ಮಂಗಳೂರು: ಉರ್ವ ಚಿಲಿಂಬಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ಮಾ.29ರಂದು ಆರಂಭಗೊಂಡಿತು. ಬೆಳಗ್ಗೆ 6..5ರಿಂದ ಕಾಕಡ ಆರತಿಯೊಂದಿಗೆ ಶ್ರೀ ರಾಮನವಮಿ ಪೂಜಾ ವಿಧಿವಿಧಾನಗಳು ಆರಂಭಗೊಂಡಿತು. ವಿದ್ವಾನ್ ಅರವಿಂದ ಭಟ್ ನೇತೃತ್ವದಲ್ಲಿ ಋತ್ವಿಜರು ವಿವಿಧ ಹೋಮ ಹವನಾದಿಗಳನ್ನು ನಡೆಸಿದರು. ಮಂದಿರವನ್ನು ವಿಶೇಷ ಪರ್ವ ಹಿನ್ನಲೆಯಲ್ಲಿ ಅಲಂಕಾರಗೊಳಿಸಲಾಗಿತ್ತು. ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸಕುಮಾರ್ ದಾಸ್ ಸೇರಿದಂತೆ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.
ಉರ್ವ ಚಿಲಿಂಬಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಂಭ್ರಮದ ರಾಮನವಮಿ ಉತ್ಸವ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.