋಇನ್ಫರ್ಮ್ಯಾಟಿಕ್ಸ್ನ ಪ್ರಾಧ್ಯಾಪಕ ಮತ್ತು ನಿರ್ದೇಶಕ ಕೆವಿನ್ ಯಿಪ್ ಹೇಳಿದ್ದಾರೆ.