News Karnataka Kannada
Friday, March 29 2024
Cricket
ಆರೋಗ್ಯ

ಡೆಂಗ್ಯೂ ರೋಗದಿಂದ ಮುಕ್ತರಾಗಲು ಏನು ಮಾಡಬೇಕು?

What needs to be done to get rid of dengue disease?
Photo Credit : By Author

ಮೈಸೂರು: ಡೆಂಗ್ಯೂ ರೋಗದಿಂದ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡೆಂಗ್ಯೂ ದಿನವನ್ನು ಜಾರಿಗೆ ತರಲಾಗಿದ್ದು, ಪ್ರತಿ ವರ್ಷವೂ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಡೆಂಗ್ಯೂ ಈಡೀಸ್ ಈಜಿಪ್ಟಿ ಎಂಬ ಸೊಳ್ಳೆಯ ಮೂಲಕ ಹರಡುತ್ತದೆ. ಡೆಂಗ್ಯೂ ಸೋಂಕಿತ ನಾಲ್ಕು ಜನರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಅಂತವರಿಗೆ ಲಕ್ಷಣಗಳು ತೀವ್ರ ಅಥವಾ ಸೌಮ್ಯವಾಗಿ ಕಾಡಬಹುದು.

ಸೊಳ್ಳೆ ಕಚ್ಚಿದ 3-14 ದಿನಗಳ ಒಳಗೆ ಡೆಂಗ್ಯೂ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ತೀವ್ರ ಜ್ಞರದೊಂದಿಗೆ ಆರಂಭಗೊಳ್ಳುವ ಸಮಸ್ಯೆ ನಂತರ ಬೇರೆ ಬೇರೆ ಲಕ್ಷಣಗಳಿಂದ ರೋಗ ಉಲ್ಬಣಗೊಳ್ಳುತ್ತದೆ. ಮಳೆಗಾಲದಲ್ಲಿ ಹೆಚ್ಚು ಸೊಳ್ಳೆಗಳು ಉತ್ಪತ್ತಿ ಆಗುವುದರಿಂದ ಯಾವುದೇ ರೀತಿಯ ಜ್ವರ ಕಂಡುಬಂದಲ್ಲಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

ಡೆಂಗ್ಯೂ ರೋದ ಲಕ್ಷಣಗಳು -ಹೆಚ್ಚಿನ ಜ್ವರ-ತೀವ್ರ ತಲೆನೋವು-ಕಣ್ಣುಗಳ ಹಿಂದೆ ನೋವು-ವಾಂತಿ ಮತ್ತು ವಾಕರಿಕೆಯ ಭಾವನೆ-ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು.

ಕೂಲರ್ ಗಳು ಮತ್ತು ಇತರ ಸಣ್ಣ ಕಂಟೇನರ್ ಗಳಿಂದ (ಪ್ಲಾಸ್ಟಿಕ್ ಕಂಟೇನರ್ ಗಳು, ಬಕೆಟ್ ಗಳು, ಬಳಸಿದ ಆಟೋಮೊಬೈಲ್ ಟೈರ್ ಗಳು, ವಾಟರ್ ಕೂಲರ್ ಗಳು, ಪೆಟ್ ವಾಟರ್ ಕಂಟೇನರ್ ಗಳು ಮತ್ತು ಹೂವಿನ ಕುಂಡಗಳಲ್ಲಿ ,ಮತ್ತು ತೆಂಗಿನ ಚಿಪ್ಪುಗಳಲ್ಲಿ, ಮನೆಯಲ್ಲಿನ ನೀರಿನ ತೊಟ್ಟಿ ಹಾಗೂ ಡ್ರಮ್) ನೀರನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಬೇಕು.

ನೀರು ಶೇಖರಣಾ ಪಾತ್ರೆಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು. ಸೊಳ್ಳೆಗಳ ಕಡಿತವನ್ನು ತಡೆಯಲು ಹಗಲಿನಲ್ಲಿ ಏರೋಸಾಲ್ ಅನ್ನು ಬಳಸಬಹುದು. ಪ್ರಸರಣ ಕಾಲದಲ್ಲಿ (ಮಳೆಗಾಲದಲ್ಲಿ) ಜನರು ತಮ್ಮ ಕೈಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಬೇಕು. -ಹಗಲಿನಲ್ಲಿ ಮಲಗುವಾಗ ಸೊಳ್ಳೆ ಪರದೆಗಳು ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಬಹುದು.

ಡೆಂಗ್ಯೂ ರೋಗಕ್ಕೆ ಚಿಕಿತ್ಸೆಗಳು ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಜನರು ವಿಶ್ರಾಂತಿ ಪಡೆಯುವುದು ಮೊದಲ ಆದ್ಯತೆ ಆಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್ ಕುಡಿಯಬೇಕು. ಅವರು ಜ್ವರ ಮತ್ತು ದೇಹದ ನೋವಿಗೆ ಮಾತ್ರೆ ತೆಗೆದುಕೊಳ್ಳಬಹುದು ಮೇಲ್ಕಂಡ ರೋಗಲಕ್ಷಣಗಳು ತೀವ್ರವಾಗಿದ್ದರೆ ಹತ್ತೀರ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು