NewsKarnataka
Thursday, January 27 2022

ಸಮುದಾಯ

ಇತಿಹಾದ್ ಬಿಸ್ಮಿ ರಿಯಾದ್ ವತಿಯಿಂದ ಅಲ್ಲಸಂಖ್ಯಾತರ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಬಿಸ್ಮಿ ಬಜ್ಪೆ ರಿಯಾದ್ ವತಿಯಿಂದ 2021 ಕುಟುಂಬ ಸಮ್ಮಿಲನ ಕಾರ್ಯಕ್ರಮವು ಡಿಸಂಬರ್ 2 ರಂದು ರಿಯಾದಿನ ಸಪ್ವಾ ರೆಸಾರ್ಟ್ ನಲ್ಲಿ  ನಡೆಯಿತು. ಆನಿವಾಸಿ ಕುಟುಂಬಗಳ ಆಶಾಕಿರಣವಾದ ಬಿಸ್ಮಿ ಬಜ್ಪೆ ಕಾರ್ಯಕ್ರಮವು ಬಜ್ಪೆ ಸುತ್ತಮುತ್ತಲಿನ ಅಲ್ಪಸಂಖ್ಯಾತರ ಇತಿಹಾದ್ ಬಿಸ್ಮಿ
ರಿಯಾದ್ ಇದರ ಅಧ್ಯಕ್ಷರಾದ ಇರ್ಷಾದ್ ಮೊಯ್ದಿನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ
ಸಂಘಟನೆಯ ಮಹತ್ವವನ್ನು ಹಾಗೂ ಬಜ್ಪೆ ಸುತ್ತಮುತ್ತಲಿನ ಅಲ್ಪಸಂಖ್ಯಾತರ ಇತಿಹಾದ್ ನ ಸಮಾಜ ಸೇವೆಯನ್ನು ವಿವರಿಸಿದರು.
ಬಿಸ್ಮಿ ಸಲಹೆಗಾರರಾದ ಅಜೀಜ್ ಬಂಕಲ್ ರವರು ತಮ್ಮ ಸಂಘಟನೆಯ ಚಟುವಟಿಕೆಗಳನ್ನು ಸವಿವರವಾಗಿ ವರ ಮಂಡಿಸಿದರು.
ವೇದಿಕೆಯಲ್ಲಿ ಸೆಯ್ಯದ್ ಬಾವಾ ಬಂಕಲ್ ಅಧ್ಯಕರು ಬಾಮಾ ಬಂಕಲ್ ,ಬಜ್ಪೆಯ ವಿಶೇಷ ಸಂದರ್ಶಕರಾದ ಮೊಯ್ದಿನ್ ಫಕ್ರುದ್ದೀನ್
ಹಾಗೂ ಮಹಮ್ಮದ್ ಅಲಿ ದೇರಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ರೈಸ್ಕೋ ರವರಿಗೆ ಬಿಸ್ಮಿ ಅಧ್ಯಕ್ಷರಾದ ಇರ್ಷಾದ್ ಮೊಯ್ದಿನ್ ರವರು ಸ್ಮರಣೆಕೆ
ನೀಡಿದರು,ಉಪಾಧ್ಯಕ್ಷರಾದ ಖಾಲಿದ್ ಕಂಚಿ ರವರು ಎಕ್ಸ್ಪರ್ಟೈಸ್ ಜುಬೈಲ್ ರವರಿಗೆ ಸ್ಮರಣೆಕೆ ನೀಡಿದರು,ಬಿಸ್ಮಿ ಉಪಾಧ್ಯಕ್ಷರಾದ
ಹರ್ಷದ್ ಅಯ್ಯೂಬ್ ರವರು ಅಲ್ಮುಝೈನ್ ರವರಿಗೆ ಸ್ಮರಣೆಕೆ ನೀಡಿ ಗೌರವಿಸಿದರು. ಬಿಸ್ಮಿ ಖಜಾಂಜಿಯಾದ ಅಲಿರವರು ಅಬ್ದುಲ್ಲಾ
ಮೊಹಮ್ಮದ್ ಅಲ್ ಸೈಖ್ ರವರಿಗೆ ಸ್ಮರಣೆಕೆಯನ್ನು ನೀಡಿದರು,ಬಿಸ್ಮಿ ಸಮಿತಿಯ ಸದಸ್ಯರಾದ ತೌಸೀಫ್ ಮೊಯ್ದಿನ್ ರವರು ಗಲ್ಪ್
ವೆಸ್ಟ್ ಕಂಪನಿಗೆ ಸ್ಮರಣೆಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮೆಕ್ ಡೊನಾಲ್ಡ್ ತಂಡವು ಮಕ್ಕಳಿಗೆ ಉಚಿತ ಊಟದ ಕೂಪನ್ ಹಾಗೂ ಉಡುಗರೆಗಳನ್ನು ನೀಡಿತು.ಅಲ್ಲದೇ
ಡ್ಯುರತ್ ಲಾಮರ್ ಮೆಡಿಕಲ್ ಕಂಪನಿಯಿಂದ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.

ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುರುಷರಿಗಾಗಿ ಹಗ್ಗಜಗ್ಗಾಟ ,ವಾಲಿಬಾಲ್ ,ಮಡಕೆ ಒಡೆಯುವುದು
ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಬಂಕಲ್ ಸ್ಪೋರ್ಟ್ಸ್ ಪ್ರಥಮ ಸ್ಥಾನವನ್ನು
ಗಳಿಸಿದರೆ ವಲಯಾ ಗೈಸ್ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಬಂಟ್ವಾಳ
ತಂಡವು ಪ್ರಥಮ ಸ್ಥಾನವಾದರೆ ದ್ವಿತೀಯ ಸ್ಥಾನವನ್ನು ದೀರ ಗೈಸ್ ತಮ್ಮದಾಗಿಸಿಕೊಂಡಿತು.

ಬಿಸ್ಮಿ ಬಜ್ಪೆ ರಿಯಾದ್ ನ ಪ್ರಧಾನ ಕಾರ್ಯದರ್ಶಿಯಾದ ಸಾಬಿತ್ ಬಜ್ಪೆ ರವರು ಅತಿಥಿಗಳನ್ನು ಸ್ವಾಗತಿಸಿದರು.ರಾಝಿಕ್ ಬಜ್ಪೆ
ಧನ್ಯವಾದಗಳನ್ನು ಪ್ರಸ್ತಾಪಿಸಿದರು. ಈ ಕಾರ್ಯಕ್ರಮ ಎಲ್ಲಾ ಕಾರ್ಯ ವೈಖರಿಯನ್ನು ಬಜ್ಪೆ ಮತ್ತು ಸುತ್ತಮುತ್ತಲಿನ ಜನರ
ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.