News Kannada
Friday, September 29 2023
ಆರೋಗ್ಯ

ಕರ್ನಾಟಕ ಸೇರಿ ದ.ಭಾರತದಲ್ಲಿ ಹೆಚ್ಚಾಗಿದೆ ಬಂಜೆತನ: ಕಾರಣ ತಿಳಿಸಿದ ವರದಿ

infertility rates
Photo Credit : Freepik

ಬಂಜೆತನ ಅನ್ನೋದು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಕಾಡುವ ಸಮಸ್ಯೆ. ಮಹಿಳೆಯರು ಮಾತ್ರವಲ್ಲದೇ ಪುರುಷರಲ್ಲಿಯೂ ಸಂತಾನಹೀನತೆ ಕಂಡುಬರುತ್ತದೆ. ಹೀಗಾಗಿ ಬಂಜೆತನಕ್ಕೆ ಮಹಿಳೆಯರನ್ನು ಮಾತ್ರ ಹೊಣೆಯಾಗಿಸದೇ ಪರಸ್ಪರ ಅರ್ಥ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.

ವಯಸ್ಸಾಗುತ್ತಾ ಹೋದಂತೆ ಮಹಿಳೆಯರ ಅಂಡಾಶಯದಲ್ಲಿ ಮೊಟ್ಟೆಯ ಉತ್ಪತ್ತಿ ಕಡಿಮೆಯಾಗುತ್ತಾ ಹೋಗುವುದರಿಂದ ಫಲವತ್ತತೆ ಕುಂದುತ್ತದೆ. ಜೊತೆಗೆ ಉತ್ತಮ ಆರೋಗ್ಯದಿಂದಿರಲು ಮನುಷ್ಯನ ಎತ್ತರದಷ್ಟೇ ತೂಕ ಇರಬೇಕಾಗಿರೋದು ಕೂಡ ಅವಶ್ಯಕ. ಮಿತಿ ಮೀರಿದ ದೇಹದ ತೂಕ ಹೆಚ್ಚಳದಿಂದ ಬಂಜೆತನಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ಮಿತಿ ಮೀರಿದ ದೇಹದ ತೂಕ ಹೆಚ್ಚಳ, ಜಂಕ್‌ಫುಡ್‌ಗಳನ್ನು ಅತೀ ಹೆಚ್ಚು ತಿನ್ನೋದು, ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ಇರೋದು, ಬಂಜೆತನ ಅನುವಂಶೀಯ ಕಾರಣಕ್ಕೂ ಬರುವ ಸಾಧ್ಯತೆ ಇದೆ, ಥೈರಾಯಿಡ್‌ ಸಮಸ್ಯೆ ಇದ್ದರೆ  ಬಂಜೆತನ ಸಮಸ್ಯೆ ಎದುರಾಗುತ್ತದೆ.

ಕೇರಳ, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಗಿಂತ ಹೆಚ್ಚಿನ ಬಂಜೆತನದ ಪ್ರಮಾಣವನ್ನು ಹೊಂದಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಮದುವೆಯ ವಯಸ್ಸು ಮತ್ತು ಜೀವನಶೈಲಿಯ ಅಂಶಗಳು ಬಂಜೆತನಕ್ಕೆ ಕಾರಣವಾಗುತ್ತಿದೆ.

ಬಂಜೆತನದ ಪ್ರಮಾಣ ಹೆಚ್ಚುತ್ತಿರುವ ಇತರ ರಾಜ್ಯಗಳೆಂದರೆ ಗೋವಾ, ದೆಹಲಿ, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ಎಂದು PLOS ONE ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬಂಜೆತನ ಹೆಚ್ಚಾಗಿದೆ. ಮಹಿಳೆಯರು ಹೆಚ್ಚು ಮಾನಸಿಕ, ಕೌಟುಂಬಿಕ ಮತ್ತು ಸಮುದಾಯದ ಒತ್ತಡವನ್ನು ಎದುರಿಸುವುದರಿಂದ ಅವರಲ್ಲಿ ಸಂತಾನೋತ್ಪತ್ತಿಯ ಕೊರತೆ ಹೆಚ್ಚು ಎಂದು ತಿಳಿಸಿದೆ.

ಭಾರತದ ಜನಗಣತಿಯ ಪ್ರಕಾರ, ಭಾರತದಲ್ಲಿ 1981ರಲ್ಲಿ ಬಂಜೆತನದ ಪ್ರಮಾಣ ಶೇ. 13ರಷ್ಟು ಇದ್ದುದು 2001ರಲ್ಲಿ ಶೇ. 16ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. 1998-99 ಮತ್ತು 2005-06ರ ನಡುವೆ ಬಂಜೆತನದ ಪ್ರಮಾಣವು ಕುಸಿದಿರುವುದನ್ನು ಗಮನಿಸಲಾಗಿದೆ.

ಭಾರತದ ಮತ್ತೊಂದು ಅಧ್ಯಯನವು ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಸುಮಾರು ಶೇ. 8ರಷ್ಟು ಮಹಿಳೆಯರು ಪ್ರಾಥಮಿಕ ಮತ್ತು ಮಾಧ್ಯಮಿಕ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ಕಂಡು ಹಿಡಿದಿದೆ.

ವಿಶ್ವಾದ್ಯಂತ ಸುಮಾರು ಶೇ. 8ರಿಂದ 12ರಷ್ಟು ದಂಪತಿಗಳು ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

See also  ವಾಯುಭಾರ ಕುಸಿತ ಪರಿಣಾಮ ಮೂರು ದಿನ ಮಳೆ ಸಾಧ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು