ನವದೆಹಲಿ: ಕೋವಿಡ್ ನ ಹೊಸ ತಳಿ EG.5 ಪತ್ತೆಯಾಗಿರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ (WHO) ಈಗ Omicron BA.2.86 ನ ಮತ್ತೊಂದು ಉಪ-ವೇರಿಯಂಟ್ ಉತ್ಪತ್ತಿ ಕುರಿತು ಹೇಳಿದೆ.
ಇದಕ್ಕೆ BA.X ಎಂದು ಹೆಸರಿಸಿದೆ. ಮೊದಲು ಇಸ್ರೇಲ್‌ನಲ್ಲಿ ಈ ತಳಿ ಕಂಡುಬಂದಿದ್ದು. ಇದುವರೆಗೆ ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಲ್ಲದೆ ಈ ತಳಿಯ ರೋಗ ಹರಡುವಿಕೆ ಶಕ್ತಿ, ತೀವ್ರತೆ ಮೇಲೆ ತೀವ್ರ ನಿಗಾವಹಿಸುವಂತೆ ಸೂಚಿಸಿದೆ. BA.2.86 ಕೋವಿಡ್ ಪ್ರಕರಣಗಳು ಇಂಗ್ಲೆಂಡ್ ನಲ್ಲಿಯೂ ಪತ್ತೆಯಾಗಿದೆ ಎಂದು ವಿಶ್ವಸಂಸ್ಥೆ ಲಸಿಕೆ ಸುರಕ್ಷತಾ ಸಮಿತಿ ಸದಸ್ಯ ಡಾ. ವಿಪಿನ್ ಎಂ. ವಶಿಷ್ಠ ತಿಳಿಸಿದ್ದಾರೆ.