News Kannada
Friday, March 24 2023

ಸಮುದಾಯ

ಸಂತ ಆಂತೋನಿ ಆಶ್ರಮದಲ್ಲಿ ಫೆ. 22ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ

Photo Credit : News Kannada

ಮಂಗಳೂರು : ಸಂತ ಆಂತೋನಿ ಆಶ್ರಮ ಸ್ಥಾಪನೆಗೊಂಡು ಜೂನ್ ತಿಂಗಳಲ್ಲಿ 124 ವರ್ಷ ಪೂರೈಸಿ 125 ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸುಸಂದರ್ಭದಲ್ಲಿ ಆಶ್ರಮವು ಕಳೆದ 124 ವರ್ಷಗಳಲ್ಲಿ ಸಮಾಜದ ತೀರ ನಿರ್ಗತಿಕರಿಗೆ ಸಲ್ಲಿಸಿದ ಸೇವೆಯ ಸ್ಮರಣಾರ್ಥ ಸಾಮೂಹಿಕ ವಿವಾಹವನ್ನು ಆಯೋಜಿಸಿದೆ.

ಈ ವಿವಾಹವು ಫೆಬ್ರವರಿ ತಿಂಗಳ 22 ರಂದು ಆಶ್ರಮದಲ್ಲಿ ಜರಗಲಿರುವುದು. ಒಟ್ಟು 20 ಜೋಡಿದಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಸಾಮಾನ್ಯವಾಗಿ ನವ ದಂಪತಿಗಳು ಮದುವೆಯ ಸಮಯದಲ್ಲಿ ಸಾಲ ಪಡೆದು ಮದುವೆ ಆಗುತ್ತಾರೆ. ಮತ್ತು ಸಾಲ ತೀರಿಸಲಾರದೆ ಸಾಲದ ಹೊರೆಯಲ್ಲೇ ಮುಳುಗಿರುತ್ತಾರೆ. ಈ ಸಾಲದ ಹೊರೆ ಇಲ್ಲದೆ ಸಮಾಧಾನದಿಂದ ಕುಟುಂಬ ಜೀವನ ಆರಂಭಿಸಲು ಈ ಸಾಮೂಹಿಕ ವಿವಾಹ ಸಹಕಾರಿಯಾಗಲಿದೆ.

ಆಶ್ರಮವು ಪ್ರತಿಯೊಂದು ವಧು-ವರರಿಗೆ ಮದುವೆಯ ಉಂಗುರ, ವಧುವಿಗೆ ಮದುವೆಯ ಸೀರೆ ಮತ್ತು ತಾಳಿ, ವರನಿಗೆ ಪ್ಯಾಂಟ್ ಮತ್ತು ಶರ್ಟ್, ಹಾಗೂ ನವ ದಂಪತಿಗಳಿಗೆ ದಿನ ನಿತ್ಯ ಬಳಕೆಗೆ ಉಪಯೋಗವಾಗಲಿರುವ ರೂ. 15,000 ಮೌಲ್ಯದ ವಸ್ತುಗಳನ್ನು ನೀಡಲಿದೆ. ಪ್ರತಿ ವರ ಮತ್ತು ವಧು ತಮ್ಮ ಕಡೆಯಿಂದ 30 ಜನರನ್ನು ಮದುವೆಯ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವಕಾಶ ಇದೆ, ಶಿಮೊಗ್ಗದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊರವರು ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ. ಮಾಜಿ ಶಾಸಕರಾದ ಶ್ರೀ ಜೆ. ಆರ್ . ಲೋಬೊರವರು ನವ ದಂಪತಿಗಳಿಗೆ ಶುಭಕೋರಿಲಿದ್ದಾರೆ.

See also  ತುಳು ಕೊಡವ ಭಾಷೆಗಳ ಅಳಿವು ಉಳಿವು ಪುಸ್ತಕ ಜ. 21 ರಂದು ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು