ರಾಂಚಿ: ಜಾರ್ಖಂಡ್ನ ರಾಂಚಿಯ ರಿಮ್ಸ್ನಲ್ಲಿ 27 ವರ್ಷದ ಮಹಿಳೆ ಐದು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ಜಾರ್ಖಂಡ್ನ ಛತ್ರದ ಇತ್ಖೋರಿ ಬ್ಲಾಕ್ನ ನಿವಾಸಿ ಅನಿತಾ ಸೋಮವಾರ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ.
ಶಿಶುಗಳ ತಂದೆ ಪ್ರಕಾಶ್ ಸೌ ಮಾತನಾಡಿ ಆಸ್ಪತ್ರೆಯಲ್ಲಿ ಈ ಹಿಂದೆ ಆಕೆಯನ್ನು ಸ್ಥಳೀಯ ಚಿಕಿತ್ಸೆಗಾಗಿ ದಾಖಲಿಸಿದ್ದು, ಬಳಿಕ ಹೆರಿಗೆಗಾಗಿ ರಿಮ್ಸ್ಗೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಮಹಿಳೆ ಏಳು ತಿಂಗಳೊಳಗೆ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ ಆರೋಗ್ಯವಾಗಿದ್ದಾರೆ. ಆದರೆ, ಶಿಶುಗಳು ಅವಧಿಪೂರ್ವ ಮತ್ತು ಕಡಿಮೆ ತೂಕದಿಂದ ಕೂಡಿವೆ. ಹೀಗಾಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.